ರೇಣುಕಾಚಾರ್ಯ ಕಚೇರಿ ಸಿಬ್ಬಂದಿಗೆ ಕೊರೊನಾ

ನನ್ನ ಸರ್ಕಾರಿ ಅಧಿಕೃತ ಕಚೇರಿಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಇಂದಿನಿAದ ಶುಕ್ರವಾರ ಸಂಜೆವರೆಗೂ ಸರ್ಕಾರಿ ಗೃಹ ಕಚೇರಿಯಲ್ಲಿಯೇ ಕಾರ್ಯನಿರ್ವಹಿಸಲಿದ್ದೇನೆ ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸಾರ್ವಜನಿಕರು, ಹಿತೈಷಿಗಳು ನೇರವಾಗಿ ಬಂದು ಭೇಟಿಯಾಗದೆ, ದೂರವಾಣಿ ಮೂಲಕ ಸಂಪರ್ಕಿಸಬೇಕೆAದು ವಿನಂತಿಸಿದ್ದಾರೆ. ವಿಕಾಸಸೌಧದಲ್ಲಿರುವ ರೇಣುಕಾಚಾರ್ಯ ಕಚೇರಿಯ ಆಪ್ತ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಕಾಲು ನೋವಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಜುಲೈ ೬ರಂದು ದಾಖಲಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಇದರಿಂದ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ.

Please follow and like us:

Leave a Reply

Your email address will not be published. Required fields are marked *

Next Post

ಟ್ರಂಪ್ ಪತ್ನಿ ಪ್ರತಿಮೆಗೆ ಬೆಂಕಿ

Thu Jul 9 , 2020
ಅಮೆರಿಕ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಮರದ ಪ್ರತಿಮೆಗೆ ಬೆಂಕಿ ಹಚ್ಚಿ ವಿರೂಪಗೊಳಿಸಿರುವ ಘಟನೆ ಸ್ಲೋವೆನಿಯಾದ ಸೆವೆನ್ಸಿಯಾದಲ್ಲಿ ನಡೆದಿರುವುದಾಗಿ ತಿಳಿಸಿದೆ. ಮೆಲನಿಯಾ ಟ್ರಂಪ್ ಅವರ ಹುಟ್ಟೂರಾದ ಸ್ಲೋವೆನಿಯಾದ ಸೆವೆನ್ಸಿಯಾದಲ್ಲಿ ಮರದ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು. ಮರದ ಪ್ರತಿಮೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿರುವುದಾಗಿ ಪ್ರತಿಮೆ ನಿರ್ಮಿಸಿದ್ದ ಬರ್ಲಿನ್ ಮೂಲದ ಅಮೆರಿಕ ಕಲಾವಿದ ಬ್ರ‍್ಯಾಡ್ ಡೌನಿ ಮಾಹಿತಿ ನೀಡಿದ್ದಾರೆ. ಪ್ರತಿಮೆಯನ್ನು ಯಾಕೆ ವಿರೂಪಗೊಳಿಸಿದರು ನನಗೆ ತಿಳಿಯಬೇಕಾಗಿದೆ. ಅಮೆರಿಕದಲ್ಲಿ ಈಗಾಗಲೇ ಜನಾಂಗೀಯ ದ್ವೇಷ […]

Advertisement

Wordpress Social Share Plugin powered by Ultimatelysocial