ಯಸ್‌ ಬ್ಯಾಂಕ್‌ ತನ್ನ ನಿಶ್ಚಿತ ಅವಧಿಯ ಠೇವಣಿಗಳ ಬಡ್ಡಿ ದರಗಳನ್ನು ಏರಿಸಿದ್ದು

ನವ ದೆಹಲಿ: ಯಸ್‌ ಬ್ಯಾಂಕ್‌ ತನ್ನ ನಿಶ್ಚಿತ ಅವಧಿಯ ಠೇವಣಿಗಳ ಬಡ್ಡಿ ದರಗಳನ್ನು ಏರಿಸಿದ್ದು, (FD Interest rate hike) 0.25% ರಿಂದ 0.50% ತನಕ ಏರಿಸಿದೆ.

2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಪರಿಷ್ಕೃತ ಬಡ್ಡಿ ದರಗಳು ಅನ್ವಯವಾಗಲಿದೆ. ಫೆಬ್ರವರಿ 21ರಿಂದ ಪರಿಷ್ಕೃತ ಬಡ್ಡಿ ದರಗಳು ಜಾರಿಯಾಗಲಿದೆ.

ಸಾಮಾನ್ಯ ನಾಗರಿಕರಿಗೆ 15 ತಿಂಗಳಿನಿಂದ ೩೫ ತಿಂಗಳಿನ ಅವಧಿಯ ಠೇವಣಿಗೆ 7.50% ಬಡ್ಡಿ ದರ ಸಿಗಲಿದೆ. ಹಿರಿಯ ನಾಗರಿಕರಿಗೆ 8.00% ಬಡ್ಡಿ ದೊರೆಯಲಿದೆ.

ಸಾಮಾನ್ಯ ನಾಗರಿಕರಿಗೆ ೨೭೨ ದಿನಗಳಿಂದ 1 ವರ್ಷ ಅವಧಿಯ ಠೇವಣಿಗೆ 6.25% ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ 6.75% ಬಡ್ಡಿ ದೊರೆಯುತ್ತದೆ.

ಎಡಿಲ್‌ವೈಸ್‌ ಮ್ಯೂಚುವಲ್‌ ಫಂಡ್‌ನಿಂದ ಹೂಡಿಕೆ: ಯಸ್‌ ಬ್ಯಾಂಕ್‌ ಷೇರುಗಳ ದರ 2022ರ ಡಿಸೆಂಬರ್‌ನಲ್ಲಿ 24.75ರೂ.ಗೆ ಏರಿತ್ತು. ಈಗ 16.10 ರೂ.ಗೆ ತಗ್ಗಿದೆ. ಈ ನಡುವೆ ಜನವರಿಯಿಂದ ಯಸ್‌ ಬ್ಯಾಂಕ್‌ನಲ್ಲಿ ತನ್ನ ಷೇರು ಹೂಡಿಕೆಯನ್ನು ಹೆಚ್ಚಿಸಿದೆ. ಎಡಿಲ್‌ವೈಸ್‌ 2022ರ ಡಿಸೆಂಬರ್‌ನಲ್ಲಿ ಬ್ಯಾಂಕ್‌ನ 4,65,671 ಷೇರುಗಳನ್ನು ಹೊಂದಿತ್ತು. ಜನವರಿಯಲ್ಲಿ 4,84,135ಕ್ಕೆ ಏರಿಕೆಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ನಗರದ ನಮ್ಮ ಮೆಟ್ರೋ ನೇರಳೆ ಮಾರ್ಗದ ಪ್ರಯಾಣಿಕರಿಗೆ ಸಿಹಿಸುದ್ದಿ.

Thu Feb 23 , 2023
ನಗರದ ನಮ್ಮ ಮೆಟ್ರೋ ನೇರಳೆ ಮಾರ್ಗದ ಪ್ರಯಾಣಿಕರಿಗೆ ಸಿಹಿಸುದ್ದಿ. ಐಟಿ ಉದ್ಯೋಗಿಗಳು ವಾಣಿಜ್ಯ ಸಂಚಾರಕ್ಕಾಗಿ ಕಾಯುತ್ತಿರುವ ವೈಟ್‌ಫೀಲ್ಡ್-ಕೆ. ಆರ್. ಪುರ ನಮ್ಮ ಮೆಟ್ರೋ ಮಾರ್ಗದಲ್ಲಿ ಸಿಎಂಆರ್‌ಎಸ್ ಪರೀಕ್ಷೆಗಳು ಆರಂಭವಾಗಿದೆ. ಮಾರ್ಚ್‌ 15ರಿಂದ ಮಾರ್ಗದಲ್ಲಿ ರೈಲುಗಳ ವಾಣಿಜ್ಯ ಸಂಚಾರ ಆರಂಭವಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ನಮ್ಮ ಮೆಟ್ರೋ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡುವ ಮೊದಲು ಮೆಟ್ರೊ ರೈಲು ಸುರಕ್ಷತಾ ಆಯುಕ್ತರ ತಂಡವು (ಸಿಎಂಆರ್‌ಎಸ್‌) ಅಂತಿಮ ಹಂತದ ಪರಿಶೀಲನೆ ನಡೆಸಲಿದೆ. ಬುಧವಾರ ಬೆಂಗಳೂರು […]

Advertisement

Wordpress Social Share Plugin powered by Ultimatelysocial