ವ್ಯಾಯಾಮ ಮಾಡಬೇಡ ಎಂದಿದ್ದಕ್ಕೆ ಡಂಬೆಲ್ಸ್​ ಎಸೆದು ತಾಯಿಯನ್ನೇ ಕೊಂದ ಪಾಪಿ..!

ಮಾನಸಿಕ ಅಸ್ವಸ್ಥನಾಗಿದ್ದ ಪುತ್ರ ತನ್ನ ತಾಯಿ ಹಾಗೂ ಸಹೋದರಿಯ ಮೇಲೆ ಡಂಬೆಲ್​​ನಿಂದ ಹಲ್ಲೆ ನಡೆಸಿದ್ದಾನೆ. ತೆಲಂಗಾಣದ ಹೈದರಾಬಾದ್​​ ಸುಲ್ತಾನ್​ ಬಜಾರ್​ನಲ್ಲಿ ಈ ಶಾಕಿಂಗ್​ ಘಟನೆಯು ವರದಿಯಾಗಿದೆ.

24 ವರ್ಷದ ಸುಧೀರ್​ ಕುಮಾರ್​ ಎಂಬಾತ ಮಾನಸಿಕ ಅಸ್ವಸ್ಥನಾಗಿದ್ದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ದೇಹದಂಡನೆ ಮಾಡುತ್ತಿದ್ದ ಎನ್ನಲಾಗಿದೆ .ಇದನ್ನು ಗಮನಿಸಿದ ತಾಯಿ ಕೊಂಡ ಪಾಪಮ್ಮ ವ್ಯಾಯಾಮ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ್ದಾರೆ.

ಇಷ್ಟಕ್ಕೆ ತಾಯಿ ಮೇಲೆ ಕೋಪಗೊಂಡ ಪುತ್ರ ತಾಯಿಯ ಮೇಲೆ ಡಂಬೆಲ್​ನಿಂದ ದಾಳಿ ನಡೆಸಿದ್ದಾನೆ. ಇದನ್ನು ತಪ್ಪಿಸಲು ಬಂದ ಸಹೋದರಿ ಸುಚಿತ್ರಾ ಮೇಲೂ ಈತ ಹಲ್ಲೆ ನಡೆಸಿದ್ದಾನೆ.

ಪುತ್ರ ನಡೆಸಿದ ದಾಳಿಯಲ್ಲಿ ತಾಯಿ ಕೊಂಡ ಪಾಪಮ್ಮ ಸಾವನ್ನಪ್ಪಿದ್ದಾರೆ. ಸಹೋದರಿ ಸುಚಿತ್ರಾಗೂ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸುಧೀರ್​ನನ್ನು ಬಂಧಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪದವಿ ಪೂರೈಸಿದ್ದ ಸುಧೀರ್​ ಫುಡ್​ ಡೆಲಿವರಿ ಏಜೆಂಟ್​ ಆಗಿ ಕೆಲಸ ಮಾಡುತ್ತಿದ್ದ. ಆದರೆ ಕಳೆದ ವರ್ಷ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಈತ ಮನೆಯಲ್ಲಿಯೇ ವಾಸವಿದ್ದ ಎನ್ನಲಾಗಿದೆ.

ತನಿಖೆಯ ವೇಳೆಯಲ್ಲಿ ಪೊಲೀಸರಿಗೆ ಸುಧೀರ್​ ಒಬ್ಬ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ. ಅಲ್ಲದೇ ಈತ ಕೆಲ ಸಮಯದ ಹಿಂದಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಆರಂಭಿಸಿದ್ದ ಎನ್ನಲಾಗಿದೆ. ಈತನ ತಂದೆ ಮೃತಪಟ್ಟಿದ್ದು ಕಳೆದ 7 ವರ್ಷಗಳಿಂದ ತಾಯಿ ಹಾಗೂ ಸಹೋದರಿಯ ಜೊತೆಯಲ್ಲಿ ವಾಸವಿದ್ದ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೆಟ್ಫ್ಲಿಕ್ಸ್, ಅಮೆಜಾನ್ ಜೊತೆ 400 ಕೋಟಿ ರೂಪಾಯಿ ಒಪ್ಪಂದದಲ್ಲಿ ಅನುಷ್ಕಾ ಶರ್ಮಾ;

Tue Jan 25 , 2022
ಅಮೆಜಾನ್ ಮತ್ತು ನೆಟ್‌ಫ್ಲಿಕ್ಸ್ ಸೇರಿದಂತೆ OTT ದೈತ್ಯರು ಅನುಷ್ಕಾ ಶರ್ಮಾ ಅವರ ನಿರ್ಮಾಣ ಸಂಸ್ಥೆ ಕ್ಲೀನ್ ಸ್ಲೇಟ್ ಫಿಲ್ಮ್ಜ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಸುಮಾರು 400 ಕೋಟಿ ರೂಪಾಯಿ ಮೌಲ್ಯದ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಬಿಡುಗಡೆ ಮಾಡುತ್ತಿದೆ. ಪಾಲುದಾರಿಕೆಯು ಪ್ರಪಂಚದ ಅತಿದೊಡ್ಡ ಮನರಂಜನಾ ಮಾರುಕಟ್ಟೆಗಳಲ್ಲಿ ಒಂದಾದ ವಿಷಯಕ್ಕಾಗಿ ಪ್ರಸ್ತುತ ಯುದ್ಧದ ಫಲಿತಾಂಶವಾಗಿದೆ. ಅನುಷ್ಕಾ ಅವರ ಕ್ಲೀನ್ ಸ್ಲೇಟ್ ಫಿಲ್ಮ್ಜ್, ಇದು ಭಾರತೀಯ ನಿರ್ಮಾಣ ಸಂಸ್ಥೆಯಾಗಿದ್ದು, ಎಂಟು ಚಲನಚಿತ್ರಗಳು ಮತ್ತು ವೆಬ್ […]

Advertisement

Wordpress Social Share Plugin powered by Ultimatelysocial