ರಾಜ್ಯ ಅಂದ್ರೆ ಬರೀ ರಾಮನಗರ ಜಿಲ್ಲೆನಾ..?

ಪಾದರಾಯನಪುರ ಗಲಾಟೆಯ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್‌ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಆರೋಪಕ್ಕೆ ಟ್ವೀಟ್  ಮುಖಾಂತರ ಸಚಿವ ಡಾ.ಕೆ.ಸುಧಾಕರ್‌ ತಿರುಗೇಟು ನೀಡಿದ್ದಾರೆ. ರಾಜ್ಯವೆಂದರೇ ಕೇವಲ ರಾಮನಗರ ಜಿಲ್ಲೆ ಮಾತ್ರವೇ ಎಂದು ವಿಪಕ್ಷ ನಾಯಕರಿಗೆ ಸಚಿವ ಡಾ.ಕೆ.ಸುಧಾಕರ್‌ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ  ಮಾತನಾಡಿದ  ಅವರು, ಕೇರಳದ ಕಾಸರಗೋಡಿನಿಂದ ಮಂಗಳೂರಿಗೆ ಜನ ಬರಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ವಿರೋಧವಿಲ್ಲ. ಇದಕ್ಕಾಗಿ ಪ್ರಧಾನಿಗೆ ಪತ್ರವನ್ನು ಅವರು ಬರೆದಿದ್ದರು ಎಂದು ದೇವೇಗೌಡರು ಈ ಹಿಂದೆ ಮಾಡಿದ್ದ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಹಾಗೂ ಪ್ರಧಾನಿಗೆ ಬರೆದ ಪತ್ರಗಳನ್ನು ಹಾಕಿದ್ದಾರೆ. ಕೇರಳದ ಕಾಸರಗೋಡಿನಿಂದ ಮಂಗಳೂರಿಗೆ ಜನ ಬರೋದಕ್ಕೆ ಮಾಜಿ ಪ್ರಧಾನಿಗಳಿಗೆ ವಿರೋದವಿಲ್ಲ. ಇದಕ್ಕೆ ಪ್ರಧಾನಿಯವರಿಗೆ ಪತ್ರ ಬರೆದವರು, ಇಂದು ಪಾದರಾಯನಪುರದ ಬಾಂಧವರು ರಾಮನಗರಕ್ಕೆ ಬರಬೇಡಿ ಎಂದು ಹೇಳುವುದು ಎಷ್ಟು ಸರಿ? ರಾಜ್ಯ ಅಂದರೆ ಕೇವಲ ರಾಮನಗರ ಜಿಲ್ಲೆಯೇ? ಎಂದು ಪ್ರಶ್ನೆ ಮಾಡಿದರು

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ವಿರುದ್ಧ ಹೋರಾಟ ನಡೆಸುವುದು ಎಸ್‌ಎಸ್‌ಎಲ್ ಸಿಗಿಂತ ದೊಡ್ಡ ಪರೀಕ್ಷೆ

Sat Apr 25 , 2020
ರಾಜ್ಯದಲ್ಲಿ ಮೇ 3ರವರೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಹೀಗಾಗಿ ಆ ಬಳಿಕ ಪರೀಕ್ಷೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಕೊರೊನಾ ವಿರುದ್ಧ ಹೋರಾಟ ನಡೆಸುವುದು ಎಸ್‌ಎಸ್‌ಎಲ್ ಸಿಗಿಂತ ದೊಡ್ಡ ಪರೀಕ್ಷೆ . ಹೀಗಾಗಿ ಲಾಕ್ ಡೌನ್ ಬಳಿಕ ಪರೀಕ್ಷೆ ಯಾವಾಗ ಮಾಡಬೇಕು.ಮಕ್ಕಳಿಗೆ ಎಷ್ಟು ಸಮಯ ಕೊಡಬೇಕೆಂದು ಲಾಕ್ ಡೌನ್ ನಂತರ ನಿರ್ಧರ ಮಾಡಲಾಗುತ್ತೆ. ಕೆಲವರು ಎಸ್‌ಎಸ್‌ಎಲ್ ಸಿ ಪರೀಕ್ಷೆ ನಡೆಸುವುದು […]
suresh kumar

Advertisement

Wordpress Social Share Plugin powered by Ultimatelysocial