ಮದ್ಯಪಾನ ನಿಷೇಧಿಸುವುದು ಅತ್ಯವಶ್ಯಕ :ಹೆಚ್ ಕೆ ಪಾಟೀಲ್

ಲಾಕ್​ಡೌನ್ ಹಿನ್ನೆಲೆ ಮದ್ಯ ಮಾರಾಟ 48 ದಿನಗಳಿಂದ ನಿಂತಿದೆ. ಅಮಲು ಮುಕ್ತ ಸಮಾಜದತ್ತ ಅರಿವಿಲ್ಲದೆ ದಾಪುಗಾಲಿಡುತ್ತಿದ್ವೆದೇವೆ ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದಾರೆ. ಜನರ ಸಂಕಷ್ಟ ಕುರಿತು ಸಿಎಂಗೆ ಪತ್ರ ಬರೆದ ಅವರು, ಇದೇ ಅವಕಾಶ ಬಳಸಿ ರಾಜ್ಯದಲ್ಲಿ ಪೂರ್ಣ ಮದ್ಯಪಾನ ನಿಷೇಧ ಜಾರಿಗೆ ತನ್ನಿ. ಮದ್ಯಪಾನವನ್ನು ಚಟವಾಗಿ ಮಾಡಿಕೊಂಡವರು ಸ್ವಲ್ಪ‌‌‌ ದಿನ ಕಷ್ಟಪಟ್ಟರೂ ಇದೀಗ ಸಾರಾಯಿ ಇಲ್ಲದೆ ಬದುಕುತ್ತಿದ್ದಾರೆ. ಅಮಲು ಮುಕ್ತ ಸಮಾಜದತ್ತ ಅರಿವಿಲ್ಲದೆ ದಾಪುಗಾಲಿಡುತ್ತಿದ್ದು, ಇದರಿಂದ ಅನೇಕ ಲಾಭಗಳಾಗುತ್ತಿವೆ. ಮದ್ಯಪಾನದಿಂದ ಆಲಸ್ಯ, ಅಧಿಕಾರ ದುರುಪಯೋಗ, ಜಗಳ, ಭ್ರಷ್ಟಾಚಾರ, ಅಶಾಂತಿ ವಾತಾವರಣ ಸೃಷ್ಟಿಯಾಗುತ್ತದೆ. ಇದನ್ನು ನಿಷೇಧಿಸುವುದು ಅತ್ಯವಶ್ಯಕ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಮದ್ಯಪಾನ ನಿಷೇಧದಿಂದ‌ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತದೆ ಎಂದು ಹಲವರು ವಾದಿಸುತ್ತಾರೆ. ಆದರೆ, ಮದ್ಯಪಾನ ನಿಷೇಧದಿಂದ ಕೌಟುಂಬಿಕ ನೆಮ್ಮದಿ ಹೆಚ್ಚಿ, ಮಕ್ಕಳು ಉತ್ತಮ ಸಂಸ್ಕಾರ ಪಡೆಯುತ್ತಾರೆ, ಮಹಿಳೆಯರ ಶೋಷಣೆ ತಪ್ಪುತ್ತದೆ. ಈ ಶಾಂತಿ, ನೆಮ್ಮದಿಯು ಹಣ ಕೊಟ್ಟರೂ ಬರುವುದಿಲ್ಲ ಎಂಬುದನ್ನು ತಾವೂ ಒಪ್ಪುತ್ತೀರಿ. ಮದ್ಯಪಾನ ನಿಷೇಧ ಕಠಿಣ ಕೆಲಸ. ಆದರೆ, ಶ್ರೇಷ್ಠ ಕೆಲಸ. ಪ್ರಕೃತಿ ಸೃಷ್ಟಿಸಿರುವ ಈ ಪರಿಸ್ಥಿತಿಯ ಪ್ರಯೋಜನ ಪಡೆದು ದೃಢ ಸಂಕಲ್ಪದಿಂದ ಮದ್ಯಪಾನ ನಿಷೇಧಿಸಿ ಎಂದು ಸಿಎಂಗೆ ಪತ್ರದ ಮುಖಾಂತರ ಒತ್ತಾಯಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸೈಕಲ್ ಮೇಲೆ ನವ ಜೋಡಿಗಳ ಸವಾರಿ

Fri May 1 , 2020
ಮೀರ್ ಪುರ್: ಕೊರೋನಾ ಲಾಕ್ ಡೌನ್ ದೇಶಾದ್ಯಂತ ಹಲವು ಸಂಕಷ್ಟಗಳನ್ನು ಸೃಷ್ಟಿಸಿದ್ದು, ಈ ಸಂಕಷ್ಟದ ನಡುವೆಯೇ ಉತ್ತರ ಪ್ರದೇಶದಲ್ಲಿ 23 ವರ್ಷದ ಯುವಕನೊಬ್ಬ ತಾನು 100 ಕಿ.ಮೀ. ಪ್ರಯಾಣಿಸಬೇಕಾದ ಅನಿವಾರ್ಯತೆ ಇದ್ದರೂ ಮದುವೆ ದಿನಾಂಕ ಬದಲಿಸದೇ ಒಬ್ಬಂಟಿಯಾಗಿ 100 ಕಿ.ಮೀ. ಸೈಕಲ್ ತುಳಿದು ತಾನು ಮದುವೆ ಯಾಗಬೇಕಾಗಿರುವ ಹುಡುಗಿಯ ಮನೆ ತಲುಪಿದ್ದಾನೆ. ಉತ್ತರ ಪ್ರದೇಶದ ಹಮೀರ್‌ಪುರ್ ಜಿಲ್ಲೆಯ ಪೌಥಿಯಾ ಗ್ರಾಮದ ಕಲ್ಕು ಪ್ರಜಾಪತಿ ಅವರು, ಏಪ್ರಿಲ್ 25 ರಂದು ತಮ್ಮ ಮದುವೆಗೆ […]

Advertisement

Wordpress Social Share Plugin powered by Ultimatelysocial