ಯಾವ ರೈತ ಪೋಟೋಶೂಟ್ ಮಾಡಿಸ್ಕೋತಾನೆ..?

ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗಷ್ಟೇ ಪನ್ವೇಲ್ನ ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಪೋಸ್ಟ್ ಮಾಡಿದ್ದರು. ಈಗ ಆ ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು, ನೆಟ್ಟಿಗರು ಇದನ್ನೊಂದು ನಾಟಕ ಎಂದು ಕರೆದಿದ್ದಾರೆ. ಲಾಕ್ಡೌನ್ ಶುರುವಾದಾಗಿನಿಂದಲೂ ಪನ್ವೇಲ್ನ ತಮ್ಮ ಫರ‍್ಮ್ ಹೌಸ್ನಲ್ಲಿ ಬೀಡುಬಿಟ್ಟಿರುವ ಸಲ್ಮಾನ್, ಕೆಲವು ದಿನಗಳ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುವ ಮತ್ತು ಮೈಯೆಲ್ಲಾ ಕೆಸರಾಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಫೋಟೋಗೆ, ‘ಜೈ ಜವಾನ್ ಜೈ ಕಿಸಾನ್’ ಎಂಬ ಕ್ಯಾಪ್ಶನ್ ನೀಡಿದ್ದ ಅವರು, ಈ ಮೂಲಕ ತಾವು ಕೃಷಿಯಲ್ಲಿ ತೊಡಗಿಸಿಕೊಂಡಿರುವುದಾಗಿ ಸೂಚಿಸಿದ್ದರು. ಸಲ್ಮಾನ್ ನಿಜಕ್ಕೂ ಕೃಷಿಯಲ್ಲಿ ಆಸಕ್ತರಾಗಿದ್ದಾರಾ ಅಥವಾ ಟೈಂಪಾಸ್ಗೆಂದು ಕೃಷಿ ಮಾಡಿದರಾ ಎಂಬ ವಿಷಯ ಗೊತ್ತಿಲ್ಲ. ಆದರೆ, ಈ ಫೋಟೋಗಳನ್ನು ನೋಡಿರುವ ನೆಟ್ಟಿಗರು ಮಾತ್ರ ಸುಮ್ಮನೆ ಇಲ್ಲ.

Please follow and like us:

Leave a Reply

Your email address will not be published. Required fields are marked *

Next Post

4 ಸರ್ಕಾರ ಶಾಲೆಗಳುನ್ನು ದತ್ತು ಪಡೆದ ಕಿಚ್ಚ

Wed Jul 15 , 2020
ಮಹಾಮಾರಿ ಕರೊನಾ ಸಂಕಷ್ಟ ಕಾಲದಲ್ಲಿ ಮಾನವೀಯ ಕರ‍್ಯಗಳಲ್ಲಿ ತೊಡಗಿರುವ ಅಭಿನಯ ಚಕ್ರರ‍್ತಿ ಕಿಚ್ಚ ಸುದೀಪ್, ಮತ್ತೊಂದು ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ.ಈ ಬಾರಿ ಕಿಚ್ಚನ ಕಣ್ಣು ರ‍್ಕಾರಿ ಶಾಲೆಗಳ ಮೇಲೆ ಬಿದ್ದಿದ್ದು, ಶಾಲೆಗಳ ಅಭಿವೃದ್ಧಿಗೆ ಸುದೀಪ್ ಪಣ ತೊಟ್ಟಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ನಾಲ್ಕು ರ‍್ಕಾರಿ ಶಾಲೆಗಳನ್ನು ಸುದೀಪ್ ದತ್ತು ಪಡೆದಿದ್ದಾರೆ. ಕಿಚ್ಚ ಸುದೀಪ್ ಚಾರಿಟೆಬೆಲ್ ಸೊಸೈಟಿ ಮೂಲಕ ಚಿತ್ರದರ‍್ಗ ಜಿಲ್ಲೆಯ ಹಿರಿಯೂರು ತಾಲೂಕು ಮತ್ತು ಚಳ್ಳಕೆರೆ ತಾಲೂಕಿನ ನಾಲ್ಕು ರ‍್ಕಾರಿ […]

Advertisement

Wordpress Social Share Plugin powered by Ultimatelysocial