ಹೌಸ್ ಕೀಪಿಂಗ್ ಹುಡುಗನೊಬ್ಬನಿಂದ ನಾಲ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಶಿವಾಜಿನಗರದ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ರಸೆಲ್ ಮಾರ್ಕೆಟ್, ಚಾಂದನಿ ಚೌಕ್ ಮತ್ತು ಕಮರ್ಷಿಯಲ್ ಸ್ಟ್ರೀಟ್ ರಸ್ತೆಗಳನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ. ಜೊತೆಗೆ, ಶಿವಾಜಿನಗರ ಎಲ್ಲಾ ಪ್ರಮುಖ ರಸ್ತೆಗಳಲ್ಲೂ ಬ್ಯಾರಿಕೇಡ್ ಹಾಕಿ ಪೊಲೀಸರು ಕಾವಲಿದ್ಧಾರೆ. ಲಾಕ್ ಡೌನ್ ವೇಳೆ ಶಿವಾಜಿನಗರದಲ್ಲಿ ಜನರು ಯಾವುದಕ್ಕೂ ಲೆಕ್ಕಿಸದೆ ರಾಜಾರೋಷವಾಗಿ ಓಡಾಡುತ್ತಿದ್ದುದು ಸೋಂಕು ವ್ಯಾಪಕವಾಗಿ ಹರಡಿರುವ ಭೀತಿ ಮೂಡಿದೆ.
ವರದಿ: ಸ್ಪೀಡ್ ನ್ಯೂಸ್ ಕನ್ನಡ
Please follow and like us:
Sat May 9 , 2020
ಕರೋನಾ ಮಹಾಮಾರಿ ಕಾರಣಕ್ಕೆ ಲಾಕ್ ಡೌನ್ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಹೀಗಾಗಿ ಕಳೆದ ನಲವತ್ತು ದಿನಗಳಿಗೂ ಅಧಿಕ ಕಾಲದಿಂದ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿಲ್ಲ. ಕರೋನಾ ಸೋಂಕಿನ ಆರ್ಭಟ ದಿನೇ ದಿನೇ ಹೆಚ್ಚಳವಾಗುತ್ತಿರುವ ಮಧ್ಯೆಯೂ ಶಾಲಾ-ಕಾಲೇಜು ಆರಂಭದ ಕುರಿತ ಮಾತುಗಳು ಕೇಳಿಬರುತ್ತಿವೆ. ಆದರೆ ಇದಕ್ಕೆ ಬಹುತೇಕ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಕರೋನಾ ಸೋಂಕಿನ ಅಪಾಯದ ಅರಿವಿದ್ದರೂ ದೊಡ್ಡವರೇ ಸಾಮಾಜಿಕ ಅಂತರವನ್ನು ಪಾಲಿಸುತ್ತಿಲ್ಲ. ಇನ್ನು ಚಿಕ್ಕವರಿಂದ […]