ವಿಧಾನಪರಿಷತ್ ಚುನಾವಣೆ ಆರಂಭ

ಬೆಂಗಳೂರು: ಕೊರೊನಾ  ಆರ್ಭಟದ ನಡುವೆಯೂ ವಿಧಾನಪರಿಷತ್ ಚುನಾವಣೆ ಲಾಬಿ ತೀವ್ರಗೊಳ್ಳುತ್ತಿದೆ. ಕೊರೊನಾ ಕಾರಣದಿಂದ ಪರಿಷತ್ ಚುನಾವಣೆ ಮುಂದೂಡಲ್ಪಡುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ನಿಗದಿತ ಅವಧಿಗೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು ಮೇಲ್ಮನೆಗೆ ಆಯ್ಕೆಯಾಗಲು ಆಕಾಂಕ್ಷಿಗಳ ಲಾಬಿ ಆರಂಭಗೊಂಡಿದೆ. ಜೂನ್ ತಿಂಗಳಲ್ಲಿ ಒಟ್ಟು 16 ಪರಿಷತ್ ಸ್ಥಾನಗಳ ಅವಧಿ ಮುಕ್ತಾಯಗೊಳ್ಳಲಿದೆ. ಈ ಪೈಕಿ ಚುನಾಯಿತ ಸ್ಥಾನಗಳು 7 ಇದ್ದರೆ, 5 ನಾಮನಿರ್ದೇಶಿತ ಸ್ಥಾನಗಳಿವೆ. ಅದೇ ರೀತಿ ಪದವೀಧರ ಕ್ಷೇತ್ರಗಳ ಸ್ಥಾನಗಳು 2 ಹಾಗೂ ಶಿಕ್ಷಕರ ಕ್ಷೇತ್ರಗಳ ಸ್ಥಾನಗಳು ಖಾಲಿಯಾಗಲಿವೆ.

Please follow and like us:

Leave a Reply

Your email address will not be published. Required fields are marked *

Next Post

ಉಭಯ ಗಾನ ವಿದುಷಿ ಶ್ಯಾಮಲಾ ಜಿ. ಭಾವೆ ವಿಧಿವಶ

Fri May 22 , 2020
ಬೆಂಗಳೂರು: ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತ ಪದ್ಧತಿಗಳೆರಡರಲ್ಲೂ ನಿಪುಣರಾಗಿದ್ದ ಉಭಯ ಗಾನ ವಿದುಷಿ ಶ್ಯಾಮಲಾ ಜಿ. ಭಾವೆ(79) ಅವರು ಶೇಷಾದ್ರಿಪುರದ ಸ್ವಗೃಹದಲ್ಲಿಂದು ಬೆಳಗ್ಗೆ ವಿಧಿವಶರಾದರು.  ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತ ಪದ್ಧತಿಗಳೆರಡರಲ್ಲೂ ನಿಪುಣರಾಗಿ, ಶಾಸ್ತ್ರೀಯ ಸಂಗೀತದ ಜೊತೆಗೆ ಸುಗಮ ಸಂಗೀತದಲ್ಲಿ ವಿಶೇಷ ಸಾಧನೆಗೈದವರು ಶ್ಯಾಮಲಾ ಜಿ. ಭಾವೆ. ಸಂಗೀತಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನು ಮೀಸಲಾಗಿರಿಸಿದ ಶ್ಯಾಮಲಾ ಅವರು ಕರ್ನಾಟಕ ಮಹಿಳಾ ಸಂಗೀತಗಾರರಲ್ಲಿ ಅಗ್ರಗಣ್ಯರು. Please follow and like us:

Advertisement

Wordpress Social Share Plugin powered by Ultimatelysocial