ವಿಷಕಾರಿ ಹಾವನ್ನು ಕೈಯಲ್ಲಿ ಹಿಡಿದು ಅಜ್ಜಿ

ಗುಜರಾತ: ಅಜ್ಜಿಯೊಬ್ಬರು  ವಿಷಕಾರಿ ಹಾವನ್ನು ಕೈಯಲ್ಲಿ ಹಿಡಿದು ದರದರನೆ ಎಳೆದೊಯ್ದು ದೂರಕ್ಕೆ ಎಸೆದಿರುವ ಘಟನೆ ಗುಜರಾತಿನ ಗ್ರಾಮಾಂತರ ಪ್ರದೇಶದಲ್ಲಿ  ನಡೆದಿದೆ. ಈ ವಿಡಿಯೋ ಈಗ ವೈರಲ್ ಆಗಿದೆ. ನೆಟ್ಟಿಗರು ಈ ಅಜ್ಜಿಯ ಧೈರ್ಯವನ್ನು ಮೆಚ್ಚಿ ಕಾಮೆಂಟ್ ಗಳನ್ನು ಮಾಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.  ಅರಣ್ಯ ಇಲಾಖೆಯ ಅಧಿಕಾರಿ ಸುಸಾಂತ್ ನಂದಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು ಅದನ್ನು ನಾಗರಹಾವು ಎಂದು ಗುರುತಿಸಿದ್ದಾರೆ. ಈ ವಿಡಿಯೋದಲ್ಲಿ ಅಜ್ಜಿಯು ಅಳುಕಿಲ್ಲದೇ ಹಾವನ್ನು ಎಳೆದುಕೊಂಡು ಹೋಗುವುದನ್ನು ಕಾಣಬಹುದು. ಮತ್ತು ವಸತಿ ಪ್ರದೇಶಗಳನ್ನು ದಾಟಿ ಖಾಲಿ ಸ್ಥಳದಲ್ಲಿ ಹಾವನ್ನು ಎಸೆಯುವುದನ್ನು ನೋಡಬಹುದಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಸುಪ್ರೀಂ ನಿಂದ RBI ಗೆ ನೋಟಿಸ್

Wed May 27 , 2020
ಕೊರೊನಾ ಲಾಕ್‌ಡೌನ್ ಸಂಬಂಧ ಇಎಂಐ ಮುಂದೂಡಿಕೆಯ ಅವಧಿಯಲ್ಲಿ ಬಡ್ಡಿ ದರ ವಿಧಿಸುವ ಬ್ಯಾಂಕ್‌ಗಳ ನಿರ್ಧಾರ ಪ್ರಶ್ನಿಸಿದ್ದ ಅರ್ಜಿ ಸಂಬಂಧ, ಕೇಂದ್ರ ಸರಕಾರ ಹಾಗೂ ಆರ್‌ಬಿಐಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನೋಟಿಸ್‌ ನೀಡಿದೆ. ಬ್ಯಾಂಕ್‌ಗಳ ನಿರ್ಧಾರ ಪ್ರಶ್ನಿಸಿರುವ ಅರ್ಜಿದಾರರು ಇಎಂಐ ಮುಂದೂಡಿಕೆ ಅವಧಿಯಲ್ಲಿ ಬಡ್ಡಿ ಮನ್ನಾಕ್ಕೆ ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ ನಿವಾಸಿ ಗಜೇಂದ್ರ ಶರ್ಮಾ ಅವರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ಸುಪ್ರೀಂ ಕೋರ್ಟ್‌, ಕೇಂದ್ರ ಮತ್ತು ಆರ್‌ಬಿಐನಿಂದ ವಿವರಣೆ ಕೇಳಿದೆ. ಮುಂದಿನ […]

Advertisement

Wordpress Social Share Plugin powered by Ultimatelysocial