ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಕತ್ತರಿ

ತೈಲ ಮಾರುಕಟ್ಟೆ ಕಂಪನಿಗಳು ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆಯನ್ನು ಸತತ ಎರಡನೇ ತಿಂಗಳು ಸಹ ಏರಿಕೆ ಮಾಡಿವೆ. ಬೇರೆ ಬೇರೆ ವ್ಯಾಟ್ ದರಗಳಿಗೆ ಅನುಗುಣವಾಗಿ ಎಲ್‌ಪಿಜಿ ದರ ೧ ರೂಪಾಯಿಗಳಿಂದ ೪.೫೦ ರೂಪಾಯಿಗಳ ವರೆಗೆ ಏರಿಕೆಯಾಗಿದೆ.ಜುಲೈ ೧ರಿಂದ ಪರಿಷ್ಕೃತ ದರ ಜಾರಿಗೆ ಬಂದಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ೧೪.೨ ಕೆ.ಜಿ ಸಬ್ಸಿಡಿ ರಹಿತ ಎಲ್‌ಪಿಜಿ ದರ ೧ರೂಪಾಯಿ ಏರಿಕೆಯಾಗಿದ್ದರೆ, ಕೋಲ್ಕತ್ತಾದಲ್ಲಿ ೪.೫೦ರೂಪಾಯಿ ಏರಿಕೆಯಾಗಿದೆ. ಮುಂಬೈ ಹಾಗೂ ಚೆನ್ನೈ ಗಳಲ್ಲಿ ಅನುಕ್ರಮವಾಗಿ ೩.೫೦ ರೂಪಾಯಿ ಹಾಗೂ ೪ ರೂಪಾಯಿಗಳಷ್ಟು ಏರಿಕೆ ಕಂಡಿದೆ.ಪ್ರತಿ ಮನೆಗೆ ವಾರ್ಷಿಕ ೧೪.೨ ಕೆ.ಜಿಯ ೧೨ ಎಲ್ ಪಿಜಿ ಸಿಲೆಂಡರ್ ಗಳನ್ನು ಸರ್ಕಾರ ಸಬ್ಸಿಡಿ ದರದಲ್ಲಿ ನೀಡುತ್ತದೆ. ಹೆಚ್ಚುವರಿ ಸಿಲಿಂಡರ್ ಗಳನ್ನು ಮಾರುಕಟ್ಟೆ ದರದಲ್ಲಿ ಪಡೆಯಬೇಕಾಗುತ್ತದೆ. ಇದೇ ವೇಳೆ ಏವಿಯೇಷನ್ ಟರ್ಬೈನ್ ಇಂಧನ ದರವನ್ನೂ ತೈಲ ಕಂಪನಿಗಳು ಶೇ.೭.೫ ರಷ್ಟು ಏರಿಕೆ ಮಾಡಿವೆ.

Please follow and like us:

Leave a Reply

Your email address will not be published. Required fields are marked *

Next Post

ಟೆಲಿಮೆಡಿಸಿನ್ ಮೂಲಕ ಸೋಂಕಿತರಿಗೆ ಚಿಕಿತ್ಸೆ

Wed Jul 1 , 2020
ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕಿAತ, ಸೋಂಕಿತರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುವಂತ ಕೆಲಸವನ್ನು ಮಾಡಬೇಕು. ಟೆಲಿಮೆಡಿಸಿನ್ ಮೂಲಕವೂ ಸೋಂಕಿತರಿಗೆ ಚಿಕಿತ್ಸೆ ನೀಡುವ ಕ್ರಮವನ್ನು ಜಾರಿಗೆ ಮಾಡಲಾಗುತ್ತಿದೆ ಎಂದು ಸಿಎಂ ಬಿಎಸ್‌ವೈ ತಿಳಿಸಿದರು. ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ತಜ್ಞರ ಸಭೆಯನ್ನು ನಡೆಸಲಾಯಿತು. ಈಸಭೆಯಲ್ಲಿ ತಜ್ಞರು ಮೊದಲು ಸೋಂಕಿತರು, ಶಂಕಿತರಿಗೆ ಧೈರ್ಯ ತುಂಬುವAತ ಕೆಲಸ ಮಾಡಬೇಕು ಎಂಬುದಾಗಿ ಸಲಹೆ ಮಾಡಿದ್ದಾರೆ. ಅನೇಕ ತಜ್ಞರು […]

Advertisement

Wordpress Social Share Plugin powered by Ultimatelysocial