ರೈಲ್ವೆ ಇಲಾಖೆಯ ಮಹತ್ವದ ಸೂಚನೆ

ನವದೆಹಲಿ:ಅನಾರೋಗ್ಯದ ಲಕ್ಷಣಗಳಿರುವವರು ರೈಲು ಸಂಚಾರ ಮಾಡಬೇಡಿ ಎಂದು ರೈಲ್ವೆ ಇಲಾಖೆ ಆದೇಶಿಸಿದೆ. ಲಾಕ್​ಡೌನ್​​​ನಿಂದಾಗಿ ದೇಶದ ವಿವಿಧೆಡೆ ಸಿಲುಕಿರುವ ವಲಸಿಗರನ್ನು ಮರಳಿ ತಮ್ಮ ಊರುಗಳಿಗೆ ಕಳುಹಿಸಲು ಭಾರತೀಯ ರೈಲ್ವೆ ದೇಶಾದ್ಯಂತ ಪ್ರತಿದಿನ ಶ್ರಮಿಕ್ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಆದರೆ ರೈಲು ಪ್ರಯಾಣ ಮಾಡುತ್ತಿರುವ ಕೆಲವರಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಅವಧಿಯಲ್ಲಿಯೇ ಅನಾರೋಗ್ಯದ ಲಕ್ಷಣಗಳು ಕಂಡುಬಂದಿದ್ದರೂ ತಮ್ಮ ಊರು ತಲುಪಬೇಕೆಂಬ ಆತುರದಲ್ಲಿ ರೈಲು ಸಂಚಾರ ಮಾಡುತ್ತಿದ್ದಾರೆ. ಮೊದಲೇ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡಿದ್ದಾಗ್ಯೂ ಪ್ರಯಾಣ ಮುಂದುವರಿಸಿದಾಗ ದುರದೃಷ್ಟವಶಾತ್ ಕೆಲವು ಸಾವು ಸಂಭವಿಸಿದ ಘಟನೆಗಳೂ ನಡೆದಿವೆ. ದುರ್ಬಲ ಆರೋಗ್ಯ ಹೊಂದಿದವರನ್ನು ಕೋವಿಡ್- 19 ನಿಂದ ಪಾರು ಮಾಡುವ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯ ಒಂದು ಆದೇಶ ಹೊರಡಿಸಿದೆ. ಸಹ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು (ಉದಾ: ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು, ಕ್ಯಾನ್ಸರ್, ರೋಗನಿರೋಧಕ ಶಕ್ತಿಯ ಕೊರತೆಯ ಪರಿಸ್ಥಿತಿ ಇರುವವರು), ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ತೀರ ಅಗತ್ಯ ಸಂದರ್ಭ ಹೊರತುಪಡಿಸಿ ರೈಲ್ವೆ ಪ್ರಯಾಣ ಮಾಡಬಾರದು ಎಂದು ರೈಲ್ವೆ ಸಚಿವಾಲಯ ಮನವಿ ಮಾಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ನಿಧನ

Fri May 29 , 2020
ಛತ್ತೀಸ್ಘಡದ ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಇಂದು ನಿಧನಾರಾಗಿದ್ದಾರೆ. ಮೇ 9 ರಂದು ಅವರು ಹೃದಯಾಘಾತಕ್ಕೆ ಒಳಗಾದ ನಂತರ ಅವರನ್ನು ಕೂಡಲೇ ಆಸ್ಪತ್ರೆ ದಾಖಲಿಸಲಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು  ಇದು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.74 ವರ್ಷದ ಅಜಿತ್‌ ಜೋಗಿ ಛತ್ತೀಸ್ಘಡದ ಮೊದಲ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇಂದು ಅವರಿಗೆ ಎರಡು ಬಾರಿ ಹೃದಯಾಘಾತವಾಗಿದ್ದು, ವೆಂಟಿಲೇಟರ್ ನೆರವಿನಿಂದ ಉಸಿರಾಟ ನಡೆಸಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಈ ಮೊದಲೇ ಅಜಿತ್‌ ಜೋಗಿ […]

Advertisement

Wordpress Social Share Plugin powered by Ultimatelysocial