ಮಹಾರಾಷ್ಟ್ರದಲ್ಲಿ ಒಂದೇ ದಿನಕ್ಕೆ ೭೭೮ ಮಂದಿಯಲ್ಲಿ ಸೋಂಕು

ಮುಂಬೈ : ದೇಶಾದ್ಯಂತ ಮಾರಕ ಕೊರೊನಾ ಸೋಂಕು ತಲ್ಲಣ ಸೃಷ್ಟಿಸಿದ್ದು, ಜನತೆ ಆತಂಕಗೊಂಡಿದ್ದಾರೆ. ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ ೨೩ ಸಾವಿರ ಗಡಿದಾಟಿದೆ. ಸೋಂಕಿತರ ಸಂಖ್ಯೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ೨೪ ಗಂಟೆಯಲ್ಲಿ ೭೭೮ ಮಂದಿಯಲ್ಲಿ ಮಾರಕ ಸೋಂಕು ದೃಢಪಟ್ಟಿದ್ದು, ಇನ್ನಷ್ಟು ಭೀತಿ ಎದುರಾಗಿದೆ. ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಳೆದ ೨೪ ಗಂಟೆಯಲ್ಲಿ ೭೭೮ ಮಂದಿಯಲ್ಲಿ ಮಾರಕ ಸೋಂಕು ಪಾಸಿಟಿವ್ ಬಂದಿದೆ. ಇನ್ನು ೧೪ ಮಂದಿ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಈವರೆಗೆ ಸೋಂಕುಪೀಡಿತರ ಸಂಖ್ಯೆ ೬೪೨೭ಕ್ಕೆ ಏರಿಕೆಯಾಗಿದ್ದು, ಡೆಡ್ಲಿ ಕೊರೊನಾಗೆ ೨೮೩ ಮಂದಿ ಬಲಿಯಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಇ-ಗ್ರಾಮ್ ಸ್ವರಾಜ್ ಮೊಬೈಲ್ ಆಯಪ್ ಬಿಡುಗಡೆ

Fri Apr 24 , 2020
ನವದೆಹಲಿ : ಇಂದು ಪಂಚಾಯತ್ ರಾಜ್ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಹಿನ್ನೆಲೆಯಲ್ಲಿ ಇ-ಗ್ರಾಮ್ ಸ್ವರಾಜ್ ಮೊಬೈಲ್ ಆಯಪ್ ನ್ನು ಬಿಡುಗಡೆಗೊಳಿಸಿದರು.ಪಂಚಾಯತ್ ರಾಜ್ ದಿನಾಚರಣೆ ಅಂಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ದೇಶದ ಗ್ರಾಮ ಪಂಚಾಯತ್ ಗಳ ಮುಖಂಡರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಂವಾದ ನಡೆಸಿದರು. ಇದೇ ವೇಳೆ, ಗ್ರಾಮಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಿದ್ದಪಡಿಸಿರುವ ಇ-ಗ್ರಾಮ್ ಸ್ವರಾಜ್ ಮೊಬೈಲ್ ಆಯಪ್ ಹಾಗೂ ಸ್ವಮಿತ್ವ ಯೋಜನೆಗಳಿಗೆ ಚಾಲನೆ […]

Advertisement

Wordpress Social Share Plugin powered by Ultimatelysocial