ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು

ಮಧ್ಯ ಪ್ರದೇಶ ನಂತರ ಇದೀಗ ರಾಜಸ್ಥಾನದಲ್ಲೂ ಕಾಂಗ್ರೆಸ್ ಗೆ ಸಂಕಷ್ಟ ಎದುರಾಗಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಮಧ್ಯ, ಹಲವು ಸಚಿವರು ಹಾಗೂ ಶಾಸಕರು ಸಿಎಂ ಅಶೋಕ್ ಗೆಹ್ಲೋಟ್ ಅವರ ನಿವಾಸಕ್ಕೆ ತೆರಳಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಡೆ ಡಿಸಿಎಂ ಸಚಿನ್ ಪೈಲಟ್, ತಮ್ಮ ಬೆಂಬಲಿಗ ಶಾಸಕರೊಂದಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಮಾತುಕತೆ ನಡೆಸಲು ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.ಬಿಜೆಪಿ ತಮ್ಮ ಸರ್ಕಾರವನ್ನ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದೆ. ಹಣದ ಆಮಿಷವೊಡ್ಡಿ ಕಾಂಗ್ರೆಸ್ ಹಾಗೂ ಪಕ್ಷೇತರ ಶಾಸಕರನ್ನ ಸೆಳೆಯಲು ಪ್ರತಿಪಕ್ಷ ಯತ್ನಿಸುತ್ತಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಆರೋಪ ಮಾಡಿದ ಬೆನ್ನಲ್ಲೇ ಈ ಎಲ್ಲಾ ಬೆಳವಣಿಗೆಗಳು ನಡೆದಿವೆ. ಸಿಎಂ ಅಶೋಕ್ ಗೆಹ್ಲೋಟ್ ಅವರು ಇಂದು ರಾತ್ರಿ ತಮ್ಮ ಬೆಂಬಲಿಗ ಶಾಸಕರ ಸಭೆ ಕರೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.ಇನ್ನು ಅಶೋಕ್ ಗೆಹ್ಲೋಟ್ ಅವರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಬಿಜೆಪಿ, ಈ ಬೆಳವಣಿಗೆಗಳು ಗೆಹ್ಲೋಟ್ ಮತ್ತು ಪೈಲಟ್ ಅಧಿಕಾರಕ್ಕಾಗಿ ಕಿತ್ತಾಡುತ್ತಿರುವುದನ್ನು ಪ್ರತಿಬಿಂಬಿಸುತ್ತವೆ ಎಂದು ತಿರುಗೇಟು ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್‌ನ ಖ್ಯಾತ ನಟ ರಂಜನ್ ನಿಧನ

Mon Jul 13 , 2020
ಬಾಲಿವುಡ್‌ನ ಖ್ಯಾತ ನಟ ರಂಜನ್ ಸೆಹವಾಲ್ ಅವರು ಇಂದು ನಿಧನರಾಗಿದ್ದಾರೆ. ಸರ್ಬಜಿತ್ ಸಿನಿಮಾ ಮೂಲಕ ಉತ್ತಮ ಹೆಸರನ್ನು ಮಾಡಿದ್ದ ಅವರು ಬಹುಅಂಗAಗ ವೈಫಲ್ಯದಿಂದ ಬಳಲುತ್ತಾಯಿದ್ರು ಎಂದು ಹೇಳಲಾಗ್ತಾಯಿದೆ. ಪಂಜಾಬಿಯ ಹಲವು ಚಿತ್ರಗಳಲ್ಲಿ ನಟಿಸಿದ್ದ ರಂಜನ್‌ಗೆ ೨೦೧೭ರಲ್ಲಿ ಬಿಡುಗಡೆಯಾಗಿದ್ದ ‘ಮಾಹಿ ಎನ್‌ಆರ್‌ಐ ಮತ್ತು ೨೦೧೪ರಲ್ಲಿ ತೆರೆಕಂಡಿದ್ದ ‘ಯಾರ್ ದಾ ಕ್ಯಾಚಪ್’ ಹೆಸರು ತಂದು ಕೊಟ್ಟಿದ್ದವು.ಪಂಜಾಬ್ ಮೂಲದವರಾದ ರಂಜನ್ ಚಂಡೀಗಢನಲ್ಲಿ ವಾಸವಾಗಿದ್ದರು. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಥಿಯಟರ್ ಸ್ಟಡಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡು ಮುಂಬೈಗೆ […]

Advertisement

Wordpress Social Share Plugin powered by Ultimatelysocial