ಸಂಘಪರಿವಾರದವರಿಗೆ ಖುರ್ಚಿಯ ವ್ಯಾಮೋಹವಿಲ್ಲ ; ಐಟಿ ದಾಳಿಗೂ ಬಿಎಸ್ವೈ ಗೂ ಸಂಬಂಧವಿಲ್ಲ- ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು : ಸಂಘಪರಿವಾರದ ಬಗ್ಗೆ ಲಘುವಾಗಿ ಮಾತನಾಡುತ್ತಿರುವವರಿಗೆ   ಸಂಘಪರಿವಾರದವರಿಗೆ ಖುರ್ಚಿಯ ವ್ಯಾಮೋಹವಿಲ್ಲ ಎಂದು  ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ಆರ್ ಎಸ್ ಎಸ್ ಬಗ್ಗೆ ಕಳೆದ ಒಂದು ವಾರದಿಂದ ಚರ್ಚೆಯಾಗುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯರಿಗೆ ಸಂಘಪರಿವಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲಘಪರಿವಾರದವರಿಗೆ ಖುರ್ಚಿ ವ್ಯಾಮೋಹವಿಲ್ಲಖುರ್ಚಿಗಾಗಿ ನಾವು  ಎಂದೂ ಹೋರಾಡಿಲ್ಲ. ಸಮಾಜಸೇವೆಗಾಗಿ ಸಂಘ ಸಮರ್ಪಣೆ ಮಾಡಿಕೊಂಡಿದೆ. ದೇಶಕ್ಕಾಗಿತ್ಯಾಗ ಬಲಿದಾನ ಮಾಡುತ್ತಿದೆ. ಖುರ್ಚಿ ವ್ಯಾಮೋಹ ಜೆಡಿಎಸ್, ಕಾಂಗ್ರೆಸ್ಸಿಗಿದೆ. ಅಲ್ಪಸಂಖ್ಯಾತರ ಉದ್ಧಾರಕರು ಎಂದು ಹೇಳಿಕೊಳ್ಳುತ್ತಾರಷ್ಟೆ. ಸಿದ್ದರಾಮಯ್ಯ ಟಿಪ್ಪುಜಯಂತಿ ಮಾಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ದರು. ಅಲ್ಪಸಂಖ್ಯಾತರಿಗೂ ಕೂಡ ಇಂದು ಸಿದ್ದರಾಮಯ್ಯ ಇವರ ಬಂಡವಾಳ ಗೊತ್ತಾಗಿದೆ. ಇವರೆಲ್ಲ ವೋಟ್ ಬ್ಯಾಂಕ್ ಗಾಗಿಸಂಘದ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು..

ಆರ್ ಎಸ್ ಎಸ್ ಬಗ್ಗೆ ಅನಗತ್ಯ ಟೀಕೆ ಸರಿಯಲ್ಲ. ತಾಲಿಬಾನ್ ಸಂಸ್ಕೃತಿ ನಿಮ್ಮದು. ಕೊಳ್ಳಿಯಿಡುವ ಸಂಸ್ಕೃತಿ ವಿಕೃತ ಮನಸ್ಸಿನ ಕಾಂಗ್ರೆಸ್ ಜೆಡಿಎಸ್ ನಾಯಕರು ವೋಟಿಗಾಗಿ ರಾಜಕಾರಣ ಮಾಡಬಾರದು. ಆರ್ ಎಸ್ ಎಸ್ ಬಗ್ಗೆ ಮಾತನಾಡಿದರೆ ಇವರುಗಳಿಗೆ ನಷ್ಟ. ಸಂಘ ಒಳ್ಳೆಯ ಮಾರ್ಗದರ್ಶನ ಮಾಡುತ್ತದೆ. ನೀವೊಮ್ಮೆ ಸಂಘಕ್ಕೆ ಇವರುಗಳು ಒಮ್ಮೆ ಬಂದು ನೋಡಿದರೆ ಅಲ್ಲಿನ ವಾಸ್ತವ ನಿಮಗೆ ಗೊತ್ತಾಗುತ್ತದೆ ಎಂದರು.

