ಸಚಿನ್ ಪೈಲೆಟ್ ಅಪ್ರಯೋಜಕ-ಅಶೋಕ್ ಗೆಹ್ಲೋಟ್

ಪಕ್ಷದ ವಿರುದ್ಧ ಬಂಡಾಯವೆದ್ದಿರುವ ಸಚಿನ್ ಪೈಲಟ್ ವಿರುದ್ಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಮಗೆ ಸಚಿನ್ ಪೈಲಟ್​ ಒಬ್ಬ ಅಪ್ರಯೋಜಕ, ಕೆಲಸಕ್ಕೆ ಬಾರದವನು ಅನ್ನೋದು ಗೊತ್ತಿತ್ತು, ಒಂದು ಸ್ವಲ್ಪವೂ ಕೆಲಸ ಮಾಡ್ತಿರಲಿಲ್ಲ. ಬರೇ ಜನರ ಜೊತೆ ಕಾನೂನು ಮಾತಾಡ್ತಿದ್ದ.. ೧೦-೧೨ ವರ್ಷಗಳಲ್ಲಿ ಅವನು ರಾಜಸ್ಥಾನ ರಾಜಕಾರಣದಲ್ಲಿ ದೊಡ್ಡಮಟ್ಟಕ್ಕೆ ಬೆಳೆದ, ಸಣ್ಣ ವಯಸ್ಸಿಗೇ mಠಿ ಯಾಗಿ, ಕೇಂದ್ರದಲ್ಲಿ ಸಚಿವನಾಗಿ ರಾಜ್ಯ ಕಾಂಗ್ರೆಸ್​ನ ಅಧ್ಯಕ್ಷನೂ ಆಗಿದ್ದ. ಅವನಿಗೆ ಎಲ್ಲವೂ ಸಿಕ್ಕಿತ್ತು. ಆದರೆ ಅವನು ಮಾಡಿದ ರಾಜಕಾರಣ ದೌರ್ಭಾಗ್ಯದ್ದು. ಅವನು ರಾಜಸ್ಥಾನ ಸರ್ಕಾರ ಬೀಳಿಸಲು ಸಂಚು ಹೂಡಿದ ಎಂದು ಅಶೋಕ್ ಗೆಹ್ಲೋಟ್ ಸಚಿನ್ ಪೈಲಟ್ ವಿರುದ್ಧ ವಾಚಮಾಗೋಚರವಾಗಿ ನಿಂದಿಸಿದ್ದಾರೆ. ಹಿಂದಿ ಇಂಗ್ಲೀಷ್ ಮಾತನಾಡುತ್ತಾ ಮುಗ್ಧ ಮುಖ ತೋರಿಸಿಕೊಂಡು ಸಚಿನ್ ರಾಷ್ಟ್ರೀಯ ಮಾಧ್ಯಮಗಳನ್ನ ಆಕರ್ಷಿಸಿದ. ರಾಜಸ್ಥಾನ ರಾಜ್ಯದ ಜನರಿಗೆ ಅವನ ಕೊಡುಗೆ ಏನು ಅಂತ ಗೊತ್ತಿದೆ. ನಾನು ಯಾವತ್ತೂ ಅವನನ್ನು ಕೆಲಸ ಮಾಡದಿರುವುದಕ್ಕೆ ಪ್ರಶ್ನಿಸಿಲ್ಲ. ಅವನೇನೂ ಕೆಲಸ ಮಾಡುತ್ತಿರಲಿಲ್ಲ ಎನ್ನುವುದು ನನಗೆ ಗೊತ್ತಿತ್ತು ಎಂದಿರುವ ಅಶೋಕ್ ಗೆಹ್ಲೋಟ್. ನಾನೇನು ಇಲ್ಲಿ ತರಕಾರಿ ಮಾರೋಕೆ ಬಂದಿಲ್ಲ. ನಾನು ಮುಖ್ಯಮಂತ್ರಿ ಎಂದು ಮಾಧ್ಯಮವೊಂದರ ಮುಂದೆ ಹೇಳಿಕೆ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ಸೇನೆಗೆ ಸುಧಾರಿತ ಸ್ವದೇಶೀ ಡ್ರೋನ್

Wed Jul 22 , 2020
ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚೀನ ಸೈನಿಕರ ಚಲನವಲನಗಳ ಮೇಲೆ ನಿಗಾ ಹೆಚ್ಚಿಸಲು ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ‘ಭಾರತ್’ ವಿಶೇಷ ಡ್ರೋನ್‌ಗಳನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ಈ ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಡಿಆರ್‌ಡಿಒದ ಚಂಡೀಗಢ ಪ್ರಯೋಗಾಲಯ ಅಭಿವೃದ್ಧಿಪಡಿಸಿದೆ. ವಿಶ್ವದ ಅತ್ಯಂತ ಚುರುಕು ಬುದ್ಧಿ ಮತ್ತು ಹಗುರವಾದ ಕಣ್ಗಾವಲು ಡ್ರೋನ್‌ಗಳ ಪಟ್ಟಿಗೆ ಇವು ಸೇರಬಲ್ಲವು ಎಂದು ಡಿಆರ್‌ಡಿಒ ವಿಶ್ವಾಸ ವ್ಯಕ್ತಪಡಿಸಿದೆ. ಪೂರ್ವ ಲಡಾಖ್‌ನ ಅತೀ […]

Advertisement

Wordpress Social Share Plugin powered by Ultimatelysocial