ಮಾಸ್ಕ್ ಧರಿಸದೆ ಸುತ್ತಾಡುವ ಜನರಿಗೆ ತಲಾ ೧೦೦ ರೂ. ದಂಡ

ಚಿಕ್ಕೋಡಿ ಪುರಸಭೆಯ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೆ ಸುತ್ತಾಡುವ ಜನರಿಗೆ ತಲಾ 100 ರೂ. ದಂಡ ವಿಧಿಸಲಾಗುತ್ತಿದೆ. ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಮಾಸ್ಕ್ ಹಾಕದೆ ಅಲೆದಾಡುವ ಜನರಿಗೆ ಪುರಸಭೆ ಹಾಗೂ ಪೊಲೀಸ್ ಇಲಾಖೆಯ ಸಹಕಾರದಿಂದ ಮಾಸ್ಕ್ ಹಾಕದೆ ಓಡಾಡುತ್ತಿರುವವರಿಗೆ ತಲಾ 100 ರೂ. ದಂಡವನ್ನು ವಿಧಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಸುಂದರ್ ರೋಗಿರವರು ಮಾತನಾಡಿ ಕೊರೊನಾ ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮತ್ತು ಜನರ ಆರೋಗ್ಯದ ಹಿತ ದೃಷ್ಟಿಯಿಂದ ಮಾಸ್ಕ್ ಹಾಕದೆ ಜನ ಅಡ್ಡಾಡಬಾರದೆಂದು ಮಾಸ್ಕ್ ಹಾಕದೆ ಓಡಾಡುತ್ತಿರುವ ತಲಾ  ಒಬ್ಬೊಬ್ಬರಿಗೆ ನೂರು ರೂಪಾಯಿ ದಂಡವನ್ನು ಹಾಕುತ್ತಿದ್ದೇವೆ. ದಂಡದ ಭಯದಿಂದ ಆದರೂ ಜನರು ಮಾಸ್ಟ್ ಹಾಕಿ ಹೊರಬರುವುದನ್ನು ರೂಡಿಸಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ರಾಷ್ಟ್ರೀಯ ಹಬ್ಬ ಉತ್ಸವವಾದ ಸಾರ್ವಜನಿಕ ಗಣೇಶೋತ್ಸವ  

Sun Jul 26 , 2020
ಶ್ರೀ ರಾಮಸೇನಾ ಹಿಂದೂಸ್ತಾನ ನಿಪ್ಪಾಣಿ ಪರವಾಗಿ, ನಮ್ಮ ರಾಷ್ಟ್ರೀಯ  ಹಬ್ಬಉತ್ಸವವಾದ  ಸಾರ್ವಜನಿಕ ಗಣೇಶೋತ್ಸವದ ಆಚರಣೆ ಮೇಲೆ ಸರ್ಕಾರ ವಿಧಿಸಿರುವ ನಿಷೇಧದ ವಿರುದ್ಧ ನಿಪ್ಪಾಣಿ ಮತ್ತು ಸುತ್ತಮುತ್ತಲಿನ ಪ್ರದೇಶದ ಎಲ್ಲಾ ಗಣೇಶ ತರುಣ ಮಂಡಳಿಗಳ ಸಭೆಯನ್ನು ನಡೆಸಲಾಯಿತು.ಈ ಸಭೆಯಲ್ಲಿ ಶ್ರೀ ರಾಮಸೇನ ಹಿಂದೂಸ್ತಾನ ಚಿಕ್ಕೋಡಿ ಜಿಲ್ಲಾಧ್ಯಕ್ಷ ಕರ್ನಾಟಕ ಸರ್ಕಾರ ವಿಧಿಸಿರುವ ಕಾನೂನು  ನಿಯಮಗಳನ್ನು ಅನುಸರಿಸಲು ಮತ್ತು ಗಣೇಶೋತ್ಸವವನ್ನು ಈ ವರ್ಷ ಸರಳ ರೀತಿಯಲ್ಲಿ ಹಬ್ಬ ಸುವ್ಯವಸ್ಥಿತ ಆಚರಿಸಲು  ಎಲ್ಲಾ ಮಂಡಳಿಗಳಿಗೆ ಸೂಚನೆ […]

Advertisement

Wordpress Social Share Plugin powered by Ultimatelysocial