ಲಾಕ್ಡೌನ್ ಎಫೆಕ್ಟ್ ಆನ್ಲೈನ್ ಮ್ಯಾರೆಜ್

ಧಾರವಾಡ: ಕೊರೊನಾ ಕಂಟಕ ವಿಶ್ವದಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಜನ ಗೃಹ ಬಂಧನದಲ್ಲಿದ್ದಾರೆ. ಇತ್ತ ಮದುವೆ ನಿಶ್ಚಯವಾಗಿ ಹಸೆಮಣೆ ಏರಬೇಕಿದ್ದ ಬಹುತೇಕ ಜೋಡಿಗಳು ಮದುವೆ ಮುಂದೂಡಿದ್ದರೆ, ಕೆಲವರು ಸರಳವಾಗಿ ವಿವಾಹವಾಗಿದ್ದಾರೆ. ಆದ್ರೆ ಧಾರವಾಡದಲ್ಲಿ ಡಿಫರೆಂಟ್ ಮದುವೆ ನಡೆದಿದೆ. ಲಾಕ್‌ಡೌನ್ ಪಾಲಿಸುವುದರೊಂದಿಗೆ ಈ ಜೋಡಿ ಆನ್‌ಲೈನ್‌ನಲ್ಲಿಯೇ ಸತಿ-ಪತಿ ಆಗಿದ್ದಾರೆ. ಧಾರವಾಡದ ಯುವಕ ಇಮ್ರಾನ್ -ಕೊಪ್ಪಳ ತಾಜಮಾ ಬೇಗಂ ಎಂಬುವರನ್ನು ವಿಡಿಯೋ ಕಾಲ್ ಮೂಲಕ ವರಿಸಿದ್ದಾರೆ. ಈ ಇಬ್ಬರ ಅಂತರ್ಜಾಲ ಮದುವೆಗೆ ಹಿರಿಯರು ಸಹ ಅಸ್ತು ಎಂದಿದ್ದು, ಮುಸ್ಲಿಂ ಸಂಪ್ರದಾಯದಂತೆಯೇ ಈ ಕಾರ್ಯ ಜರುಗಿದೆ. ಲಾಕ್‌ಡೌನ್ ಮುಗಿದ ಮೇಲೆ ಸೊಸೆಯನ್ನ ಮನೆ ತುಂಬಿಸಿಕೊಳ್ಳುವುದಾಗಿ ಇಮ್ರಾನ್ ಕುಟುಂಬಸ್ಥರು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಜಮೀರ್ ಅವರದ್ದು ಸಮಾಜಘಾತುಕ ನಡವಳಿಕೆ

Wed Apr 22 , 2020
ಮೈಸೂರು : ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಹಲ್ಲೆ ಪ್ರಕರಣ ಖಂಡನೀಯ. ಘಟನೆ ಕುರಿತು ಬೇಜವಾಬ್ದಾರಿ ತೋರಿದ ಶಾಸಕ ಜಮೀರ್ ಅಹಮದ್ ರನ್ನು ಕಾಂಗ್ರೆಸ್ ಪಕ್ಷವೇ ಹೊರ ಹಾಕಬೇಕೆಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ. ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಿದ ವಿಶ್ವನಾಥ್, ಜಮೀರ್ ಮಾತುಗಳು ಸಾಮಾನ್ಯ ಅಲ್ಪ ಸಂಖ್ಯಾತರ ಭವಿಷ್ಯಕ್ಕೆ ಮುಳುವಾಗಿದೆ. ಜಮೀರ್ ಅಹಮದ್ ಖಾನ್ ಅವರದ್ದು ಸಮಾಜಘಾತುಕ ನಡವಳಿಕೆ. […]

Advertisement

Wordpress Social Share Plugin powered by Ultimatelysocial