ಸಾಮಾಜಿಕ ಜಾಲತಾಣಗಳಿಗೆ ನೋಟಿಸ್

ನವದೆಹಲಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಪೋರ್ನ್ ವೆಬ್‌ಸೈಟ್‌ಗಳ ಮೂಲಕ ಮಕ್ಕಳು ಅಶ್ಲೀಲ ಚಿತ್ರಗಳ ವೀಕ್ಷಣೆ ಹೆಚ್ಚಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸುವಂತೆ ಗೂಗಲ್, ಟ್ವೀಟರ್ ಮತ್ತು ವಾಟ್ಸಾಪ್‌ಗಳಿಗೆ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ನೋಟಿಸ್ ನೀಡಿದೆ. ಕೊರೊನಾ ಸೋಂಕು ಸಂಬಂಧ ಭಾರತದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಹೀಗಾಗಿ ಅಶ್ಲೀಲ ಚಿತ್ರಗಳ ವೀಕ್ಷಣೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಭಾರತ ಸೇರಿದಂತೆ ವಿದೇಶಿ ಪೋರ್ನ್ ಸೈಟ್‌ಗಳ ಮೂಲಕ ಜನರು ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ಚಿತ್ರಗಳನ್ನು ನೋಡುವುದು ಅಧಿಕವಾಗಿದೆ. ಈ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ಆತಂಕ ವ್ಯಕ್ತಪಟಿಸಿದೆ. ಮಕ್ಕಳ ಅಶ್ಲೀಲ ಚಿತ್ರಗಳ ವಿಚಾರವಾಗಿ ನೀಡಿರುವ ನೋಟಿಸ್‌ಗೆ ಸಾಮಾಜಿಕ ಮಾಧ್ಯಮಗಳಾದ ಗೂಗಲ್, ಟ್ವಿಟರ್ ಮತ್ತು ವಾಟ್ಸಾಪ್ಗಳು ಏಪ್ರೀಲ್ ೩೦ರ ಒಳಗೆ ಪ್ರತಿಕ್ರಿಯಿಸಬೇಕೆಂದು ಸೂಚಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಪುರ್ನಬಳಕೆ ಪಿಪಿಇ ಕಿಟ್ ಅಭಿವೃದ್ಧಿ

Sun Apr 26 , 2020
ವಡೋದರಾ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಸೋಂಕು ತಗುಲುವ ರಿಸ್ಕ್ನಲ್ಲೇ ಕೆಲಸ ಮಾಡುವಂತಾಗಿದೆ. ಈಗಾಗಲೇ ದೇಶದ ಹಲವೆಡೆ ಪಿಪಿಇ ಕಿಟ್‌ಗಳು ಅಗತ್ಯ ಪ್ರಮಾಣದಲ್ಲಿ ಸಿಗುವುದು ಕಡಿಮೆಯಾಗಿದೆ. ಇದಕ್ಕೆ ಪರಿಹಾರವಾಗಿ ಈಗ ಶ್ಯೂರ್ ಸೇಫ್ಟಿ ಎಂಬ ಕಂಪನಿ ಮರುಬಳಕೆ ಮಾಡಲು ಸಾಧ್ಯವಾಗುವ ಪಿಪಿಇ ಕಿಟ್ ಅಭಿವೃದ್ಧಿಪಡಿಸಿದೆ. ಈ ವೇಳೆ ಪುರ್ನಬಳಕೆ ಮಾಡಲು ಸಾಧ್ಯವಾಗುವ ಪಿಪಿಇ ಕಿಟ್ ಅಭಿವೃದ್ಧಿಯಾಗಿರೋದ್ರಿಂದ ಇದು ವೈದ್ಯಕೀಯ ಸಿಬ್ಬಂದಿಗೆ ಅನುಕೂಲವಾಗಲಿದೆ. ಈ ಮಧ್ಯೆ ಕೆಲವೆಡೆ ವೈದ್ಯರು ಬಳಸಬೇಕಾದ […]

Advertisement

Wordpress Social Share Plugin powered by Ultimatelysocial