ವೆಂಕಟೇಶ್ವರನ್ ದಕ್ಷಿಣಾಮೂರ್ತಿ ಮಹಾನ್ ಸಂಗೀತ ವಿದ್ವಾಂಸರು.

 

ವೆಂಕಟೇಶ್ವರನ್ ದಕ್ಷಿಣಾಮೂರ್ತಿ ಮಹಾನ್ ಸಂಗೀತ ವಿದ್ವಾಂಸರು ಮತ್ತು ಚಲನಚಿತ್ರಗಳ ಸಂಗೀತ ಸಂಯೋಜಕರಾಗಿದ್ದರು. ಸ್ವಾಮಿ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಅವರು ಚಲನಚಿತ್ರಗಳಲ್ಲಿ ಅನೇಕ ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಸುಶ್ರಾವ್ಯ ಗೀತೆಗಳನ್ನು ಮೂಡಿಸಿದರು.
ವೆಂಕಟೇಶ್ವರನ್ ದಕ್ಷಿಣಾಮೂರ್ತಿ ಅಯ್ಯರ್ 1919ರ ಡಿಸೆಂಬರ್ 9ರಂದು ಕೇರಳದ ಅಲಪ್ಪುಳದ ಮುಲ್ಲಕ್ಕಲ್‌ ಎಂಬಲ್ಲಿ ಜನಿಸಿದರು. ತಾಯಿ ಪಾರ್ವತಿ ಅಮ್ಮಾಳ್. ತಂದೆ ಡಿ. ವೆಂಕಟೇಶ್ವರ ಅಯ್ಯರ್. ತಂದೆ ಬ್ಯಾಂಕ್ ಅಧಿಕಾರಿಯಾಗಿದ್ದರು. ದಕ್ಷಿಣಾಮೂರ್ತಿ ಅವರಲ್ಲಿ ಅವರ ತಾಯಿ ಸಂಗೀತ ಆಸಕ್ತಿಯನ್ನು ಪೋಷಿಸಿ, ಬಾಲ್ಯದಲ್ಲಿಯೇ ತ್ಯಾಗರಾಜ ಸ್ವಾಮಿಗಳ ಕೀರ್ತನೆಗಳನ್ನು ಕಲಿಸಿದರು. ಕನಿಷ್ಠ 27 ಹಾಡುಗಳನ್ನು ತಮ್ಮ ತಾಯಿ ಮತ್ತು ಸಹೋದರಿಯರು ಹಾಡುವುದನ್ನು ಕೇಳಿಯೇ ಗ್ರಹಿಸಿದ್ದರು. ಹತ್ತು ವರ್ಷದವರಾಗಿದ್ದಾಗ, ತಿರುವನಂತಪುರದಲ್ಲಿನ ವೆಂಕಟಾಚಲಂ ಪೊಟ್ಟಿ ಅವರಲ್ಲಿಗೆ ಬಂದು ಮೂರು ವರ್ಷಗಳ ಕಾಲ ಕರ್ನಾಟಕ ಸಂಗೀತವನ್ನು ಕಲಿತರು. ದಕ್ಷಿಣಾಮೂರ್ತಿ ಅವರು 13 ವರ್ಷದವರಾಗಿದ್ದಾಗ ಅಂಬಲಪುಳ ಶ್ರೀಕೃಷ್ಣ ದೇವಸ್ಥಾನದಲ್ಲಿ ಮೊದಲ ಕಛೇರಿ ನೀಡಿದರು.
ದಕ್ಷಿಣಾಮೂರ್ತಿ ಅವರ 5ನೇ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಣವು ಅಲೆಪೆಯ ಸನಾತನ ಧರ್ಮ ವಿದ್ಯಾಶಾಲೆಯಲ್ಲಿ ನಡೆಯಿತು. ತಿರುವನಂತಪುರದ ಶ್ರೀ ಮೂಲ ವಿಲಾಸ ಹೈಸ್ಕೂಲ್‌ನಲ್ಲಿ ತಮ್ಮ ಎಚ್‌ಎಸ್‌ಸಿಯನ್ನು ಪೂರ್ಣಗೊಳಿಸಿದ ನಂತರ, ಸಂಗೀತವೇ ತಮ್ಮ ಭವಿಷ್ಯ ಎಂದು ನಿರ್ಧರಿಸಿಕೊಂಡರು. ಸ್ವಾಮಿ 16 ನೇ ವಯಸ್ಸಿನಲ್ಲಿ ವೈಕೋಮ್ಗೆ ಬಂದು ಅಲ್ಲಿ ಸಂಗೀತವನ್ನು ಅಭ್ಯಾಸ ಮಾಡುವುದರ ಜೊತೆಗೆ ಇತರರಿಗೂ ಕಲಿಸಿದರು. ಅವರು ತಮ್ಮ 20-22 ರ ವಯಸ್ಸಿನ ಅವಧಿಯಲ್ಲಿ, ನಿರಂತರವಾಗಿ ಮೂರುವರೆ ವರ್ಷಗಳ ಕಾಲ ವೈಕಠಪ್ಪನ “ನಿರ್ಮಾಲ್ಯ ದರ್ಶನ” ಪಡೆದರು. ಈ ಸಾಧನೆಯು ಅವರನ್ನು ಶ್ರೇಷ್ಠತೆಯ ಹಾದಿಗೆ ತರುವಲ್ಲಿ ಸಹಾಯಕವಾಯಿತು.
ದಕ್ಷಿಣಾಮೂರ್ತಿ 1948ರಲ್ಲಿ ತಮ್ಮ ಹೆತ್ತವರೊಂದಿಗೆ ಚೆನ್ನೈಗೆ ಬಂದರು. ಅವರು 1948ರ ಜನವರಿಯಲ್ಲಿ ಕಲ್ಯಾಣಿ ಅವರನ್ನು ವಿವಾಹವಾದರು. ಅದೇ ವರ್ಷ ಚಲನಚಿತ್ರ ಜಗತ್ತಿಗೆ ಪ್ರವೇಶಿಸಿದರು. 1950ರಲ್ಲಿ ಕೆ ಅಂಡ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕುಂಚಾಕೊ ಮತ್ತು ಕೆ.ವಿ. ಕೋಶಿ ನಿರ್ಮಿಸಿದ ‘ನಲ್ಲ ತಂಕ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಚಿತ್ರದಲ್ಲಿ ಖ್ಯಾತ ಗಾಯಕ ಕೆ.ಜೆ.ಯೇಸುದಾಸ್ ಅವರ ತಂದೆ ಖ್ಯಾತ ರಂಗ ನಟ ಮತ್ತು ಗಾಯಕ ಆಗಸ್ಟಿನ್ ಜೋಸೆಫ್ ನಾಯಕರಾಗಿದ್ದರು. ಅದೇ ಅವಧಿಯಲ್ಲಿ ಕಲಾಮಂಡಲಂನಲ್ಲಿ “ದಿ ಒಪೇರಾ”ಗೆ ಸಂಗೀತ ಸಂಯೋಜಿಸಿದರು. ಅಲ್ಲಿ ಅವರು 8 ಒಪೆರಾಗಳು ಮತ್ತು 30 ನೃತ್ಯ ನಾಟಕಗಳಿಗೆ ಸಂಗೀತ ನೀಡಿದರು.
ದಕ್ಷಿಣಾಮೂರ್ತಿ ಅವರು ಕೆ.ಜೆ. ಯೇಸುದಾಸ್, ಅವರ ಮಗ ವಿಜಯ್ ಯೇಸುದಾಸ್ ಮತ್ತು ಅವರ ಮೊಮ್ಮಗಳು ಅಮೆಯಾ ಅವರಿಗೆ ನಿರ್ದೇಶಿಸಿದ ಹಿರಿಮೆ ಹೊಂದಿದ್ದಾರೆ. ಅವರು ಶ್ರೀಕುಮಾರನ್ ಥಂಪಿ ಮತ್ತು ಅಭಯದೇವ್ ಅವರು ಬರೆದ ಅನೇಕ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದರು. ವಯಲಾರ್ ರಾಮವರ್ಮ – ಜಿ. ದೇವರಾಜನ್ ಮತ್ತು ಪಿ. ಭಾಸ್ಕರನ್ – ಬಾಬುರಾಜ್ ಜೋಡಿಯಂತಹ ಪ್ರಸಿದ್ಧ ಸಂಗೀತಗಾರ-ಗೀತರಚನೆಕಾರ ಜೋಡಿಯನ್ನು ರೂಪಿಸಿದರು. ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ತಂದೆ ಆರ್.ಕೆ.ಶೇಖರ್ ಇವರ ಕೆಲವು ಚಿತ್ರಗಳಿಗೆ ಸಹಾಯಕರಾಗಿದ್ದು ಮುಂದೆ ಸ್ವತಂತ್ರ ಸಂಗೀತಗಾರರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಶಿವರಾಮ ಕಾರಂತ ಲೇಖಕರು

