ವರದಕ್ಷಿಣೆ ಕಿರುಕುಳ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಅನುಮಾನಸ್ಪದ ಸಾವು.|crime|

ಬೆಂಗಳೂರು, ಜ. 23: ಎರಡು ತಿಂಗಳ ಹಿಂದೆ ಸೌದಿಯಿಂದ ಬಂದಿದ್ದ ಗೃಹಿಣಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಕೊಲೆ ಮಾಡಿ ವಿಮಾನದಲ್ಲಿ ಪರಾರಿಯಾಗಿದ್ದ ಕೊಲೆ ಆರೋಪಿಗಳನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

ರಾಜಾಜಿನಗರದ ನಿವಾಸಿ ಸುಮ್ರಾ ಸಿಮೀನ್ ಮೃತಪಟ್ಟವರು. ಈಕೆಯ ಪತಿ ಶಹಬಾಜ್ ಖಾನ್‌ನನ್ನು ರಾಜಾಜಿನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವರದಕ್ಷಿಣೆ ಕಿರಕುಳದಿಂದ ಸುಮ್ರಾ ಸಿಮೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

ಆರು ವರ್ಷದ ಹಿಂದೆ ಶಹಬಾಜ್ ಖಾನ್‌ನನ್ನು ಮದುವೆಯಗಿದ್ದ ನುಮ್ರಾಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಕುಟುಂಬ ದುಬೈನಲ್ಲಿ ನೆಲೆಸಿತ್ತು. ಎರಡು ತಿಂಗಳ ಹಿಂದಷ್ಟೇ ವಾಪಸು ಬೆಂಗಳೂರಿಗೆ ಬಂದಿತ್ತು. ಶಹಬಾಜ್ ಸಹೋದರಿಯ ಮನೆಯಲ್ಲಿದ್ದರು. ವರದಕ್ಷಿಣೆ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಳ ಪೋಷಕರು ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿ ದೂರು ನೀಡಿದ್ದು, ಪತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಹಂತಕರ ಸೆರೆ: ಜಗಳ ಬಿಡಿಸಲು ಹೋದ ವ್ಯಕ್ತಿಯನ್ನು ಕೊಲೆ ಮಾಡಿ ವಿಮಾನದಲ್ಲಿ ಎಸ್ಕೇಪ್ ಆಗಿದ್ದ ಇಬ್ಬರು ಕೊಲೆ ಹಂತಕರನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಆಂಥೋನಿ ಸಿಂಗ್, ಕಿಶನ್ ಸಿಂಗ್, ಬಂಧಿತ ಆರೋಪಿಗಳು. ಜ. 1 ರಂದು ಕೊತ್ತನೂರಿನ ಹನುಮಂತನಗರದಲ್ಲಿ ಮುರುಗನ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಸ್ನೇಹಿತರ ಜಗಳ ಬಿಡಿಸಲು ಹೋಗಿದ್ದ ಮುರುಗನ್ ಮೇಲೆ ಆರು ಮಂದಿ ಹಲ್ಲೆ ಮಾಡಿದ್ದರು. ರಕ್ತ ಸಾವ್ರ ಉಂಟಾಗಿ ಐದು ದಿನಗಳ ನಂತರ ಮೃತಪಟ್ಟಿದ್ದ. ಮುರುಗನ್ ಸಾವಿನ ವಿಚಾರ ತಿಳಿದು ಹಂತಕರು ಪರಾರಿಯಾಗಿದ್ದರು. ಇದೀಗ ಇಬ್ಬರು ಸಿಕ್ಕಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

PM:ಮಾರ್ಚ್ ಅಂತ್ಯದ ವೇಳೆಗೆ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಪೋರ್ಟಲ್ ರಾಡಿಯಾಗಲಿದೆ;

Sun Jan 23 , 2022
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ಗತಿ ಶಕ್ತಿ ಕಾರ್ಯಕ್ರಮವು ದೇಶದಲ್ಲಿ ಮೂಲಭೂತ ಸೌಕರ್ಯ ಯೋಜನೆಗಳ ರಾಷ್ಟ್ರೀಯ ಮಾಸ್ಟರ್‌ಪ್ಲಾನ್‌ಗಾಗಿ ಡಿಜಿಟಲ್ ವೇದಿಕೆಯನ್ನು ಕಲ್ಪಿಸುತ್ತದೆ, ಇದು ಮಾರ್ಚ್ 31, 2022 ರೊಳಗೆ ಸಿದ್ಧವಾಗಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಎಲ್ಲಾ ಮೂಲಸೌಕರ್ಯ ಯೋಜನೆಗಳನ್ನು ರಾಷ್ಟ್ರೀಯ ಮಾಸ್ಟರ್‌ಪ್ಲಾನ್ [ಪೋರ್ಟಲ್] ನಲ್ಲಿ ಮ್ಯಾಪ್ ಮಾಡಲಾಗುತ್ತದೆ. ಕೇಂದ್ರ ಸಚಿವಾಲಯಗಳ ಮೂಲಸೌಕರ್ಯ ಯೋಜನೆಗಳ 75% ಡೇಟಾವನ್ನು ಈಗಾಗಲೇ ಅಪ್‌ಲೋಡ್ ಮಾಡಲಾಗಿದೆ. ನಾವು ಈಗ ರಾಜ್ಯ […]

Advertisement

Wordpress Social Share Plugin powered by Ultimatelysocial