ಬೆಂಗಳೂರು: ಹೊಂಗಸಂದ್ರಕ್ಕೆ ಬಿಹಾರಿಗಳು ಕಂಟಕವಾದAತೆ ಶಿವಾಜಿನಗರಕ್ಕೆ ಮಣಿಪುರ ಮತ್ತು ಅಸ್ಸೋಂ ಮೂಲದ ನಾಲ್ವರಿಂದ ಹಲವಾರು ಮಂದಿಗೆ ಕೊರೊನಾ ಸೋಂಕು ಹರಡಿರುವ ಸಾಧ್ಯತೆಗಳಿವೆ. ಖಾಸಗಿ ಹೋಟೆಲ್ನ ಹೌಸ್ಕೀಪರ್ನಿಂದ ಈ ನಾಲ್ಕು ಮಂದಿಗೆ ಸೋಂಕು ಹರಡಿದೆ. ಜ್ಯುವೆಲರಿ ಶಾಪ್, ಫರ್ನೀಚರ್ ಶಾಪ್, ಚಿಕನ್ ಸೆಂಟರ್ ಹಾಗೂ ಖಾಸಗಿ ಹೊಟೇಲ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದವರಿಗೆ ಕೊರೊನಾ ಕಾಣಿಸಿಕೊಂಡಿದೆ. ಈ ನಾಲ್ವರು ಶಿವಾಜಿನಗರದಾದ್ಯಂತ ಓಡಾಡಿರುವುದರಿಂದ ಇವರ ಜೊತೆ ಪ್ರಾಥಮಿಕ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದವರನ್ನು ಪತ್ತೆ ಹಚ್ಚುವುದೇ ಹರಸಾಹಸವಾಗಿದೆ. ಸೋಂಕು ಕಾಣಿಸಿಕೊಂಡಿರುವ ವ್ಯಕ್ತಿ ಕೆಲಸ ಮಾಡುತ್ತಿದ್ದ ಚಿಕನ್ ಸೆಂಟರ್ ಗೆ ಪ್ರತಿ ವಾರ ನೂರಾರು ಜನ ಮುಗಿಬಿದ್ದು ಕೋಳಿ ಖರೀದಿಸಿದ್ದರು. ಹೀಗಾಗಿ ಆತನೊಂದಿಗೆ ಸಂಪರ್ಕವಿರಿಸಿಕೊಂಡಿದ್ದವರನ್ನು ಪತ್ತೆಹಚ್ಚುವುದೇ ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ.