ಸಬ್ಬಕ್ಕಿ ವಡೆ ಮಾಡುವ ವಿಧಾನ ಹೇಗೆ?

ಬೇಕಾಗುವ ಪದಾರ್ಥಗಳು

ಬೇಯಿಸಿದ ಆಲೂಗಡ್ಡೆ – 2-3

ಸಬ್ಬಕ್ಕಿ- 100 ಗ್ರಾಂ

ಹಸಿಮೆಣಸಿನಕಾಯಿ- ಸಣ್ಣಗೆ ಕತ್ತರಿಸಿದ್ದು 4

ಜೀರಿಗೆ-ಸ್ವಲ್ಪ

ಕೊತ್ತಂಬರಿ ಸೊಪ್ಪು- ಸಣ್ಣಗೆ ಕತ್ತರಿಸಿದ್ದು ಸ್ವಲ್ಪ

ಕಾಳು ಮೆಣಸಿನ ಪುಡಿ- ಸ್ವಲ್ಪ

ಉಪ್ಪು-ರುಚಿಗೆ ತಕ್ಕಷ್ಟು

ಕಡಲೆಕಾಯಿ ಬೀಜ- ಹುರಿದು ಪುಡಿ ತರಿತರಿಯಾಗಿ ಪುಡಿ ಮಾಡಿಕೊಂಡದ್ದು ಸ್ವಲ್ಪ

ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

ಮಾಡುವ ವಿಧಾನ..

ಒಂದು ಪಾತ್ರೆಯಲ್ಲಿ ಸಾಬಕ್ಕಿಯನ್ನು ಹಾಕಿ, ಪಿಷ್ಟ ಹೋಗುವ ತನಕ ಚೆನ್ನಾಗಿ ತೊಳೆಯೆಬೇಕು. ನಂತರ ಅದಕ್ಕೆ ನೀರನ್ನು ಹಾಕಿ 2 ಗಂಟೆಗಳ ಕಾಲ ನೆನೆಯಲು ಬಿಡಬೇಕು.

ಬೇಯಿಸಿಕೊಂಡ ಆಲೂಗಡ್ಡೆಯನ್ನು ತುರಿದುಕೊಳ್ಳಬೇಕು.

ಬಳಿಕ ಒಂದು ಪಾತ್ರೆಯಲ್ಲಿ ತುರಿದ ಆಲೂಗಡ್ಡೆ, ನೆನೆಸಿಟ್ಟುಕೊಂಡ ಸಬ್ಬಕ್ಕಿ. ಜೀರಿಗೆ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಕಾಯಿ, ಉಪ್ಪು, ಕಡಲೆಕಾಯಿ ಬೀಜದ ಪುಡಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಬೇಕು.

ನಂತರ ಅಂಗೈ ಮೇಲೆ ಎಣ್ಣೆಯನ್ನು ಹಚ್ಚಿಕೊಂಡು, ವಡೆಯ ಆಕಾರದಲ್ಲಿ ತಟ್ಟಿಕೊಳ್ಳಬೇಕು.ತಟ್ಟಿಕೊಂಡ ಸಬ್ಬಕ್ಕಿಯನ್ನು 5 ನಿಮಿಷ ಫ್ರಿಡ್ಜ್ನಲ್ಲಿ ಇರಿಸಿ ತಂಪಗೆ ಆಗಲು ಬಿಡಿ.

ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ, ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ಮೇಲೆ ವಡೆಯನ್ನು ಹಾಕಿ, ಕರಿಯಿರಿ.- ಎರಡು ಭಾಗದಲ್ಲಿ ಚೆನ್ನಾಗಿ ಬೆಂದು ಚಿನ್ನದ ಬಣ್ಣ ಬಂದ ಬಳಿಕ ತೆಗೆದರೆ ರುಚಿಕರವಾದ ಸಬ್ಬಕ್ಕಿ ವಡೆ ಸವಿಯಲು ಸಿದ್ಧ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Official Website For Sports Betting With Bdt 25,000 Bonus

Sun Jan 16 , 2022
Mostbet Register: Sports Betting & Online Casino Content Download The Mostbet Aviator Apk How To Delete A Mostbet Account? Mostbet Sportsbook Do Mobile Players Get Bonuses? Registration In The Mobile Application For Android And Ios Mostbet A Last Version For Android Other Aviator Apps Download Mostbet App For Ios Table […]

Advertisement

Wordpress Social Share Plugin powered by Ultimatelysocial