ಮದ್ಯದಿಂದ ಕೊರೊನಾ ವೈರಸ್ ಹೋಗುತ್ತೆ: ಕಾಂಗ್ರೆಸ್ ಶಾಸಕ

ಮದ್ಯ ಪ್ರಿಯರಿಗಂತೂ ಲಾಕ್‌ಡೌನ್ ದೊಡ್ಡ ಸಂಕಷ್ಟ ತಂದಿಟ್ಟುಬಿಟ್ಟಿದೆ. ಆಲ್ಕೋಹಾಲ್ ಕೈಗೆ ಹಾಕಿ ಉಜ್ಜುವುದರಿಂದ ಕೊರೊನಾ ವೈರಸ್ ನಾಶವಾಗುವುದಾದರೆ ಅದನ್ನು ಕುಡಿದರೆ ವೈರಸ್ ಗಂಟಲಲ್ಲೇ ನಾಶವಾಗಬಹುದು ಮದ್ಯದ ಅಂಗಡಿ ತೆರೆಯಲು ಅವಕಾಶ ಕೊಡಿ ಎಂದು ರಾಜಸ್ಥಾನದ ಸಾಂಗೋದ್ ಶಾಸಕ ಭರತ್ ಸಿಂಗ್ ಸರ್ಕಾರಕ್ಕೆ ವಾದಿಸಿದ್ದಾರೆ.  ಮದ್ಯ ಮಾರಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮತಿ ನೀಡದ ಹಿನ್ನಲೆಯಲ್ಲಿ ಅಕ್ರಮ ಮದ್ಯ ತಯಾರಿಕೆ, ಮಾರಟಕ್ಕೆ ಅವಕಾಶ ನೀಡಿದಂತಾಗುತ್ತದೆ. ಅಕ್ರಮ ಮದ್ಯವು ಜನರನ್ನು ಕೊಲ್ಲುತ್ತದೆ ಅಲ್ಲದೆ ವೈನ್‌ಶಾಪ್‌ಗಳು ಮುಚ್ಚಿರುವುದರಿಂದ ಸರ್ಕಾರದ ಆದಾಯದ ಬೆನ್ನೆಲುಬೇ ಮುರಿದಂತಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕ್ವಾರಂಟೈನ್ ನಲ್ಲೂ ಬೆಳಗಿದ ಜ್ಞಾನ ದೇಗುಲ

Fri May 1 , 2020
ಪಾಟ್ನಾ:ಬಿಹಾರದ ಬಾಗಾಹಾದ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿರುವ ವಲಸೆ ಕಾರ್ಮಿಕರು ಶಾಲೆಗೆ ಬಣ್ಣ ಬಳಿದು, ಚಿತ್ರ ಬಿಡಿಸಿ ಸುಂದರವಾಗಿಸಿದ್ದಾರೆ. ನೇಪಾಳದಿಂದ ಹಿಂದಿರುಗಿದ ರಾಂಪುರ್ವಾ ಪಂಚಾಯತ್‌ನ ಲಕ್ಷ್ಮಿಪುರ ಸರ್ಕಾರಿ ಮಧ್ಯಮ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿರುವ ಸುಮಾರು ೫೨ ಕಾರ್ಮಿಕರು ತಮ್ಮ ಬಿಡುವಿನ ವೇಳೆಯಲ್ಲಿ ಬಣ್ಣ ಬಳಿಯುವ ಮೂಲಕ ಶಾಲೆಯನ್ನು ನವೀಕರಿಸಿದ್ದಾರೆ. ಸಾಮಾಜಿಕ ಅಂತರ ಪಾಲಿಸೊಕೊಂಡೇ, ಕಾರ್ಮಿಕರು ಕ್ಯಾಂಪಸ್ ಹಾಗೂ ಆಟದ ಮೈದಾನವನ್ನು ಸ್ವಚ್ಛಗೊಳಿಸಿ, ಶಾಲೆಯ ಆವರಣದಲ್ಲಿ ತರಕಾರಿ ಮತ್ತು ಹೂವಿನ ಗಿಡಗಳನ್ನು ನೆಟ್ಟಿದ್ದಾರೆ. ಬಳಿಕ ಶಾಲೆಯ […]

Advertisement

Wordpress Social Share Plugin powered by Ultimatelysocial