ರೈಲ್ವೇ ಮೂಲಕ ಅಗತ್ಯ ವಸ್ತುಗಳ ಸಾಗಣೆ

ಲಾಕ್ಡೌನ್ನಿಂದಾಗಿ ಜೀವನಾವಶ್ಯಕ ವಸ್ತುಗಳು ಸಿಗದೆ ಜನ ಪರದಾಡುತ್ತಿದ್ದಾರೆ. ಈ ನಡುವೆ ಜೀವನಕ್ಕೆ ಅತ್ಯವಶ್ಯಕವಾಗಿರುವ ಹಾಲನ್ನು ಒಂದೆಡೆಯಿಂದ ಮತ್ತೂಂದೆಡೆಗೆ ಸಾಗಿಸುವ ನಿಟ್ಟಿನಲ್ಲಿ ಹಾಲಿನ ಟ್ಯಾಂಕ್ ವ್ಯಾಗನ್ಗಳನ್ನು ನರ‍್ಮಿಸುವ ಮೂಲಕ ಭಾರತೀಯ ರೈಲ್ವೆ ಮಹತ್ವದ ಹೆಜ್ಜೆ ಇರಿಸಿದೆ. ಹೊಸದಾಗಿ ಅಭಿವೃದ್ಧಿಪಡಿಸಿರುವ ಒಂದು ಮಿಲ್ಕ್ ಟ್ಯಾಂಕ್ ವ್ಯಾನ್ ೪೪,೬೬೦ ಲೀಟರ್ ಹಾಲನ್ನು ಸಂಗ್ರಹಿಸಿ ಸಾಗಿಸುವ ಸಾರ‍್ಥ್ಯ ಹೊಂದಿದ್ದು, ಹಿಂದಿದ್ದ ಟ್ಯಾಂಕ್ಗಳ ಸಂಗ್ರಹ ಸಾರ‍್ಥ್ಯಕ್ಕಿಂತ ಶೇ.೧೨ರಷ್ಟು ಹೆಚ್ಚು ಸಾಮರ್ಥ್ಯ ಹೊಂದಿದೆ. ಗಂಟೆಗೆ ೧೧೦ ಕಿ.ಮೀ ವೇಗದಲ್ಲಿ ಓಡಲು ಅನುಕೂಲವಾಗುವಂತೆ ಸ್ಟೈನ್ಲೆಸ್ ಸ್ಟೀಲ್ ಬಳಸಿ ಸ್ಥಳೀಯವಾಗಿಯೇ ಈ ಟ್ಯಾಂಕ್ಗಳನ್ನು ಉತ್ಪಾದಿಸಲಾಗಿದ್ದು, ಇವುಗಳು ಹಾಲನ್ನು ಅತೀ ಕಡಿಮೆ ವೆಚ್ಚದಲ್ಲಿ, ಅತ್ಯಂತ ಸುರಕ್ಷಿತವಾಗಿ ಮತ್ತು ಕಡಿಮೆ ಸಮಯದಲ್ಲಿ ಸರಬರಾಜು ಮಾಡಲು ನೆರವಾಗಲಿವೆ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ಈ ಪೈಕಿ ೧೩.೫ ಲಕ್ಷ ವ್ಯಾಗನ್ಗಳು ಹಾಲು, ಆಹಾರ ಧಾನ್ಯ, ಉಪ್ಪು, ಸಕ್ಕರೆ, ಅಡುಗೆ ಎಣ್ಣೆ ರೀತಿಯ ಜೀವನಾವಶ್ಯಕ ವಸ್ತುಗಳನ್ನು ಸಾಗಿಸಿವೆ. ಎಲ್ಲಕ್ಕಿಂತ ಮುಖ್ಯವಾಗಿ ಭಾರತೀಯ ರೈಲ್ವೇಯು ಈವರೆಗೆ ಬರೋಬ್ಬರಿ ೯೭ ಲಕ್ಷ ಟನ್ ಆಹಾರ ಧಾನ್ಯಗಳ ಸಾಗಣೆ ಮಾಡಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

  ಧಾರಾಕಾರ ಮಳೆ ಇಬ್ಬರ ಸಾವು

Wed May 27 , 2020
ಮುಂಗಾರು ಮಳೆ ಅಬ್ಬರಕ್ಕೆ ಒಂದೇ ದಿನ ಬೆಂಗಳೂರು ನಗರದ ಇಬ್ಬರು ಬಲಿಯಾಗಿದ್ದು, ಹಾಗೆಯೇ ಒಂದು ಹಸು ವಿದ್ಯುತ್‌ ತಗುಲಿ ಸಾವನ್ನಪ್ಪಿದೆ. ಅಲ್ಲದೆ, 50ಕ್ಕೂ ಹೆಚ್ಚು ಮರ ಹಾಗೂ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಪ್ರತ್ಯೇಕ ಘಟನೆಗಳಲ್ಲಿ ಒಬ್ಬರು ನಂದಿನಿ ಬಡಾವಣೆ ಲಕ್ಷ್ಮೀದೇವಿನಗರ ವಾರ್ಡ್‌ನ ನಿರ್ಮಾಣ ಹಂತದ ಕಟ್ಟಡದಿಂದ ಕಾಮಗಾರಿಗೆಂದು ಜೋಡಿಸಿದ್ದ ಹಾಲೋಬ್ರಿಕ್ಸ್ ಭಾರೀ ಮಳೆಗೆ ಪಕ್ಕದ ಮನೆಯ ಶೀಟ್‌ ಮನೆ ಮೇಲೆ ಬಿದ್ದಿವೆ, ಇದೇ ವೇಳೆ ಶಿಲ್ಪಾ  ಮನೆಯೊಳಗೆ ಕುಳಿತಿದ್ದರಿಂದ 4-5 ಇಂಚಿನ […]

Advertisement

Wordpress Social Share Plugin powered by Ultimatelysocial