ಮಧ್ಯಪ್ರದೇಶ: ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಕಳ್ಳತನವಾಗುವ ಸಾಧ್ಯತೆ ಇದೆ ಎಂದು ನೀರು ಸಂಗ್ರಹಿಸಿರುವ ಡ್ರಮ್ಗೆ ಗ್ರಾಮಸ್ಥರು ಬೀಗ ಹಾಕುತ್ತಿದ್ದಾರೆ. ಪ್ರತೀ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಈ ಭಾಗದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ. ಈ ವರ್ಷ ಕೂಡ ನೀರಿನ ಸಮಸ್ಯೆ ಎಂದುರಾಗಿದೆ. ಈ ಬಗ್ಗೆ ಮಾತನಾಡಿರುವ ಸ್ಥಳೀಯ ನಿವಾಸಿ, ಪಂಚಾಯಿತಿ ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದ್ದರಿಂದ ಕೆಲವೊಮ್ಮೆ ನೀರನ್ನು ಕದಿಯಲಾಗುತ್ತದೆ. ಹೀಗಾಗಿ ನಾವು ಬೀಗ ಹಾಕುತ್ತಿದ್ದೇವೆ. ಈ ನೀರನ್ನು 3 ಕಿ.ಮೀ. ದೂರದಿಂದ ತಂದು ಸಂಗ್ರಹಿಸಿದ್ದೇವೆ ಎಂದಿದ್ದಾರೆ.ಈ ಬಗ್ಗೆ ಮಾತನಾಡಿರುವ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ ಅಧಿಕಾರಿ, ಪವರ್ ಪಂಪ್ ಮತ್ತು ಹ್ಯಾಂಡ್ ಪಂಪ್ಅನ್ನು ಗ್ರಾಮದಲ್ಲಿ ಅಳವಡಿಸಿದ್ದೇವೆ. ಜಲ್ ಜೀವನ್ ಮಿಷನ್ ಅಡಿಯಲ್ಲಿ ಹಲವು ವ್ಯವಸ್ಥೆಗಳನ್ನು ಮಾಡುತ್ತೇವೆ. ಬೇಸಿಗೆಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತದೆ. ಆದ್ದರಿಂದ ಇಂತಹ ಸಮಸ್ಯೆ ಎದುರಾಗಿದೆ. ಹ್ಯಾಂಡ್ ಪಂಪ್ಗಳು ಕಾರ್ಯನಿರ್ವಹಿಸದಿದ್ದರೆ ಅವುಗಳನ್ನು ಸರಿಪಡಿಸುತ್ತೇವೆ ಎಂದಿದ್ದಾರೆ.