ವಿವಿಧೆಡೆ ಪ್ರಗತಿಯಲ್ಲಿರುವ ತ್ಯಾಜ್ಯ ಪ್ಲಾಸ್ಟಿಕ್ ಮಿಶ್ರಿತ ರಸ್ತೆ ಕಾಮಗಾರಿ

ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ವೇಳೆ, ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತಿದೆ. ಈವರೆಗೆ ೧ ಲಕ್ಷ ಕಿ.ಮೀ.ವರೆಗಿನ ರಸ್ತೆ ನಿರ್ಮಾಣದಲ್ಲಿ ಇಂಥ ಪ್ಲಾಸ್ಟಿಕ್ ಅನ್ನೇ ಬಳಸಲಾಗಿದೆ. ಈ ವರ್ಷ ೨ ಲಕ್ಷ ಕಿ.ಮೀ. ವರೆಗಿನ ರಸ್ತೆಯನ್ನು ಇಂಥ ಪ್ಲಾಸ್ಟಿಕ್‌ನಿಂದಲೇ ನಿರ್ಮಿಸುವ ಇರಾದೆಯನ್ನು ವಿವಿಧ ರಾಜ್ಯ ಸರ್ಕಾರÀಗಳು ಹೊಂದಿದೆ. ಇಂಥ ರಸ್ತೆಗಳ ಪ್ರತಿ ಒಂದು ಕಿ.ಮೀ. ನಿರ್ಮಾಣಕ್ಕೆ ೯ ಟನ್‌ನಷ್ಟು ಡಾಂಬರ್ ಹಾಗೂ ೧ ಟನ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಬೇಕಾಗುತ್ತದೆ. ಹೀಗಾಗಿ, ಸಾಮಾನ್ಯವಾಗಿ ೧ ಕಿ.ಮೀ. ರಸ್ತೆ ನಿರ್ಮಾಣಕ್ಕೆ ಬೇಕಾಗುವ ೧೦ ಟನ್ ಡಾಂಬರಿನಲ್ಲಿ ೧ ಟನ್‌ನಷ್ಟು ಡಾಂಬರ್ ಉಳಿತಾಯವಾಗುತ್ತದೆ. ೧ ಟನ್ ಡಾಂಬರಿಗೆ ೩೦ ಸಾವಿರ ಇದ್ದು, ಪ್ಲಾಸ್ಟಿಕ್ ಬಳಸುವುದರಿಂದ ಆ ಹಣ ಉಳಿತಾಯವಾಗುತ್ತದೆ. ಇಂಥ ಹೊಸ ಮಾದರಿಯ ರಸ್ತೆಗಳಲ್ಲಿ ಶೇ. ೬ರಿಂದ ೮ರಷ್ಟು ಪ್ಲಾಸ್ಟಿಕ್, ಶೇ. ೯೨-೯೪ರಷ್ಟು ಡಾಂಬರ್ ಇರುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ಮೂಲ್ಕಿ ಪೊಲೀಸ್ ಠಾಣಾ ಸಿಬ್ಬಂದಿಗೆ ಸೋಂಕು ದೃಢ

Sat Jul 11 , 2020
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಪೊಲೀಸ್ ಠಾಣಾ ಸಿಬ್ಬಂದಿಗೆ ಕೋವಿಡ್ -೧೯ ಸೋಂಕು ತಾಗಿರುವುದು ದೃಢವಾಗಿದೆ. ಈ ಕಾರಣದಿಂದ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಮೂಲ್ಕಿ ಠಾಣೆಯ ೪೬ ವರ್ಷ ಪ್ರಾಯದ ಹೆಡ್ ಕಾನ್ಸೆ÷್ಟಬಲ್ ಓರ್ವರಿಗೆ ಸೋಂಕು ದೃಢವಾಗಿದೆ. ಹೀಗಾಗಿ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇಲ್ಲಿನ ಹಳೆಯ ಪೊಲೀಸ್ ಕೊಠಡಿಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಬಪ್ಪನಾಡಿನ ವಸತಿ ಸಂಕೀರ್ಣವೊAದರಲ್ಲಿ ವಾಸವಿದ್ದ ವ್ಯಕ್ತಿಗೆ ಕೆಲವು ದಿನಗಳ […]

Advertisement

Wordpress Social Share Plugin powered by Ultimatelysocial