ರಾಜಸ್ಥಾನದ ಕಾರ್ಮಿಕರೊಬ್ಬರ ಪುತ್ರ ರಾಜ್ಯಕ್ಕೆ ೨ನೇ ಟಾಪರ್

ರಾಜಸ್ಥಾನದ ಕಾರ್ಮಿಕರೊಬ್ಬರ ಪುತ್ರ ದ್ವಿತೀಯ ಪಿಯುಸಿಯಲ್ಲಿ 99.2% ರಷ್ಟು ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಎರಡನೇ ಟಾಪರ್ ಆಗಿ ಹೊರಹೊಮ್ಮಿದ್ದಾನೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಲೋಹರದ ಗ್ರಾಮದ ವಿದ್ಯಾರ್ಥಿಯ ಹೆಸರು ಪರ್ಕಾಶ್ ಫುಲ್ ವಾರಿಯಾ .ತಂದೆ ಚನ್ನಾ ರಾಮ್ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು,ಇದೀಗ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ.ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಇದಿದ್ದರಿಂದ ಟಾರ್ಚ್ ಬೆಳಕಲ್ಲೇ ಪರೀಕ್ಷೆಗೆ ಓದಿ ಈ ಸಾಧನೆಯನ್ನು ಪ್ರಕಾಶ್ ಮಾಡಿದ್ದಾರೆ.ಇತಿಹಾಸ ಮತ್ತು ಹಿಂದಿ ಭಾಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಿರುವ ಪ್ರಕಾಶ್, ಹಿಂದಿ ಸಾಹಿತ್ಯದಲ್ಲಿ 99, ಪೊಲಿಟಿಕಲ್ ಸೈನ್ಸ್‌ನಲ್ಲಿ 98 ಅಂಕಗಳಿಸಿದ್ದಾನೆ. ಇದಕ್ಕೂ ಮೊದಲು ಈತನ ಸಹೋದರಿಯೂ ಶೇ.88 ಅಂಕಗಳಿಸಿದ್ದಳು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಫೇಮಸ್ ಆಗಿರುವ ಪ್ರಕಾಶ್, ಮುಂದಿನ ದಿನದಲ್ಲಿ ಐಎಎಸ್ ಅಧಿಕಾರಿಯಾಗಬೇಕು ಎನ್ನುವ ಕನಸು ಹೊತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರಾಜಸ್ಥಾನದ ಸ್ಪೀಕರ್ ಅರ್ಜಿ ವಿಚಾರಣೆ

Thu Jul 23 , 2020
ರಾಜಸ್ತಾನದ ಶಾಸಕರ ಅನರ್ಹತೆಯ ಕುರಿತು ಸುಪ್ರಿಂ ಕೊರ್ಟ್ ತಡವಾಗಿ ವಿಚಾರಣೆ ನಡೆಸುತ್ತಿರುವ ಬಗ್ಗೆ ಪ್ರಶ್ನಿಸಿ ಲೋಕಸಭಾ ಸ್ಪೀಕರ್ ಅವರು ಪ್ರಶ್ನಿಸಿದ್ದಾರೆ. ಲಕ್ಷ್ಮಣರೇಖೆ ದಾಟದೆ ಸಂವಿಧಾನದೊಳಗೆ ಪ್ರಜಾಪ್ರಭುತ್ವದ ನಿಯಮಗಳನ್ನು ಪಾಲಿಸಿಕೊಂಡು ಹೋಗಬೇಕಾಗಿರುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ, ರಾಜಸ್ತಾನ ಸರ್ಕಾರದಲ್ಲಿ ಬಂಡಾಯ ಶಾಸಕರು ತಮ್ಮ ಸಾಂವಿಧಾನಿಕ ನಿಯಮ ಮೀರಿ ಹೋಗಿದ್ದಾರೆ ಎಂದು ಅನಿಸುತ್ತಿದೆ ಎಂದು ಸ್ಪೀಕರ್ ಅರ್ಜಿಯಲ್ಲಿ ಆರೋಪಿಸಿದ್ದಾರೆ. ರಾಜಸ್ತಾನದಲ್ಲಿ ರಾಜಕೀಯ ತಿಕ್ಕಾಟ ಹೆಚ್ಚಾಗಿತ್ತು ನಂತರ ಸಚಿನ್ ಪೈಲೆಟ್ ಸೇರಿ ೧೮ ಮಂದಿ ಶಾಸಕರನ್ನ […]

Advertisement

Wordpress Social Share Plugin powered by Ultimatelysocial