ವಿದೇಶದಲ್ಲಿ ಭಾರೀ ಸದ್ದು ಮಾಡ್ತಿದೆ ಕನ್ನಡದ ಸಿನಿಮಾ

 

ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿ, ಪುಟ್ಟಣ್ಣನವರು ನಿರ್ಮಿಸಿರುವ ಅಮೃತಮತಿ ಚಿತ್ರವು ಇತ್ತಿಚೆಗಷ್ಟೇ ಆಸ್ಟ್ರೀಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ಗೊತ್ತೇ ಇದೆ. ಇದೀಗ ಇನ್ನೊಂದು ಸಂತೋಷದ ಸುದ್ದಿಯೊಂದಿಗೆ ಚಿತ್ರತಂಡ ಮುಂದೆಬಂದಿದೆ.ಅಮೃತಮತಿ ಚಿತ್ರವೂ ಅಮೆರಿಕದ ಅಟ್ಲಾಂಟದಲ್ಲಿ ನಡೆಯುವ ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅಧಿಕೃತ ಆಯ್ಕೆಯಾಗಿದ್ದು, ಪ್ರದರ್ಶನಗೊಳ್ಳಲಿದೆ. ಕರೊನಾ ಕಾರಣದಿಂದ ಈ ಚಿತ್ರೋತ್ಸವ ಕೂಡ ಆನ್​ಲೈನ್​ ಮೂಲಕ ಜು. 29ರಿಂದ ಆಗಸ್ಟ್ 12ರ ವರೆಗೆ ನಡೆಯಲಿದೆ. ಈ ಸಿನಿಮಾ ಎಲ್ಲ ವಿಭಾಗಗಳಲ್ಲಿ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆಯಾಗಿದೆ.ಹದಿಮೂರನೇ ಶತಮಾನದಲ್ಲಿ ಜನ್ನಕವಿ ರಚಿತ ಯಶೋಧರ ಚರಿತೆಯನ್ನು ಆಧರಿಸಿ ಅಮೃತಮತಿ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದಲ್ಲಿ ಅಮೃತಮತಿಯಾಗಿ ಹರಿಪ್ರಿಯಾ ನಟಿಸಿದ್ದು, ಯಶೋಧರ ಪಾತ್ರದಲ್ಲಿ ಕಿಶೋರ್​ ಅಭಿನಯಿಸಿದ್ದಾರೆ. ಇತರೆ ತಾರಾಗಣದಲ್ಲಿ ಸುಂದರ್​ರಾಜ್​, ಪ್ರಮೀಳಾ ಜೋಷಾಯ್​, ತಿಲಕ್​, ಸುಪ್ರಿಯಾ ರಾವ್​, ಅಂಬರೀಷ್​ ಸಾರಂಗಿ, ವತ್ಸಲಾ ಮೋಹನ್​ ನಟಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನಟಿ ಹೇಮಾಮಾಲಿನಿಗೆ ಸೋಂಕಿನ ಶಂಕೆ

Mon Jul 13 , 2020
ಬಚ್ಚನ್ ಕುಟುಂಬದ ನಾಲ್ವರಿಗೆ ಸೋಂಕು ಧೃಢಪಟ್ಟ ಹಿನ್ನಲೆಯಲ್ಲಿ ಖ್ಯಾತ ನಟಿ ಹೇಮಾ ಮಾಲಿನಿ ಅವರಿಗು ಸೋಂಕು ಇದೆ ಅವರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ ಎನ್ನವ ವದಂತಿಗಳು ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಅದಕ್ಕೆಲ್ಲ ನಟಿ ಹೇಮಮಾಲಿನಿ ಅವರು ವಿಡೀಯೊ ಸಂದೇಶದ ಮೂಲಕ ತನಗೇನು ಆಗಿಲ್ಲ, ತಾನು ಆರಾಮಾಗಿದ್ದೇನೆ….ನನಗೆ ಕೊರೋನಾ ಇಲ್ಲ ಹಾಗಾಗಿ ಸುಳ್ಳು ಸುದ್ದಿಗಳನ್ನ ಹಬ್ಬಿಸಬೇಡಿ ಎಂದು ಹೇಳಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial