ವನ್ಯಜೀವಿಗಳ ಮಾರಣಹೋಮ

ಕೋವಿಡ್-19 ಲಾಕ್‌ಡೌನ್‌ ಸಂದರ್ಭದಲ್ಲಿ ಇಡೀ ದೇಶವೇ ಸಮಸ್ಯೆಯಲ್ಲಿ ಮುಳುಗೇಳುತ್ತಿರುವಂತಹ ಹೊತ್ತಿನಲ್ಲಿ ಅತ್ತ ದೂರದ ನಿರ್ಜನ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ಮಾರಣಹೋಮ ಎಗ್ಗಿಲ್ಲದಂತೆ ನಡೆದಿದೆ. ಲಾಕ್ ಡೌನ್ ಆರಂಭವಾಗುವ ಹಿಂದಿನ ಆರು ವಾರ ಫೆಬ್ರವರಿ.10 ರಿಂದ ಮಾರ್ಚ್.22 ಮತ್ತು ಲಾಕ್ ಡೌನ್ ಆರಂಭವಾದ ನಂತರ ಆರು ವಾರ ಮಾರ್ಚ್.23 ರಿಂದ ಮೇ.3 ರ ವರೆಗಿನ ಸಮಯದಲ್ಲಿ ವನ್ಯಜೀವಿಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಆ ಅಧ್ಯಯನದಲ್ಲಿ ಕಂಡುಬಂದಿರುವ ಅಂಕಿ-ಅಂಶಗಳ ಪ್ರಕಾರ, ಲಾಕ್‌ಡೌನ್‌ ಅವಧಿಯಲ್ಲಿ ಬೇಟೆ ಪ್ರಕರಣಗಳು ಶೇ 35ರಿಂದ 88ರವರೆಗೆ ಹೆಚ್ಚಾಗಿದೆ ಎಂದು ಎಲ್ಲಾ ರಾಜ್ಯಗಳ ವನ್ಯಜೀವಿ ಸಂರಕ್ಷಣಾ ವಲಯಗಳಿಗೆ ಬೇಟಿ ನೀಡಿದ ಡಬ್ಲ್ಯೂಡಬ್ಲ್ಯೂಎಫ್-ಇಂಡಿಯಾ ವರದಿ ಮಾಡಿದೆ. ಈ ವರದಿಯು ಪ್ರತ್ಯೇಕವಾಗಿ ಉತ್ತರಾಖಂಡ, ಕರ್ನಾಟಕ, ಒಡಿಶಾಗಳಲ್ಲಿ ಪೆಂಗೋಲಿನ್‌ಗಳ ಬೇಟೆ ಅತಿಹೆಚ್ಚಾಗಿ ಕಂಡುಬಂದಿದೆ. ಹಾಗೇ ರಾಜಸ್ಥಾನದಲ್ಲಿ ಸಾರಂಗಗಳ ಬೇಟೆ ಅವ್ಯಾಹತವಾಗಿ ನಡೆದಿದೆ. ಇನ್ನುಳಿದ ರಾಜ್ಯಗಳಲ್ಲಿ ಕೋತಿಗಳು, ಪುನುಗು ಬೆಕ್ಕು ಮತ್ತಿತರ ಪ್ರಾಣಿಗಳನ್ನು ಹತ್ಯೆ ಮಾಡಲಾಗಿದೆ. ವನ್ಯಜೀವಿಗಳ ಬೇಟೆಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 222 ಜನರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಆನ್ ಲೈನ್ ಶಿಕ್ಷಣ ಒಂದು ಗೀಳಾಗಿದೆ

Sat Jun 6 , 2020
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಆನ್ ಲೈನ್ ಶಿಕ್ಷಣ ಇದೀಗ ಒಂದು ಗೀಳಾಗಿದೆ. ಮಕ್ಕಳ ಆನ್ ಲೈನ್ ಶಿಕ್ಷಣಕ್ಕೆ ವಿರೋಧವಿದೆ. ಹೀಗಿದ್ದೂ ಜೂನ್ 8ರ ಸೋಮವಾರ ಆನ್ ಲೈನ್ ಶಿಕ್ಷಣದ ಬಗ್ಗೆ ಸಭೆ ನಡೆಸಿ ಚರ್ಚೆ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ಮಹತ್ವದ ನಿರ್ಧಾರ ಜೂನ್ 8ರಂದು ಆನ್ ಲೈನ್ ಶಿಕ್ಷಣದ ಬಗ್ಗೆ ಹೊರ ಬರಲಿದೆ. ರಾಜ್ಯದಲ್ಲಿ ಶಾಲೆಗಳು […]

Advertisement

Wordpress Social Share Plugin powered by Ultimatelysocial