ವಿಶ್ವ ಗುರುವಿಗೆ ಸಾಥ ನೀಡಿದ ವಿಶ್ವದ ದೊಡ್ಡಣ

ಗಾಲ್ವನ್ ಕಣಿವೆಯಲ್ಲಿ ಭಾರತದ ವಿರುದ್ಧ ಚೀನಾ ನಡೆಸಿದ ಆಕ್ರಮಣಕಾರಿ ನಡೆ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಆ ರಾಷ್ಟ್ರವು ವಿವಾದ ಸೃಷ್ಟಿಸಿರುವುದನ್ನು ಖಂಡಿಸಿ ಅಮೆರಿಕದ ಪ್ರಜಾಪ್ರತಿನಿಧಿ ಸಭೆಯು ರಾಷ್ಟ್ರೀಯ ಭದ್ರತಾ ದೃಢೀಕರಣ ಕಾಯ್ದೆಯ (ಎನ್‌ಡಿಎಎ) ತಿದ್ದುಪಡಿಯನ್ನು ಅವಿರೋಧವಾಗಿ ಅಂಗೀಕರಿಸಿದೆ.ಸAಸದ ಸ್ಟೀವ್ ಚಬೊಟ್ ಹಾಗೂ ಭಾರತ ಮೂಲದ ಅಮೆರಿಕ ಸಂಸದ ಅಮಿ ಬೆರ್ ಅವರು ಎನ್‌ಡಿಎಎಗೆ ಸೂಚಿಸಿರುವ ತಿದ್ದುಪಡಿಯನ್ನು ಅವಿರೋಧವಾಗಿ ಅಂಗೀಕರಿಸಲಾಗಿದ್ದು, ವಾಸ್ತವ ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಎರಡೂ ರಾಷ್ಟ್ರಗಳು ಸೇನಾ ಜಮಾವಣೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಬೇಕು ಎಂದು ಒತ್ತಾಯಿಸಲಾಗಿದೆ. ನೆರೆ ರಾಷ್ಟ್ರಗಳು ಮಾತ್ರವಲ್ಲ, ದಕ್ಷಿಣ ಚೀನಾ ಸಮುದ್ರ, ಸೆಂಕಾಕು ದ್ವೀಪದ ಮೇಲೆ ಒಡೆತನ ಸ್ಥಾಪಿಸಲು ಮುಂದಾಗುತ್ತಿರುವ ಚೀನಾದ ಕ್ರಮದ ವಿರುದ್ಧವೂ ಆತಂಕ ವ್ಯಕ್ತಪಡಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಸಿಲಿಕಾನ್ ಸಿಟಿಯ ಪ್ರಮುಖ ಮಾರುಕಟ್ಟೆಗಳು ಬಂದ್

Tue Jul 21 , 2020
ಕೊರೋನಾ ಸೋಂಕಿನ ಪ್ರಕರಣಗಳು ಸಿಲಿಕಾನ್ ಸಿಟಿಯಲ್ಲಿ ಹೆಚ್ಚಳ ಹಿನ್ನಲೆಯಲ್ಲಿ, ನಗರ ಪ್ರಮುಖ ಮಾರುಕಟ್ಟೆ ಕೆ ಆರ್ ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ, ಸದ್ಯಕ್ಕೆ ಮಾರುಕಟ್ಟೆಗಳು ತೆರೆಯಲು ಅನುಮತಿ ನೀಡಲಾಗುತ್ತಿಲ್ಲ ಎಂದು ಹೇಳಿದರು. Please follow and like us:

Advertisement

Wordpress Social Share Plugin powered by Ultimatelysocial