ಸಿಂಪಲ್ ‘ಮಸಾಜ್’ FOR FACE!

 

ಮುಖ ಅಂದವಾಗಿರೋದಿಕ್ಕೆ ಮಹಿಳೆಯರು ಏನೇನೋ ಪ್ರಯೋಗಗಳನ್ನು ಮಾಡ್ತಾರೆ. ಹೊಸದಾಗಿ ಬರೋ ಜಾಹೀರಾತಿಗೆ ಮರುಳಾಗಿ ಬ್ಯೂಟಿ ಪ್ರಾಡಕ್ಟ್ ಗಳನ್ನು ಅತ್ಯುತ್ಸಾಹದಿಂದ ಉಪಯೋಗಿಸುತ್ತಾರೆ. ಆದರೆ ಕೃತಕವಾಗಿರೋ ಈ ಸೌಂದರ್ಯ ಉತ್ಪನ್ನಗಳಿಗಿಂತ ನೈಸರ್ಗಿಕವಾಗಿಯೇ ನೀವು ಅಂದವಾಗಿ ಕಾಣಬಹುದು.

ಇದಕ್ಕೆ ನೀವು ಮಾಡಬೇಕಾದದ್ದು ಮುಖದ ವ್ಯಾಯಾಮವಷ್ಟೇ.

ಮೊದಲು ನಿಮ್ಮ ಮೊದಲ ಎರಡು ಕೈಬೆರಳುಗಳಿಂದ ಕಿವಿಯ ಕೆಳಗಿನ ಹಾಗೂ ಕತ್ತಿನ ಮೇಲ್ಭಾಗವನ್ನು ನಿಧಾನವಾಗಿ ಒತ್ತಿರಿ. ಇದರಿಂದ ಮುಖ ಹೆಚ್ಚು ತಾಜಾ ಆಗಿ ಕಾಣುತ್ತದೆ.

ನಿಮ್ಮ ಕೈಬೆರಳುಗಳನ್ನು ಒಟ್ಟಿಗೆ ಜೋಡಿಸಿ ಗದ್ದದ ಕೆಳಗಿನ ಭಾಗದಿಂದ ಗಂಟಲವರೆಗೂ ಮಸಾಜ್ ಮಾಡಿ.

ನಿಮ್ಮ ಹುಬ್ಬಿನ ಕೆಳಭಾಗಕ್ಕೆ ಹೆಬ್ಬೆರಳು ಹಾಗೂ ತೋರು ಬೆರಳುಗಳಿಂದ ನಿಧಾನಕ್ಕೆ ಚಿವುಟಿ. ಇದರಿಂದ ರಕ್ತಸಂಚಲನ ಚೆನ್ನಾಗಿ ಆಗುತ್ತದೆ.

ತೋರು ಬೆರಳು ಹಾಗೂ ಮಧ್ಯದ ಬೆರಳುಗಳ ಸಹಾಯದಿಂದ ಬಾಯಿಯ ಎರಡೂ ಪಕ್ಕ ಮಸಾಜ್ ಮಾಡಿ.

ಕೆನ್ನೆಯ ಮೇಲ್ಭಾಗಕ್ಕೆ ಬೆರಳುಗಳಿಂದ ವೃತ್ತಾಕಾರವಾಗಿ ಮಸಾಜ್ ಮಾಡಿ.

ತೋರು ಬೆರಳು ಹಾಗೂ ಮಧ್ಯ ಬೆರಳಿನ ಸಹಾಯದಿಂದ ಹಣೆಯ ಮಧ್ಯಭಾಗಕ್ಕೆ ಅಡ್ಡ ಮಸಾಜ್ ಮಾಡಿಕೊಳ್ಳಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾರವಾರ : ರಾಜ್ಯ ಸರ್ಕಾರವು ಪಿಂಚಣಿದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು,

Sat Apr 16 , 2022
  ಕಾರವಾರ : ರಾಜ್ಯ ಸರ್ಕಾರವು ಪಿಂಚಣಿದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಸರ್ಕಾರದ ಪಿಂಚಣಿ ಪ್ರಯೋಜನ ಪಡೆಯಲು ಇನ್ಮುಂದೆ 72 ಗಂಟೆಗಳಲ್ಲಿ ಪಿಂಚಣಿ ಪ್ರಮಾಣ ಪತ್ರ ಮನೆ ಬಾಗಿಲಿಗೆ ಬರಲಿದೆ. ಈ ಕುರಿತು ಮಾಹಿತಿ ನೀಡಿರುವ ಕಂದಾಯ ಸಚಿವ ಆರ್. ಅಶೋಕ್, ಸರ್ಕಾರದ ಪಿಂಚಣಿ ಯೋಜನೆಯ ಪ್ರಯೋಜನ ಪಡೆಯಲು ಇನ್ಮುಂದೆ ಕಚೇರಿಗಳಿಗೆ ಅಲೆದಾಡಬೇಕಿಲ್ಲ. ದೂರವಾಣಿ ಕರೆ ಮಾಡಿ ಹಲೋ ಎಂದು ಎರಡು ದಾಖಲೆಗಳ ನಂಬರ್ ಗಳನ್ನು ಕೊಟ್ಟರೆ ಸಾಕು, 72 […]

Advertisement

Wordpress Social Share Plugin powered by Ultimatelysocial