ಲಾಕ್‌ಡೌನ್ ೧೦ ವಾರಗಳ ಕಾಲ ಮುಂದುವರಿಕೆ..?

ನವದೆಹಲಿ : ಕೊರೊನಾ ವೈರಸ್ ಭೀತಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೇ. 3 ರ ನಂತರ ಭಾರತದಲ್ಲಿ ಇನ್ನೂ 10 ವಾರಗಳ ಲಾಕ್ ಡೌನ್ ಅವಶ್ಯಕತೆ ಇದೆ ಎಂದು ವಿಶ್ವದ ಅತಿದೊಡ್ಡ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ನ ಸಂಪಾದಕ ರಿಚರ್ಡ್ ಹಾರ್ಟನ್ ಸಲಹೆ ನೀಡಿದ್ದಾರೆ.ಒಂದು ವೇಳೆ ಲಾಕ್ ಡೌನ್ ಸಡಿಲಗೊಳಿಸಿದರೆ ಕೊರೊನಾ ಸೋಂಕಿನ ಎರಡನೇ ಅಲೆ ಭಾರತಕ್ಕೆ ಅಪ್ಪಳಿಸಲಿದೆ.ಈಗಿರುವ ಸ್ಥಿತಿಗಿಂತ ಗಂಭೀರ ಸ್ಥಿತಿಗೆ ಭಾರತ ತಲುಪಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಚೀನಾದಲ್ಲಿ ಜನವರಿ 23 ರಿಂದ ಏಪ್ರಿಲ್ ವರೆಗೂ ಲಾಕ್ ಡೌನ್ ಅನುಸರಿಸಿತ್ತು. ಹೀಗಾಗಿ ಅಲ್ಲಿ ಕೊರೊನಾ ನಿಯಂತ್ರಣ ಈಗ ಒಂದು ಹಂತಕ್ಕೆ ಬಂದಿದೆ. ಭಾರತವೂ ಕೂಡ ಅದೇ ಮಾದರಿ ಅನುಸರಿಸಬೇಕಿದೆ ಎಂದು ಹಾರ್ಟನ್ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸಿಲಿಕಾನ್ ಸಿಟಿಗೆ ಬಿಹಾರಿ ಕೊರೊನಾ ಬಾಂಬ್

Thu Apr 23 , 2020
ಬೆಂಗಳೂರಿಗೆ ಹೊಂಗಸಂದ್ರದ ಸ್ಲಂ ನಿವಾಸಿ ಬಿಹಾರಿ ಕಾರ್ಮಿಕನಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಅವನ ಸಂಪರ್ಕಕ್ಕೆ ಬಂದ 165 ಮಂದಿಯನ್ನು ಕ್ವಾರಂಟೈನ್ ಇಡಲಾಗಿದೆ. ಹೊಂಗಸಂದ್ರವನ್ನು ಸೀಲ್ ಡೌನ್ ಮಾಡಲಾಗಿದೆ. ಬಿಹಾರಿ ಕಾರ್ಮಿಕನ ಟ್ರಾವೆಲ್ ಹಿಸ್ಟರಿ ಭಯಾನಕವಾಗಿದೆ. ಹೊಂಗಸಂದ್ರ ಪ್ರದೇಶಕ್ಕೆ ರಾಸಾಯನಿಕ ಸಿಂಪಡಿಸಲಾಗ್ತಿದೆ. ಎಲ್ಲರ ಪರೀಕ್ಷೆ ನಡೆಯುತ್ತಿದೆ. ಸುತ್ತಮುತ್ತಲ ಜನರು ಭಯಗೊಂಡಿದ್ದಾರೆ. ಬಿಹಾರಿ ಕಾರ್ಮಿಕ ಅನೇಕ ಕಡೆ ಓಡಾಡಿದ್ದಾನೆ. ಆತನ ಸಂಪರ್ಕದಲ್ಲಿದ್ದ 9 ಮಂದಿಗೆ ಸೋಂಕಿರುವುದು ದೃಢಪಟ್ಟಿದೆ. ಈತ ಹೋಗಿದ್ದ ಮೂರು ಆಸ್ಪತ್ರೆಯನ್ನು ಸೀಲ್ ಡೌನ್ […]

Advertisement

Wordpress Social Share Plugin powered by Ultimatelysocial