ವಸಂತ್ ರೈಜಿ ಇನ್ನಿಲ್ಲ

ಭಾರತದ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗ ವಸಂತ್ ರೈಜಿಯವರು ಇಂದು ಅಗಲಿದ್ದಾರೆ. ಅಂದಹಾಗೇ 100 ವರ್ಷ ವಯಸ್ಸಾಗಿದ್ದ ಅವರಿಗೆ ವಯೋಸಹಜ ಕಾರಣದಿಂದ ಇಂದು ಬೆಳಗಿನ ಜಾವ 2.20 ರ ಸರಿಸುಮಾರಿಗೆ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿರುವ ಅವರ ನಿವಾಸದಲ್ಲಿ ಮೃತಪಟ್ಟಿದ್ದಾರೆ. 1939 ರಲ್ಲಿ ನಾಗ್ಪುರದಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ತಂಡದ ಪರ ಸೆಂಟ್ರಲ್ ಪ್ರಾವಿನ್ಸಸ್ ಪರ ಆಡುವ ಮೂಲಕ ಕ್ರಿಕೆಟ್ ರಂಗಕ್ಕೆ ಕಾಲಿಟ್ಟಿದ್ದರು. ಹಾಗೂ 1940 ರಲ್ಲಿ 9 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ ಅವರು ಒಟ್ಟು 277 ರನ್ ಗಳಿಸಿದ್ದರು, ಜೊತೆಗೆ 68 ಗರಿಷ್ಠ ವೈಯಕ್ತಿಕ ರನ್ ಇವರದ್ದಾಗಿತ್ತು.

 

 

Please follow and like us:

Leave a Reply

Your email address will not be published. Required fields are marked *

Next Post

ಹಳಬರು,ಹೊಸಬರು ಎಂಬ ವಿಚಾರವೇ ಬರಲ್ಲ

Sat Jun 13 , 2020
ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಸರ್ಕಾರ ಉಳಿಸಿದವರಿಗೂ, ಸಾಮಾನ್ಯ ಕಾರ್ಯಕರ್ತರಿಗೂ ತೃಪ್ತಿ ತರುವ ರೀತಿ ನಡೆಯಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ – ಜೆಡಿಎಸ್ ನಲ್ಲಿದ್ದ ಅನೇಕರು ಬಿಜೆಪಿಗೆ ಬಂದಿದ್ದಾರೆ. ಸರ್ಕಾರ ರಚಿಸಿ, ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಋಣವನ್ನು ನಾವು ತೀರಿಸಬೇಕಾಗಿದೆ. ಸುಮ್ಮನೆ ಕರೆದು ಮೋಸ ಮಾಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಹಲವು ವರ್ಷದಿಂದ ಪಕ್ಷ ಕಟ್ಟಿದ ಸಾಮಾನ್ಯ ಕಾರ್ಯಕರ್ತರು […]

Advertisement

Wordpress Social Share Plugin powered by Ultimatelysocial