ಯುಎಇಯಲ್ಲಿರುವ ಭಾರತೀಯರಿಗೆ ಗುಡ್ ನ್ಯೂಸ್

ದುಬೈ: ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಅರಬ್ ರಾಷ್ಟ್ರದಲ್ಲಿ ಸಿಲುಕಿಕೊಂಡು ಮರಳಿ ಭಾರತಕ್ಕೆ ಬರಲು ಬಯಸುವ ವಲಸಿಗರಿಗೆ ಯುಎಇಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭಿಸಿದೆ.
ಕಳೆದ ಬುಧವಾರ ರಾತ್ರಿ, ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಡೇಟಾ ಸಂಗ್ರಹಣೆಯ ವಿವರಗಳನ್ನು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ವೆಬ್‌ಸೈಟ್ ಮೂಲಕ ಪ್ರಕಟಿಸಿದೆ ಎಂದು ಇಲ್ಲಿನ ಸುದ್ದಿ ಮಾಧ್ಯಮ ವರದಿ ಮಾಡಿದೆ. ಲಾಕ್‌ಡೌನ್‌ನಿಂದಾಗಿ ಅರಬ್ ರಾಷ್ಟ್ರಗಳಲ್ಲಿ ಲಾಕ್ ಆಗಿರುವವರ ವಿವರಗಳನ್ನು ವೆಬ್‌ಸೈಟ್ ಮೂಲಕ ನಮೂದಿಸಬಹುದು. ಒಂದು ಫಾರ್ಮ್ ಒಬ್ಬ ವ್ಯಕ್ತಿಯಷ್ಟೇ ಭರ್ತಿ ಮಾಡಬೇಕು. ಕುಟುಂಬಗಳ ಪ್ರತಿ ಸದಸ್ಯರು ಪ್ರತ್ಯೇಕ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅಂತೆಯೇ, ಕಂಪನಿಗಳ ಪ್ರತಿ ಉದ್ಯೋಗಿಗಳು ಪ್ರತ್ಯೇಕ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಇನ್ನು ಭಾರತಕ್ಕೆ ಪ್ರಯಾಣಿಕರ ವಿಮಾನಗಳನ್ನು ಪುನರಾರಂಭಿಸುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಎಫೆಕ್ಟ್ ಗರ್ಭಿಣಿರ ಸಂಖ್ಯೆ ಏರಿಕೆ

Thu Apr 30 , 2020
ಮಹಾಮಾರಿ ಕೊರೊನಾ ವಿರುದ್ಧ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಲಾಕ್‌ಡೌನ್ ಆದೇಶ ಮಾಡಿರುವ ಕಾರಣ ಅಗತ್ಯ ವಸ್ತು ಪಡೆದುಕೊಳ್ಳಲು ಜನರು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇದರ ಮಧ್ಯೆ ವಿಶ್ವಸಂಸ್ಥೆ ಮಹತ್ವದ ಮಾಹಿತಿಯೊಂದನ್ನು ಹೊರಹಾಕಿದೆ. ೧೧೪ ದೇಶದ ೪೫೦ ಮಿಲಿಯನ್‌ಗೂ ಅಧಿಕ ಮಧ್ಯಮ ವರ್ಗದ ಮಹಿಳೆಯರು ಲಾಕ್‌ಡೌನ್ ವೇಳೆ ಗರ್ಭನಿರೋಧಕ ಬಳಕೆ ಮಾಡಲು ಆಗದ ಕಾರಣ ಗರ್ಭಧರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಅದರಲ್ಲಿ ೭೦ ಲಕ್ಷ ಮಹಿಳೆಯರು ಮುಂದಿನ ತಿಂಗಳಲ್ಲಿ ಗರ್ಭಧರಿಸಲಿದ್ದಾರೆ […]

Advertisement

Wordpress Social Share Plugin powered by Ultimatelysocial