ಶಿಥಿಲಗೊಂಡ ಕೋಟೆಗೆ ಮರುಜೀವ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪಡಕೋಟೆ ಐತಿಹಾಸಿಕವಾದ ಮಹತ್ವವುಳ್ಳ ಸ್ಥಳವಾಗಿದ್ದು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಊರು ತನ್ನದೆ ಆದ ಇತಿಹಾಸವನ್ನು ಹೊಂದಿದೆ.ಕೇವಲ ಐವತ್ತರಷ್ಟು ಮನೆಗಳಿದ್ದು ಇರುವ ಎಲ್ಲಾ ಮನೆಗಳು ಸುರಪುರ ಸಂಸ್ಥಾನದ ಅರಸರ ಕಾಲದಲ್ಲಿ ಮರಾಠ ಸೈನಿಕರ ವಂಶಸ್ಥರ ಮನೆಗಳಾಗಿವೆ.ಆದರೆ ಈಗ ಗ್ರಾಮದ ಸುತ್ತಲೂ ಇರುವ ಕೋಟೆಗಳು ಶಿಥಿಲಗೊಂಡು ಸಂಪೂರ್ಣ ಬೀಳುವ ಹಂತಕ್ಕೆ ತಲುಪಿವೆ. ಇದನ್ನು ಕಂಡ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಪಡುಕೋಟೆ ಒಂದು ತಿಂಗಳುಗಳ ಕಾಲ ಪಡುಕೋಟೆ ಗ್ರಾಮದಲ್ಲಿದ್ದು ಶಿಥಿಲಗೊಂಡಿದ್ದ ಕೋಟೆಗಳನ್ನು ದುರಸ್ತಿಗೊಳಿಸಿ ಮರುಜೀವ ಕಲ್ಪಿಸಿದ್ದಾರೆ. ಅವರಿಗೆ ಸುರಪುರ ಸಂಸ್ಥಾನದ ವಂಶಸ್ಥರಾದ ರಾಜಾ ಕೃಷ್ಣಪ್ಪ ನಾಯಕರು ಸೇರಿದಂತೆ ತಾಲೂಕಿನ ಜನರು ಮೆಚ್ಚುಗೆ ವ್ಯಕ್ತಪಡೆಸಿದ್ದರೆ.

 

 

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ವೈರಸ್ ರಣಕೇಕೆ

Thu Jun 25 , 2020
ದೇಶದಲ್ಲಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದೆ.ಒಂದೇ ದಿನದಲ್ಲಿ 16,922 ಮಂದಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ, ಸೋಂಕಿತರ ಸಂಖ್ಯೆ 4,73,105ಕ್ಕೆ ಏರಿಕೆಯಾಗಿದ್ದು,ಕಳೆದ 24 ಗಂಟೆಯಲ್ಲಿ 418 ಮಂದಿ ಬಲಿಯಾಗಿದ್ದಾರೆ. ಈ ಪೈಕಿ 2,71,697 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇನ್ನೂ ದೇಶದಲ್ಲಿ 1,86,514 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ, ಕೋವಿಡ್ ಟೇಸ್ಟ್ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದ್ದು, ಒಂದೇ ದಿನ […]

Advertisement

Wordpress Social Share Plugin powered by Ultimatelysocial