ಯಾವುದೇ ಭಂಗವಿಲ್ಲದೆ ಸುಖಕರ ನಿದ್ದೆ ಮಾಡಲು ಹೀಗೆ ಮಾಡಿ

ಸರಿಯಾಗಿ ನಿದ್ರೆ ಆಗದಿದ್ದರೆ ದೇಹದ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಕೆಡುತ್ತದೆ. ಯಾವುದೇ ಕೆಲಸ ಮಾಡುವುದಕ್ಕೆ ಹುಮ್ಮಸ್ಸು ಇರುವುದಿಲ್ಲ.ಜತೆಗೆ ಉದಾಸೀನ ಕೂಡ ಕಾಡುತ್ತದೆ. ಒತ್ತಡದಿಂದಲೂ ಈ ನಿದ್ರೆಯ ಸಮಸ್ಯೆ ಕಾಡುತ್ತದೆ. ಆರೋಗ್ಯವಂತ ಮನುಷ್ಯನಿಗೆ ಸರಿಯಾಗಿ 8 ಗಂಟೆ ನಿದ್ದೆ ಅವಶ್ಯಕವಾಗಿರುತ್ತದೆ.ಹಾಗಾಗಿ ಸರಿಯಾಗಿ ನಿದ್ರೆ ಬರುವುದಕ್ಕೆ ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್.ಜತೆಗೆ ಉದಾಸೀನ ಕೂಡ ಕಾಡುತ್ತದೆ. ಒತ್ತಡದಿಂದಲೂ ಈ ನಿದ್ರೆಯ ಸಮಸ್ಯೆ ಕಾಡುತ್ತದೆ. ಆರೋಗ್ಯವಂತ ಮನುಷ್ಯನಿಗೆ ಸರಿಯಾಗಿ 8 ಗಂಟೆ ನಿದ್ದೆ ಅವಶ್ಯಕವಾಗಿರುತ್ತದೆ.ಹಾಗಾಗಿ ಸರಿಯಾಗಿ ನಿದ್ರೆ ಬರುವುದಕ್ಕೆ ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್.

*ಸರಿಯಾದ ಸಮಯಕ್ಕೆ ಏಳುವುದನ್ನು ರೂಢಿಮಾಡಿಕೊಳ್ಳಬೇಕು. ರಜಾದಿನ ಇದ್ದಾಗ ತಡವಾಗಿ ಏಳುವುದು ಉಳಿದ ದಿನ ಬೇಗ ಏಳುವುದು ಈ ರೀತಿ ಮಾಡಬೇಡಿ. ಒಂದೇ ಸಮಯಕ್ಕೆ ಏಳುವುದನ್ನು ಅಭ್ಯಾಸ ಮಾಡಿಕೊಂಡರೆ ನಿದ್ರಾಹೀನತೆ ಸಮಸ್ಯೆಯಿಂದ ಪಾರಾಗಬಹುದು.

*ಇನ್ನು ಟೀ, ಕಾಫಿ ಸೇವನೆ ಕಡಿಮೆ ಮಾಡಿ. ಕೆಲಸ ಮಾಡುವಾಗ ನಿದ್ರೆ ಬರದಂತೆ ತಡೆಯಲು, ಇನ್ನು ಕೆಲವರು ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಅತೀಯಾಗಿ ಟೀ, ಕಾಫಿ ಸೇವನೆ ಮಾಡುತ್ತಾರೆ. ಇದರಿಂದ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ. ಜ್ಯೂಸ್, ಬಿಸಿ ನೀರು ಇಂತಹವುಗಳನ್ನು ಹೆಚ್ಚು ಸೇವಿಸಿ. ಇದರಿಂದ ದೇಹದ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ.

*ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ದೇಹದ ಮಾಂಸಖಂಡಗಳು, ನರಗಳು ಚೆನ್ನಾಗಿ ಕೆಲಸ ನಿರ್ವಹಿಸಿದರೆ ನಿದ್ರೆಯ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಮಲಗುವುದಕ್ಕೆ 3 ಗಂಟೆ ಮೊದಲೇ ವ್ಯಾಯಾಮದಂತಹ ಚಟುವಟಿಕೆ ಮಾಡಿ. ವ್ಯಾಯಾಮ ಮಾಡಿದ ತಕ್ಷಣವೇ ಮಲಗಬೇಡಿ.

