ರಾಬರ್ಟ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್..?

ಸ್ಯಾಂಡಲ್ವುಡನಲ್ಲಿ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಸದ್ಯ ಲಾಕ್ ಡೌನ್ ಹಿನ್ನೆಲೆ ಶೂಟಿಂಗ್ ಸ್ಥಗಿತವಾಗಿದೆ. ಆದರೆ ಯುಟ್ಯೂಬ್ನಲ್ಲಿ ಹಾಡುಗಳು ರಿಲೀಸ್ ಆಗಿದ್ದು ಸಖತ್ ಸೌಂಡ್ ಮಾಡ್ತಿವೆ. ಈ ನಡುವೆ ರಾಬರ್ಟ್ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಕಾಯ್ದು ಕುಳಿತಿರುವ ಅಭಿಮಾನಿಗಳಿಗೆ ಚಿತ್ರತಂಡ ಸುಳಿವು ಬಿಟ್ಟು ಕೊಟ್ಟಿದೆ ಎನ್ನಲಾಗಿದೆ. ಈ ಮೊದಲು ಎಪ್ರಿಲ್ 9, ಮೇ 1 ರಂದು ಸಿನಿಮಾ ಬಿಡುಗಡೆಯಾಗುತ್ತೆ ಎನ್ನಲಾಗಿತ್ತು. ಸದ್ಯ ರಾಬರ್ಟ್ ಸಿನಿಮಾ ಬಿಡುಗಡೆಯ ಹೊಸ ಡೇಟ್ ಕೇಳಿ ಬರುತ್ತಿದೆ. ಈ ಮೊದಲು ಸಮಯಕ್ಕೆ ಸರಿಯಾಗಿ ಸಿನಿಮಾ ಬಿಡುಗಡೆಯಾಗಿದ್ರೆ ಬಾಕ್ಸ್ ಆಫೀಸ್ನಲ್ಲಿ ಸಖತ್ ಧೂಳೆಬ್ಬಿಸುತ್ತಿತ್ತು. ಸದ್ಯ ಸಿನಿಮಾ ರಿಲೀಸ್ಗೆ ಹೊಸ ಡೇಟ್ ಕೇಳಿ ಬರುತ್ತಿದೆ. ರಾಬರ್ಟ್ ಸಿನಿಮಾವನ್ನು ಸ್ವಾತಂತ್ರ್ಯ ದಿನವಾದ ಆಗಸ್ಟ್ 15 ರಂದು ರಿಲೀಸ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ ಎನ್ನಲಾಗಿದೆ. ಈ ಬಗ್ಗೆ ಚಿತ್ರ ತಂಡ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಆದರೆ ಸ್ಯಾಂಡಲ್ವುಡ್ನಲನ ರಾಬರ್ಟ್ ಸಿನಿಮಾ ಬಿಡುಗಡೆಗೆ ದರ್ಶನ್ ಅಭಿಮಾನಿಗಳು ಕಾತುರದಿಂದ ಕಾಯ್ದು ಕುಳಿತಿದ್ದಾರೆ. ಸದ್ಯ ರಾಬರ್ಟ್ ಸಿನಿಮಾವನ್ನು ಆಗಸ್ಟ್ 15ಕ್ಕೆ ರಿಲೀಸ್ ಮಾಡಲು ಸಿನಿಮಾ ತಂಡ ಪ್ಲ್ಯಾನ್ ಮಾಡಿದೆ ಎಂದು ಹೇಳಲಾಗ್ತಿದೆ.

 

 

Please follow and like us:

Leave a Reply

Your email address will not be published. Required fields are marked *

Next Post

ಸೀರಿಯಲ್ ಶೂಟಿಂಗ್ ಗೆ ಅನುಮತಿ..!

Tue May 5 , 2020
ಲಾಕ್ ಡೌನ್ ಹಿನ್ನೆಲೆ ಸ್ಥಗಿತವಾಗಿರುವ ಸಿರೀಯಲ್ ಶೂಟಿಂಗ್ ಮತ್ತೆ ಆರಂಭಿಸುವುದಕ್ಕೆ ಅನುಮತಿ ಸಿಕ್ಕಿದೆ.ಇಂದು ನಡೆದ ಸಭೆಯಲ್ಲಿ ರಾಜ್ಯ ಸರ್ಕಾರ ಸೀರಿಯಲ್ ಚಿತ್ರೀಕರಣಕ್ಕೆ ಅವಕಾಶ ನೀಡಿದೆ. ಸುಮಾರು 45 ದಿನಗಳಿಂದ ಯಾವುದೇ ಸಿನಿಮಾ ಮತ್ತು ಧಾರಾವಾಹಿಗಳ ಶೂಟಿಂಗ್ ಆರಂಭವಾಗಿರಲಿಲ್ಲ. ಕೊರೊನಾ ಭೀತಿಯಿಂದ ಮಾರ್ಚ್ 19ರಿಂದ ಕಿರುತೆರೆ, ಬೆಳ್ಳಿತೆರೆಯ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿತ್ತು. ಹೀಗಾಗಿ ಮತ್ತೆ ಶೂಟಿಂಗ್ ಫ್ರಾರಂಬಿಸಲು ಅನುಮತಿ ನೀಡಬೇಕು ಎಂದು ಟಿ.ವಿ.ಅಸೋಶಿಯೇಷನ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಈ ಕುರಿತು ಇಂದು […]

Advertisement

Wordpress Social Share Plugin powered by Ultimatelysocial