ಪ್ರತಿಭಾವಂತರು ಎಲ್ಲಿ ಬೇಕಾದರೂ ಇರಬಹುದು. ಅದರಂತೆ ಸಂಘಪರಿವಾರದಲ್ಲಿಯೂ ಕೂಡ ಹಲವರು ಪ್ರತಿಭಾವಂತರಿದ್ದಾರೆ. ಪ್ರತಿಭಾವಂತರು ಉನ್ನತ ಹುದ್ದೆಯಲ್ಲಿರುವುದೇನೂ ತಪ್ಪಲ್ಲ.ನಾವು ಆಪರೇಷನ್ ಕಮಲ ಮಾಡಿಲ್ಲ.ಮೊದಲುಜೆಡಿಎಸ್ ಆಪರೇಷನ್ ಆರಂಭ ಮಾಡಿದ್ದು  ಎಂದು ಹೇಳಿದರು. ಇನ್ನು ಇದೇ ವೇಲೆ ಮಾಜಿ ಸಿಎಂ ಬಿಎಸ್‌ ವೈ ರವರ ಆಪ್ತನ ಮನೆ ಮೇಲೆ ಐಟಿ ರೇಡ್‌ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಅವರು ಬಿಜೆಪಿ ಪಕ್ಷದಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನು ಸೈಡ್ ಲೈನ್ ಮಾಡಿಲ್ಲ. ಐಟಿ ರೇಡ್ ಗೂ ಯಡಿಯೂರಪ್ಪಗೂ ಸಂಬಂಧವಿಲ್ಲ. ಸತ್ಯಾಂಶ ಹೊರಬರಲಿದೆ ಕಾದು ನೋಡಬೇಕಿದೆ ಎಂದು ಹೇಳಿದರು.

 

Please follow and like us:

Leave a Reply

Your email address will not be published. Required fields are marked *

Next Post

RSS ಬಗ್ಗೆ ನೀಡಿರುವ ಹೇಳಿಕೆಗೆ ಬಹಿರಂಗವಾಗಿ ಚರ್ಚಿಸಲು ನಾನು ಸಿದ್ಧ; ಹೆಚ್‌ ಡಿ ಕುಮಾರಸ್ವಾಮಿ

Fri Oct 8 , 2021
ರಾಮನಗರ: ಆರ್‌ಎಸ್‌ಎಸ್ ಬಗ್ಗೆ ನೀಡಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ.‌ ಈ ಬಗ್ಗೆ ಯಾವುದೇ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.‌ ಕುಮಾರಸ್ವಾಮಿ ಹೇಳಿದರು. ಚನ್ನಪಟ್ಟಣದಲ್ಲಿ ಮಾತನಾಡಿದ ಅವರು ಬಿಜೆಪಿಯು ಆರ್ ಎಸ್  ಎಸ್‌  ಜೊತೆ ಸೇರಿಕೊಂಡು ಕಾಶ್ಮೀರವನ್ನು ಹಾಳು ಮಾಡುತ್ತಿದೆ‘ ಎಂದು ದೂರಿದ್ದರು. ಕೆಲ ದಿನಗಳ ಹಿಂದಷ್ಟೇ ಕಾಶ್ಮೀರದಲ್ಲಿ ಉಗ್ರರು ಶಾಲೆಗೆ ನುಗ್ಗಿ ಶಿಕ್ಷಕರನ್ನು ಕೊಂದು ಹಾಕಿದ್ದಾರೆ. ಈ ವರ್ಷ ಗಡಿಯಲ್ಲಿ ಹೆಚ್ಚು‌ ಸೈನಿಕರ ಸಾವಾಗಿದೆ‌. ಇದೇನಾ ಆರ್‌ ಎಸ್‌ […]

Advertisement

Wordpress Social Share Plugin powered by Ultimatelysocial