*ಇನ್ನು ತಡವಾಗಿ ಮಲಗುವುದು, ಬೆಡ್ ರೂಮನಲ್ಲಿ ಮೊಬೈಲ್, ಟಿವಿಯನ್ನು ನೋಡುವುದು ಇದರಿಂದ ಕೂಡ ನಿದ್ರೆಯ ಸಮಸ್ಯೆ ತಲೆದೂರುತ್ತದೆ. ಫೋನ್ ಅನ್ನು ಸಾಧ್ಯವಾದಷ್ಟು ಬೆಡ್ ರೂಂನಿಂದ ದೂರವಿಡಿ. ಮಲಗುವಾಗ ಯಾವುದೇ ಅಡೆತಡೆಗಳು ಇರದಂತೆ ಎಚ್ಚರ ವಹಿಸಿ.

*ಊಟ ಮಾಡಿದ ತಕ್ಷಣ ಮಲಗುವುದು, ಅಥವಾ ನೀರು ಕುಡಿದ ತಕ್ಷಣ ಮಲಗುವುದು ಮಾಡಬೇಡಿ. ಇದು ನಿಮ್ಮ ಜೀರ್ಣಕ್ರೀಯೆ ಸಮಸ್ಯೆಗೆ ತೊಂದರೆಯನ್ನುಂಟು ಮಾಡುತ್ತದೆ. ಜಾಸ್ತಿ ನೀರು ಕುಡಿದು ಮಲಗುವುದರಿಂದ ಪದೇಪದೇ ಬಾತ್ ರೂಂ ಗೆ ಹೋಗಬೇಕಾಗುತ್ತದೆ. ಇದರಿಂದ ನಿದ್ರೆಗೆ ಭಂಗ ಬರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸದಿಲ್ಲಿ: ಅಜ್ಜಂದಿರು ಧೂಮಪಾನಿಗಳಾಗಿದ್ದರೆ ಮೊಮ್ಮಕ್ಕಳಿಗೂ ತೊಂದರೆ: ನೂತನ ಅಧ್ಯಯನದಿಂದ ಬಹಿರಂಗ !

Sat Jan 29 , 2022
 ಧೂಮ್ರಪಾನದಿಂದ ವ್ಯಕ್ತಿಯ ಆರೋಗ್ಯಕ್ಕೆ ಉಂಟಾಗುವ ಹಾನಿಗಳನ್ನು ಅಸಂಖ್ಯಾತ ಅಧ್ಯಯನಗಳು ಪುರಾವೆಗಳ ಸಹಿತ ಸಾಬೀತುಗೊಳಿಸಿವೆ.ಆದರೆ,ಧೂಮಪಾನದಿಂದಾಗಿ ಉಂಟಾಗುವ ಅಪಾಯಗಳು ನಾವು ಎಂದಿಗೂ ಊಹಿಸಿರದ ದೀರ್ಘಾವಧಿ ಪರಿಣಾಮಗಳನ್ನು ಬೀರುತ್ತವೆ ಎನ್ನುವುದನ್ನು ನೂತನ ಸಂಶೋಧನೆಯೊಂದು ಬಹಿರಂಗಗೊಳಿಸಿದೆ, ಈ ಅಪಾಯಗಳು ವ್ಯಕ್ತಿಯ ಮುಂದಿನ ಕೆಲವು ತಲೆಮಾರುಗಳಿಗೂ ಬೆದರಿಕೆಯನ್ನು ಒಡ್ಡಬಲ್ಲವು.ಹೌದು,ಜನರ ಧೂಮಪಾನದ ಚಟ ಅವರಿಗೆ ಮಾತ್ರವಲ್ಲ,ಅವರ ಮೊಮ್ಮಕ್ಕಳು ಮತ್ತು ಮರಿಮಕ್ಕಳ ಆರೋಗ್ಯದ ಮೇಲೂ ಹಾನಿಕರ ಪರಿಣಾಮಗಳನ್ನು ಬೀರುತ್ತದೆ.ಬ್ರಿಟನ್‌ನ ಬ್ರಿಸ್ಟಲ್ ವಿವಿಯಲ್ಲಿ ನಡೆಸಲಾದ ’90ರ ದಶಕದ ಮಕ್ಕಳು ‘ ಎಂಬ […]

Advertisement

Wordpress Social Share Plugin powered by Ultimatelysocial