ಸಿನಿಮಾ ತಾರೆಯರು ರಾಜಕೀಯಕ್ಕೆ ಪ್ರವೇಶ

ಬೆಂಗಳೂರು: ಸಿನಿಮಾ ನಟ,ನಟಿಯರು ಅಂದ್ರೆನೆ ಒಂಥರಾ ಕ್ರೇಜ್. ಅವರು ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ರೆ ಹೇಗಿರುತ್ತೆ. ೨೦೨೦ರ ಪರಿಷತ್ ಸದಸ್ಯರ ಸ್ಥಾನಕ್ಕೆ ನಾಮನಿರ್ದೇಶಿತ ಸದಸ್ಯರಾಗಲು ಚಲನಚಿತ್ರ ರಂಗದ ಕೋಟಾದಡಿಯಲ್ಲಿ ೪ ಜನರ ನಡುವೆ ಪೈಪೋಟಿ ಇದೆ ಎನ್ನಲಾಗುತ್ತದೆ. ಬಿಜೆಪಿಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡು, ತಮ್ಮದೇ ಶೈಲಿಯಲ್ಲಿ ಪಕ್ಷ ಸಂಘಟನೆ ಮಾಡುತ್ತಾ ಬರುತ್ತಿರುವ ಆ ನಾಲ್ವರು ಯಾರು ಎಂಬುದನ್ನು ನೋಡುವುದಾದರೆ ನಟ ಜಗ್ಗೇಶ್, ನಟಿಯರಾದ ತಾರಾ, ಅನುರಾಧ, ಶೃತಿ ಮತ್ತು ಮಾಳವಿಕ ಅವಿನಾಶ್ ರೇಸ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ.
ಜಗ್ಗೇಶ್ ಅವರು ಸ್ಯಾಂಡಲ್‌ವುಡ್ ಹಿರಿಯ ನಟ, ಜೊತೆಗೆ ರಾಜಕಾರಣಿಯೂ ಹೌದು. ತುರುವೇಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿAದ ಸ್ಪರ್ಧಿಸಿ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿ, ಈಗ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿಯತ್ತ ಮುಖಮಾಡಿದ್ದಾರೆ. ವಿಧಾನಪರಿಷತ್ ಸದಸ್ಯರಾಗಿ ಒಂದು ಬಾರಿ ೬ ರ‍್ಷ ಪೂರೈಸಿದ್ದಾರೆ. ಇನ್ನು ವಿಧಾನಪರಿಷತ್ ಸದಸ್ಯರಾಗಿದ್ದ ಅವಧಿಯಲ್ಲೇ ಕೆಎಸ್ರ‍್ಟಿಸಿ ನಿಗಮದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇನ್ನು ಲಿಸ್ಟ್ನಲ್ಲಿರುವ ತಾರಾ, ಅನುರಾಧ ಅವರು ಕೂಡ ಒಂದು ಬಾರಿ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಒಂದು ಬಾರಿ ಚಲನಚಿತ್ರ ಆಕಾಡೆಮಿಯ ಅಧ್ಯಕ್ಷರಾಗಿ ಮತ್ತು ಒಂದು ಬಾರಿ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಇದೆ.
ಶ್ರುತಿ ಕೂಡ ೨೦೦೬ ರಲ್ಲಿ ಪಕ್ಷಕ್ಕೆ ಸರ‍್ಪಡೆಯಾಗಿ ಕಳೆದ ೧೪ ರ‍್ಷಗಳಿಂದ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ೨೦೦೮, ೨೦೧೩ ಮತ್ತು ೨೦೧೮ ರ ವಿಧಾನಸಭಾ ಚುನಾವಣೆಗಳಲ್ಲಿ, ೨೦೦೯, ೨೦೧೪ ಹಾಗೂ ೨೦೧೯ ರ ಲೋಕಸಭಾ ಚುನಾವಣೆಗಳಲ್ಲಿ ಸ್ಟಾರ್ ಪ್ರಚಾರಕಿಯಾಗಿದ್ದರು. ಒಂದು ಬಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿಗಮದ ಅಧ್ಯಕ್ಷೆಯಾಗಿ ಕರ‍್ಯನರ‍್ವಹಿಸಿರುವ ಶ್ರುತಿ, ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿ ಕೆಳಗಿಳಿದಿದ್ದಾರೆ ಸದ್ಯ ಅವರು ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆಯಾಗಿದ್ದಾರೆ
ಇನ್ನು ಮಾಳವಿಕಾ ಕೂಡ ಪಕ್ಷದಲ್ಲಿ ವಕ್ತಾರೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಕೊರೊನಾ ಟಾಸ್ಕ್ ಪೋರ್ಸ್ನ ಅಧ್ಯಕ್ಷೆಯಾಗಿದ್ದಾರೆ. ಜೂನ್‌ನಲ್ಲಿ ಖಾಲಿಯಾಗುವ ಪರಿಷತ್ ಸದಸ್ಯ ಸ್ಥಾನಕ್ಕೆ ನೀವು ಆಕಾಂಕ್ಷಿಯೇ ಎಂದು ಕೆಳಿದ್ರೆ, ಅದಕ್ಕೆ ಇನ್ನು ಸಮಯವಿದೆ. ಸದ್ಯ ಟಾಸ್ಕ್ ಪೋರ್ಸ್ನಲ್ಲಿ ಹೆಚ್ಚಿನ ಕೆಲಸವಿರುವ ಕಾರಣ, ಪಕ್ಷ ಕೊಟ್ಟಿರುವ ಜವಾಬ್ದರಿಯನ್ನು ನಿಭಾಯಿಸುತ್ತೇನೆ ಎನ್ನುತ್ತಾರೆ. ಒಟ್ಟಿನಲ್ಲಿ ಜೂನ್‌ನಲ್ಲಿ ಪರಿಷತ್ ನಾಮನಿರ್ದೇಶಿತ ಸ್ಥಾನಕ್ಕೆ ಚಲನಚಿತ್ರ ರಂಗದಿAದ ನಾಲ್ವರು ರೇಸ್‌ನಲ್ಲಿದ್ದು, ಅದೃಷ್ಠ ಯಾರ ಮನೆ ಕದ ತಟ್ಟಲಿದೆ ಎಂಬುದು ಕುತೂಹಲ ಕೆರಳಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಸಿನಿ ಕಾಮಿಕರಿಗೆ ಸಹಾಯ ಹಸ್ತ ಚಾಚಿದ ಆಲ್ ಇಂಡಿಯನ್ ಫಿಲಂ ಮೇಕರ್ಸ್ ಅಸೋಶಿಯೇಷನ್ ಸಂಸ್ಥೆ

