ಲಾಕ್ಡೌನ್ ಮುಂದುವರೆಯುವ ಸಾಧ್ಯತೆ

ಬೆಂಗಳೂರು ಸಹಿತ ದೇಶದ 11 ನಗರಗಳಲ್ಲಿ ಲಾಕ್‌ಡೌನ್‌ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ದೇಶದ 11 ನಗರಗಳಲ್ಲೇ ಶೇ.70 ಸೋಂಕಿತರು ಇರುವುದರಿಂದ ಇಲ್ಲಿ ಮಾತ್ರ ಲಾಕ್‌ಡೌನ್‌ 5 ಪ್ರಕಟಿಸುವ ಸಾಧ್ಯತೆಯಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಲಿರುವ ಮನ್‌ ಕಿ ಬಾತ್‌ ವೇಳೆಯಲ್ಲೇ ಈ ಬಗ್ಗೆ ಪ್ರಕಟವಾಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜೂನ್​ ತಿಂಗಳಲ್ಲೂ ಲಾಕ್​ಡೌನ್​ ಮೂಂದುವರಿಯಲಿದೆ. ಆದರೆ ಲಾಕ್​ಡೌನ್  ಕೆಲವೇ ನಗರಗಳಿಗೆ ಮಾತ್ರ ಸೀಮಿತವಾಗಲಿದೆ ಎನ್ನಲಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚಾಗಿರುವ 11 ನಗರಗಳಲ್ಲಿ ಲಾಕ್​ಡೌನ್  ಜಾರಿಯಾಗಲಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ನವದೆಹಲಿ, ಮುಂಬೈ, ಪುಣೆ, ಥಾಣೆ, ಸೂರತ್, ಅಹಮದಾಬಾದ್, ಬೆಂಗಳೂರು, ಇಂದೋರ್, ಚೆನ್ನೈ, ಜೈಪುರ ಮತ್ತು ಕೋಲ್ಕತ್ತಾದಲ್ಲಿ ನಿರ್ಬಂಧಗಳು ಮುಂದುವರಿಯಲಿವೆ. ದೇಶಾದ್ಯಂತ ಇರುವ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಶೇಕಡಾ 70 ರಷ್ಟು ಪ್ರಕರಣಗಳು ಈ 11 ನಗರಗಳಲ್ಲಿ ಪತ್ತೆಯಾಗಿವೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾದಿಂದ ಸತ್ತವರ ಹೆಣ ಇಡಲು ಜಾಗವಿಲ್ಲ

Thu May 28 , 2020
ನವದೆಹಲಿ: ದೆಹಲಿಯ ಅತ್ಯಾಧುನಿಕ ಹಾಗೂ ಸುಸಜ್ಜಿತ ಆಸ್ಪತ್ರೆಗಳಲ್ಲಿ ಲೋಕ ನಾಯಕ ಜಯಪ್ರಕಾಶ ನಾರಾಯಣ್ (ಎಲ್​ಎನ್​ಜೆಪಿ) ಆಸ್ಪತ್ರೆಯು ಒಂದಾಗಿದೆ. ಇಲ್ಲಿನ ಶವಾಗಾರದಲ್ಲಿ ಕರೊನಾ ಸೋಂಕು ಹಾಗೂ ಶಂಕೆಯಿಂದ ಮೃತಪಟ್ಟವರ 108 ಶವಗಳಿವೆ. ಶೀತಲೀಕೃತ ಘಟಕದಲ್ಲಿ 80 ಶವಗಳನ್ನಿಡಲಷ್ಟೇ ವ್ಯವಸ್ಥೆ ಇದೆ. ಇನ್ನುಳಿದ 28 ಶವಗಳನ್ನು ನೆಲದ ಮೇಲೆ ಅಲ್ಲಲ್ಲಿ ಇಡಲಾಗಿದೆ. ದುರಂತವೆಂದರೆ ಅದಕ್ಕೂ ಜಾಗ ಸಾಕಾಗದೆ, ಒಂದರ ಮೇಲೊಂದರಂತೆ ಸೇರಿಸಲಾಗಿದೆ. ಇದಷ್ಟೇ ಅಲ್ಲ, ಈ ಗಾಯದ ಮೇಲೆ ಬರೆ ಎಳೆಯುವಂಥ ಸ್ಥಿತಿಯೂ […]

Advertisement

Wordpress Social Share Plugin powered by Ultimatelysocial