ವಿಷಾನಿಲ ದುರಂತ: ಮೃತರಿಗೆ ೧ ಕೋಟಿ, ತೀವ್ರ ಅಸ್ವಸ್ಥರಿಗೆ ೧೦ಲಕ್ಷ ಪರಿಹಾರ

ವಿಶಾಖ ಪಟ್ಟಣ : ವಿಶಾಖ ಪಟ್ಟಣಂನ ಗೋಪಾಲಪಟ್ಟಣದ ನಾಯ್ಡು ತೋಟಾ ಸಮೀಪದಲ್ಲಿನ ಆರ್ ಆರ್ ವೆಂಕಟಪುರಂನಲ್ಲಿರುವ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ಇಂದು ಮುಂಜಾನೆ ಸುಮಾರು ೩ ಗಂಟೆಗೆ ವಿಷಾನಿಲ ಸೋರಿಕೆಯಾದ ಪರಿಣಾಮ, ೧೩ ಜನರು ಸಾವನ್ನಪ್ಪಿದ್ದರು. ೩೦೦ಕ್ಕೆ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಇದೀಗ ಆಂಧ್ರಪ್ರದೇಶ ಸರ್ಕಾರ ಮೃತರಿಗೆ ೧ ಕೋಟಿ, ತೀವ್ರವಾಗಿ ಅಸ್ವಸ್ಥಗೊಂಡವರಿಗೆ ೧೦ ಲಕ್ಷ ಪರಿಹಾರವನ್ನು ಘೋಷಣೆ ಮಾಡಿದೆ. ಈ ಕುರಿತಂತೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಜಿ ಜಗನ್‌ಮೋಹನ್ ರೆಡ್ಡಿ, ಇದೊಂದು ಘೋರ ದುರಂತವಾಗಿದೆ. ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಣಿಸಿದೆ. ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಸ್ ಸುತ್ತಮುತ್ತಲಿನ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ತಿಳಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಕೈಗಾರಿಕೆ ಆರಂಭಿಸುವ ಮುನ್ನ ಸುರಕ್ಷತಾ ಕ್ರಮ ತೆಗೆದುಕೊಳ್ಳಿ:ಸಿಎಂ

Thu May 7 , 2020
ನೆರೆಯ ರಾಜ್ಯ ಆಂಧ್ರಪ್ರದೇಶದ ವೈಜಾಗ್ ನಲ್ಲಿ ಸಂಭವಿಸಿರುವ ಭೀಕರ ವಿಷಾನಿಲ ಸೋರಿಕೆ ಹಿನ್ನೆಲೆ ರಾಜ್ಯದಲ್ಲೂ ಕೈಗಾರಿಕೆ ಆರಂಭಿಸುವ ಮುನ್ನ ಸುರಕ್ಷತಾ ಕ್ರಮಗಳನ್ನು ಖಾತರಿ ಪಡಿಸುವಂತೆ ಕೈಗಾರಿಕಾ ಘಟಕಗಳ ವ್ಯವಸ್ಥಾಪಕರಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ವಿಶಾಖಪಟ್ಟಣದ ವಿಷಾನಿಲ ಸೋರಿಕೆಯ ದುರಂತ ಘಟನೆ ದುರದೃಷ್ಟಕರ . ಇಂತಹ ಘಟನೆ ಎಲ್ಲಿಯೂ ಮರುಕಳಿಸಬಾರದು.       ಈ ಹಿನ್ನೆಲೆ, ಎರಡು ತಿಂಗಳ ನಂತರ ತಮ್ಮ […]

Advertisement

Wordpress Social Share Plugin powered by Ultimatelysocial