ರಾಜಧಾನಿ ತೊರೆದ ೨ಲಕ್ಷ ಕಾರ್ಮಿಕರು

ಬೆಂಗಳೂರು: ಕೊರೊನಾಘಾತಕ್ಕೆ ನಾಡಿನ ಶ್ರಮಿಕ ರ‍್ಗ ತತ್ತರಿಸಿದೆ. ನಗರ-ಮಹಾ ನಗರಗಳಿಂದ ಹಳ್ಳಿಗಳತ್ತ ಮಹಾ ಮರುವಲಸೆಯ ರ‍್ವ ಕಂಗೆಡಿಸುತ್ತಿದೆ. ಬೆಂಗಳೂರೊಂದರಿಂದಲೇ ಸುಮಾರು ೨ ಲಕ್ಷ ಮಂದಿ ಅನ್ಯ ಜಿಲ್ಲೆ ಮತ್ತು ಪರ ರಾಜ್ಯಗಳಿಗೆ ವಾಪಸಾಗಿದ್ದಾರೆ. ಒಂದೆಡೆ ಕೋವಿಡ್ ೧೯ ಎದುರಿಸುವ ಸವಾಲು, ಮತ್ತೊಂದೆಡೆ ಕರ‍್ಮಿಕರ ಮರು ವಲಸೆ ನಿಭಾಯಿಸಬೇಕಾದ ಮಹಾ ಸವಾಲು ರಾಜ್ಯ-ಕೇಂದ್ರ ಸರಕಾರಗಳ ಮುಂದಿದೆ.
ನಗರಗಳಿಂದ ತವರು ತಲುಪಿರುವ ಲಕ್ಷಾಂತರ ಕರ‍್ಮಿಕರಲ್ಲಿ ಎಲ್ಲರಿಗೂ ಸ್ಥಳೀಯವಾಗಿ ಉದ್ಯೋಗ ಲಭಿಸುವುದು ಅಸಾಧ್ಯ. ಬೇರೆ ಬೇರೆ ವೃತ್ತಿಯ ಕುಶಲರ‍್ಮಿಗಳು ಕೃಷಿ ಕೆಲಸಕ್ಕೆ ಒಗ್ಗಿಕೊಳ್ಳುತ್ತಿಲ್ಲ. ಜತೆಗೆ ಕೃಷಿಗೂ ಪೂರಕ ವಾತಾವರಣವಿಲ್ಲ. ಹಾಗಾಗಿ ಬಹುತೇಕ ಕರ‍್ಮಿಕರು ಮತ್ತೆ ನಗರಕ್ಕೆ ಮರಳುವುದು ಖಚಿತ. ಆದರೆ ಕೊರೊನಾ ಪೀಡೆ ರಾಜ್ಯದಲ್ಲಿ ಮತ್ತಷ್ಟು ವ್ಯಾಪಿಸುತ್ತಿರುವುದರಿಂದ ಲಕ್ಷಾಂತರ ಕರ‍್ಮಿಕರ ಅತಂತ್ರ ಸ್ಥಿತಿ ಮುಂದುವರಿಯಲಿದೆ. ಈ ನಡುವೆ ನಾನಾ ಕುಶಲ ವೃತ್ತಿಗಳಲ್ಲಿ ಪರಿಣಿತರಾಗಿರುವ ಒಡಿಶಾ, ಬಿಹಾರ, ಉತ್ತರ ಪ್ರದೇಶ, ಜರ‍್ಖಂಡ್ನ ಕರ‍್ಮಿಕರು ತಮ್ಮ ರಾಜ್ಯಗಳಿಗೆ ವಾಪಸಾಗಿರುವುದರಿಂದ ಬೆಂಗಳೂರಿನ ಕೈಗಾರಿಕೋದ್ಯಮ ಮತ್ತು  ನಿಮಾðಣ ಕಾಮಗಾರಿಗಳಿಗೆ ಭಾರಿ ಏಟು ಬಿದ್ದಿದೆ.

Please follow and like us:

Leave a Reply

Your email address will not be published. Required fields are marked *

Next Post

ಸದ್ಯದಲ್ಲೆ ತೆರೆಗೆ ಬರಲಿದೆ ಬೇತಾಳ

Sat May 9 , 2020
ಪ್ರೇಮಕತೆಗಳಿಂದ ಖ್ಯಾತಿ ಗಳಿಸಿದ ಶಾರುಖ್ ಖಾನ್ ಸಹ ಬೇತಾಳದಂತಹ ದೆವ್ವದ ಕತೆಗಳ ಹಿಂದೆ ಬಿದ್ದಿದ್ದಾರೆ. ಶಾರುಖ್ ಬೇತಾಳ ಎಂಬ ಹೊಸ ವೆಬ್ ಸರಣಿ ನಿರ್ಮಿಸಿದ್ದು, ನೆಟ್‌ಫ್ಲಿಕ್ಸ್ನಲ್ಲಿ ಇದೇ ತಿಂಗಳ ೨೪ಕ್ಕೆ ಬೇತಾಳ ಬಿಡುಗಡೆ ಆಗಲಿದೆ. ಶಾರುಖ್ ಒಡೆತನದ ಬೇತಾಳ ಸಿರೀಸ್ ಪೊಲೀಸ್ ಅಧಿಕಾರಿಗಳು ಮತ್ತು ಹಳ್ಳಿಗರನ್ನು ಕಾಡುತ್ತಿರುವ ಬ್ರಿಟಿಷ್ ಅಧಿಕಾರಿಯೊಬ್ಬನ ಆತ್ಮ ಮತ್ತು ಅವನ ಸೈನ್ಯದ ಆತ್ಮಗಳ ನಡುವೆ ನಡೆಯುವ ಕತೆಯಾಗಿದೆ. ಈ ವೆಬ್ ಸಿರೀಸ್‌ನ್ನು ಪ್ರತಿಕ್ ಗ್ರಾಹ್ಮನ್ ಮತ್ತು […]

Advertisement

Wordpress Social Share Plugin powered by Ultimatelysocial