ವಿಘ್ನ ನಿವಾರಣೆಗಾಗಿ ಮುಂಬೈ ನಿವಾಸಿಗಳ ಪ್ರಾರ್ಥನೆ

ಮುಂಬೈ: ಭೀಕರ ನಿಸರ್ಗ ಚಂಡಮಾರುತ ಮಹಾರಾಷ್ಟ್ರ ಕರಾವಳಿಗೆ ಅಧಿಕೃತವಾಗಿ ಅಪ್ಪಳಿಸಿದ್ದು, ಮುಂದಿನ ಮೂರು ಗಂಟೆಗಳ ಕಾಲ ಕರಾವಳಿಯಾದ್ಯಂತ ತನ್ನ ಪ್ರಭಾವವನ್ನು ಬೀರಲಿದೆ.ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆ, ಮುಂದಿನ ಮೂರು ಗಂಟೆಗಳು ಅತ್ಯಂತ ಸೂಕ್ಷ್ಮವಾಗಿದ್ದು, ಯಾರೂ ಮನೆಯಿಂದ ಹೊರಬರದಂತೆ ಸೂಚನೆ ನೀಡಿದೆ. ಇತ್ತ NDRF ತಂಡ ಕೂಡ ರಕ್ಷಣಾ ಕಾರ್ಯಾಚರಣೆಗಳಿಗೆ ಸಜ್ಜಾಗಿದೆ. ನಿಸರ್ಗ ಚಂಡಮಾರುತದಿಂದ ಮುಂಬೈಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕಾರ್ಮೋಡದ ವಾತಾವರಣ ಕೂಡ ಇದೆ. ಈ ಮಧ್ಯೆ ಇಲ್ಲಿನ ಖಾರ್ ದಂಡಾ ಪ್ರದೇಶದಲ್ಲಿರುವ ಗಣೇಶನ ದೇವಸ್ಥಾನ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, ಜನ ದೇವಸ್ಥಾನದ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದಾರೆ.ಖಾರ್ ದಂಡಾ ಪ್ರದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ದೇವಸ್ಥಾನ, ಇದೀಗ ಸಮುದ್ರ ನೀರಿನ ಪ್ರವಾಹದಿಂದಾಗಿ ಸಂಪೂರ್ಣವಾಗಿ ಮುಳುಗಿದೆ. ಮಹಾರಾಷ್ಟ್ರಿಗರಿಗೆ ಗಣೇಶನ ಮೇಲೆ ಅಪಾರ ಭಕ್ತಿ. ಗಣೇಶನ ಹಬ್ಬದ ಸಂದರ್ಭದಲ್ಲಿ ರಾಜಧಾನಿ ಮುಂಬೈ ಸೇರಿದಂತೆ ಇಡೀ ಮಹಾರಾಷ್ಟ್ರ ಅತ್ಯಂತ ವಿಜೃಂಭಣೆಯಿಂದ ವಿಘ್ನ ನಿವಾರಕನನ್ನು ಪೂಜಿಸುತ್ತದೆ.

 

Please follow and like us:

Leave a Reply

Your email address will not be published. Required fields are marked *

Next Post

ಭದ್ರತಾ ಸಮಿತಿ ಸದಸ್ಯತ್ವಕ್ಕೆ ಚುನಾವಣೆ

Wed Jun 3 , 2020
ವಿಶ್ವಸಂಸ್ಥೆ: ಕೋವಿಡ್​ 19 ಕಾರಣಕ್ಕೆ ಹೊಸ ಚುನಾವಣಾ ವ್ಯವಸ್ಥೆಯೊಂದಿಗೆ ಜೂನ್ 17ರಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿಗೆ ಸಂಬಂಧಿಸಿದ ಐದು ಕಾಯಂಯೇತರ ಸದಸ್ಯತ್ವಕ್ಕೆ ಚುನಾವಣೆ ನಡೆಯಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಪ್ರತಿಯೊಬ್ಬ ಸದಸ್ಯರು ಮತ ಚಲಾಯಿಸಲಿದ್ದಾರೆ. ಇದೇ ವೇಳೆ, 75ನೇ ಜನರಲ್ ಅಸೆಂಬ್ಲಿಯ ಅಧ್ಯಕ್ಷರ ಆಯ್ಕೆ ಕೂಡ ನಡೆಯಲಿದೆ ಎಂದು ಯುಎನ್​ಜಿಎ ಅಧ್ಯಕ್ಷ ತಿಜ್ಜಾನಿ ಮುಹಮ್ಮದ್ ಬಂಡೆ ತಿಳಿಸಿದ್ದಾರೆ. ಜನರಲ್ ಅಸೆಂಬ್ಲಿಯ 10 ಕಾಯಂಯೇತರ ಸದಸ್ಯ […]

Advertisement

Wordpress Social Share Plugin powered by Ultimatelysocial