ಮಠಾಧೀಶರ ಹುಟ್ಟೂರು ಅಭಿವೃದ್ಧಿ

ರಾಜ್ಯದ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 20 ಪ್ರಮುಖ ತಾಣಗಳ ಸಮಗ್ರ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿಗಳು ಸಿದ್ಧವಾಗಿವೆ. ಇವುಗಳನ್ನು ಹಂತ ಹಂತವಾಗಿ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿನೆ ನೀಡಿದರು. ಹಾಗೆಯೇ ಶಿವಕುಮಾರ ಸ್ವಾಮೀಜಿಯವರ ಹುಟ್ಟೂರು ವೀರಾಪುರ ಗ್ರಾಮ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿಗಳ ಜನ್ಮಸ್ಥಳವಾದ ಬಾನಂದೂರು ಗ್ರಾಮಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸಾಂಸ್ಕೃತಿಕ ಮತ್ತು ಪಾರಂಪರಿಕ ಕೇಂದ್ರದ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಅಧಿಕಾರಿಗಳಿಗೆ ಹೇಳಿದರು. ಹಾಗೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

 

Please follow and like us:

Leave a Reply

Your email address will not be published. Required fields are marked *

Next Post

ಮರಿ ಆನೆ ಹಾಲು ಕುಡಿದ ವಿಡಿಯೋ ವೈರಲ್

Fri Jun 12 , 2020
ಈಗ ಎಲ್ಲೆಲ್ಲೂ ಆನೆಯದ್ದೇ ಸುದ್ದಿ. ಕೇರಳದಲ್ಲಿ ಸಿಡಿಮದ್ದು ಇದ್ದ ಹಣ್ಣು ತಿಂದು ಗರ್ಭಿಣಿ ಆನೆ ಮೃತಪಟ್ಟಿದ್ದ ಬೆನ್ನಲ್ಲೇ ಅನೇಕ ಆನೆಗಳ ಹತ್ಯೆ ಬಗ್ಗೆ ವರದಿಯಾಗುತ್ತಲೇ ಇದೆ. ಈ ಕಾರಣಕ್ಕೆ ಆನೆ ಎಂದರೆ ನೋವಿನ ಸಂಗತಿಗಳೇ ನೆನಪಾಗುತ್ತವೆ. ಇದೆಲ್ಲದರ  ನಡುವೆಯೇ, ಮುದ್ದುಮುದ್ದಾದ ಆನೆ ಮರಿಯೊಂದು  ಓಡಿಬಂದು ಬಾಟಲಿ ಹಾಲನ್ನು ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ, ಅಮ್ಮನನ್ನು ಕಳೆದುಕೊಂಡಿರುವ ಈ ಮರಿ ಆನೆ ಇರುವುದು ಕೀನ್ಯಾದ ಶೆಲ್ಡ್ರಿಕ್ ವೈಲ್ಡ್​ಲೈಫ್​ ಸೆಂಚುರಿಯಲ್ಲಿ, ಇದಕ್ಕೆ […]

Advertisement

Wordpress Social Share Plugin powered by Ultimatelysocial