Fri May 1 , 2020
ಬೆಂಗಳೂರು: ಕೊರೊನಾ ಲಾಕ್‌ಡೌನ್‌ನಿಂದ ಚಿತ್ರೋದ್ಯಮದ ನಟ, ನಟಿಯರು ಮನೆಯಲ್ಲಿ ಸಿಲ್‌ಡೌನ್ ಆಗಿದ್ದಾರೆ. ಹೀಗಾಗಿಯೇ ಆಲ್ ಇಂಡಿಯನ್ ಫಿಲಂ ಮೇಕರ್ಸ್ ಅಸೋಶಿಯೇಷನ್ ಸಂಸ್ಥೆಯ ವತಿಯಿಂದ ಚಲನಚಿತ್ರ ಕಲಾವಿದರು ಮತ್ತು ಸಿನಿಮಾ ತಾಂತ್ರಿಕ ವರ್ಗದ ಸಿನಿ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಿಸಲಾಯಿತು.  ಕೊರೊನಾ ಎಂಬ ವೈರಸ್‌ನಿಂದ ನಗರಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿ ಸಿನಿರಂಗ ಸ್ತಬ್ಧವಾಗಿದೆ. ಹಾಗಾಗಿ ಹಸಿದ ಕಲಾವಿದರಿಗೆ ಆಹಾರ ವಿತರಣೆ ಮಾಡುತ್ತಿದೆ. ಈಗಾಗಲೇ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕಲಾವಿದರಿಗೆ ಶಿವರಾಜ್ ಮುತ್ತಣ್ಣವರ್ […]

Advertisement

Wordpress Social Share Plugin powered by Ultimatelysocial