Sat Dec 24 , 2022
  ಒಂದಾನೊಂದು ಕಾಲದಲ್ಲಿ ಶಿವರಾಮ ಕಾರಂತರು ಅಂತ ಒಬ್ಬರಿದ್ರಂತೆ…. ಹೀಗೆ ಮುಂದಿನ ಪೀಳಿಗೆಯ ಮಕ್ಕಳಿಗೆ ಹೇಳಿದರೆ ಅವರು ಇದನ್ನೂ ಅಚ್ಚರಿಯ ಕಥೆಯಂತೆ ಕೇಳಿದರೆ ಅಚ್ಚರಿಯಿಲ್ಲ. ದಿವಾಕರ್ ಅವರು ಒಮ್ಮೆ ವಿದೇಶದಲ್ಲಿ ಕಾರಂತರ ಬಗ್ಗೆ ಉಪನ್ಯಾಸ ಮಾಡಿದಾಗ, ಅಲ್ಲಿನ ಜನ “ನೀನು ಹೇಳಿದ ಕಥೆ ತುಂಬಾ ಕುತೂಹಲಕಾರಿಯಾಗಿ, ಚೆನ್ನಾಗಿತ್ತು” ಅಂದ್ರಂತೆ. ಇಂದು ಶಿವರಾಮ ಕಾರಂತರು ಈ ಲೋಕ ಬಿಟ್ಟು 24 ವರ್ಷ ಆಯ್ತು. ಅವರು ನಿಧನರಾದದ್ದು 1997ರ ಡಿಸೆಂಬರ್ 9ರಂದು. ಕಾರಂತರು […]

Advertisement

Wordpress Social Share Plugin powered by Ultimatelysocial