ವಾಯುಸೇನೆಯ ಮಿಗ್-೨೯ ಯುದ್ಧ ವಿಮಾನ ಪತನ

ಚಂಡೀಘಡ: ಭಾರತೀಯ ವಾಯುಸೇನೆಗೆ ಸೇರಿದೆ ಮಿಗ್-೨೯ ಯುದ್ಧ ವಿಮಾನ ಇಂದು ಬೆಳಗ್ಗೆ ಪಂಜಾಬ್ ನಲ್ಲಿ ಪತನವಾಗಿದೆ ಎಂದು ತಿಳಿದುಬಂದಿದೆ. ಪಂಜಾಬ್‌ನ ನವಾನ್ ಶಹರ್ ನಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಯುದ್ಧ ವಿಮಾನ ಪತನಕ್ಕೂ ಮುನ್ನ ಪೈಲಟ್ ಪ್ಯಾರಾಚೂಟ್ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿರ್ಜನ ಪ್ರದೇಶದಲ್ಲಿ ವಿಮಾನಪತನವಾಗಿದ್ದರಿಂದ ಹೆಚ್ಚಿನ ಸಾವು-ನೋವು ಸಂಭವಿಸಿಲ್ಲ. ಪ್ರಸ್ತುತ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ದೌಡಾಯಿಸಿದ್ದು, ಪೈಲಟ್ ರನ್ನು ರಕ್ಷಿಸಿದ್ದಾರೆ. ಅಂತೆಯೇ ವಾಯುಸೇನೆಯ ಉನ್ನತಾಧಿಕಾರಿಗಳು ಕೂಡ ಅಪಘಾತ ಸ್ಥಳಕ್ಕೆ ಆಗಮಿಸುತ್ತಿದ್ದು, ಅಪಘಾತ ಮಾಹಿತಿ ಪಡೆಯಲಿದ್ದಾರೆ. ವಿಮಾನ ಪತನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ತಾಂತ್ರಿಕ ದೋಷದಿಂದ ವಿಮಾನ ಪತನವಾಗಿರಬಹುದು ಎಂದು ಹೇಳಲಾಗುತ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ಮಹಾರಾಷ್ಟ ರೈಲು ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ

Fri May 8 , 2020
ಮಹಾರಾಷ್ಟçದ ಔರಾಂಗಾಬಾದ್‌ನಲ್ಲಿ ನಡೆದ ರೈಲು ಅಪಘಾತದಲ್ಲಿ ವಲಸೆ ಕಾರ್ಮಿಕರ ಪ್ರಾಣಹಾನಿಯಾಗಿದ್ದು, ತೀವ್ರ ಬೇಸರ ಉಂಟುಮಾಡಿದೆ. ಈ ಘಟನೆ ಬಗ್ಗೆ ಪ್ರಧಾನಿ ಮೋದಿ, ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರೊಂದಿಗೆ ಚರ್ಚಿಸಿ ಕಾರ್ಮಿಕರ ಕುಟುಂಬಕ್ಕೆ ಸಹಾಯ ಒದಗಿಸುವಂತೆ ಟ್ವೀಟ್ ಮೂಲಕ ಸಂತಾಪ ಸೂಚಿಸಿ, ಈ ಕೊರೊನಾ ಸಮಸ್ಯೆಯೊಂದಿಗೆ ಈ ಕಹಿ ಘಟನೆ ನಡೆದಿರುವುದು ಮನಸ್ಸಿಗೆ ತುಂಬಾ ಬೇಸರ ಉಂಟು ಮಾಡಿದೆ. ಜೊತೆಗೆ ಈ ಘಟನೆಯ ಸಂಪೂರ್ಣ ವರದಿಯನ್ನು ವಿಚಾರ ಮಾಡಲು ಸಂಬAಧಪಟ್ಟ […]

Advertisement

Wordpress Social Share Plugin powered by Ultimatelysocial