ಸಿಸೋಡಿಯಾ ವಿರುದ್ಧ ಸಿಬಿಐ ತನಿಖೆ ನಡೆಸಲು ಒಪ್ಪಿಗೆ

ವದೆಹಲಿ, ಫೆಬ್ರವರಿ 22; ನವದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಕೇಂದ್ರ ಗೃಹ ಇಲಾಖೆ ಸಂಕಷ್ಟ ತಂದಿದೆ.

ಸಿಸೋಡಿಯಾ ವಿರುದ್ಧ ಸಿಬಿಐ ತನಿಖೆ ನಡೆಸಲು ಒಪ್ಪಿಗೆ ಕೊಡಲಾಗಿದೆ.

ಫೀಡ್‌ ಬ್ಯಾಂಕ್ ಯುನಿಟ್ ಬೇಹುಗಾರಿಕಾ ಪ್ರಕರಣದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ಕೊಟ್ಟಿದೆ. ಈ ಮೂಲಕ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವಿನ ಜಟಾಪಟಿ ಮತ್ತೆ ಆರಂಭವಾಗುವ ನಿರೀಕ್ಷೆ ಇದೆ.

ದೆಹಲಿ ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಈಗಾಗಲೇ ಸಿಬಿಐ ಮನೀಶ್ ಸಿಸೋಡಿಯಾ ಮನೆ ಮೇಲೆ ದಾಳಿ ಮಾಡಿತ್ತು. ಅವರಿಗೆ ಸೇರಿದ ಬ್ಯಾಂಕ್ ಲಾಕರ್‌ಗಳನ್ನು ಶೋಧ ನಡೆಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಮತ್ತೊಂದು ಪ್ರಕರಣದ ವಿಚಾರಣೆಗೆ ಒಪ್ಪಿಗೆ ನೀಡಲಾಗಿದೆ.

ಏನಿದು ಆರೋಪ? 2015ರಲ್ಲಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿತು. ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾದರು. ಪಕ್ಷ ಅಧಿಕಾರಕ್ಕೆ ಬಂದ ಬಳಿಕ ರಾಜಕೀಯ ಮಾಹಿತಿ ಸಂಗ್ರಹಕ್ಕಾಗಿ ಘಟಕವೊಂದನ್ನು ಸ್ಥಾಪನೆ ಮಾಡಲಾಗಿತ್ತು. ಈ ಘಟಕಕ್ಕೆ ಮನೀಶ್ ಸಿಸೋಡಿಯಾ ಮುಖ್ಯಸ್ಥರಾಗಿದ್ದರು ಎಂದು ಸಿಬಿಐ ತನ್ನ ವರದಿಯಲ್ಲಿ ಹೇಳಿದೆ.

ಆಮ್ ಆದ್ಮಿ ಪಕ್ಷ ಮತ್ತು ದೆಹಲಿ ಸರ್ಕಾರ ಈ ಆರೋಪವನ್ನು ತಳ್ಳಿಹಾಕಿತ್ತು. ಇದು ಬಿಜೆಪಿ, ಕೇಂದ್ರ ಸರ್ಕಾರ ನಮ್ಮ ಸರ್ಕಾರದ ವಿರುದ್ಧ ಮಾಡುತ್ತಿರುವ ಷಡ್ಯಂತ್ರ ಎಂದು ಹೇಳಿತ್ತು. ಆದರೆ ಸಿಬಿಐ ಬೇಹುಗಾರಿಕೆ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ವಿರುದ್ಧ ತನಿಖೆ ನಡೆಸಲು ಒಪ್ಪಿಗೆ ನೀಡುವಂತೆ ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿತ್ತು.

ಸಿಬಿಐ ಮೊದಲು ತನ್ನ ವರದಿಯನ್ನು ದೆಹಲಿ ಲೆಫ್ಟಿನೆಂಟ್ ಗೌರ್ನರ್ ವಿ. ಕೆ. ಸಕ್ಸೇನಾಗೆ ಸಲ್ಲಿಕೆ ಮಾಡಿತ್ತು. ಇದಕ್ಕೆ ಒಪ್ಪಿಗೆ ನೀಡಿದ್ದ ಅವರು ಅಂತಿಮ ಒಪ್ಪಿಗೆಗಾಗಿ ಗೃಹ ಸಚಿವಾಲಯಕ್ಕೆ ರವಾನೆ ಮಾಡಿದ್ದರು. ಈಗ ಗೃಹ ಸಚಿವಾಲಯ ಸಹ ಸಿಬಿಐ ತನಿಖೆಗೆ ಒಪ್ಪಿಗೆ ಕೊಟ್ಟಿದೆ.

ಸೆಪ್ಟೆಂಬರ್ 29, 2015ರಲ್ಲಿ ಬೇಹುಗಾರಿಕಾ ಪ್ರತಿಕ್ರಿಯೆ ಘಟಕವನ್ನು ರಚನೆ ಮಾಡಲಾಗಿದೆ. ಮನೀಶ್ ಸಿಸೋಡಿಯಾ ನೇತೃತ್ವದ ಘಟಕ ನ್ಯಾಯಾಂಗ, ಶಾಸಕಾಂಗದ ಕಾನೂನು ಬದ್ಧತೆಯನ್ನು ಹೊಂದಿಲ್ಲ. ಆದರೆ ಇದು, ರಾಜಕಾರಣಿಗಳ ಮೇಲೆ ಬೇಹುಗಾರಿಕೆ ಮಾಡುತ್ತಿದೆ ಎಂಬುದು ಸಿಬಿಐ ಆರೋಪವಾಗಿದೆ.

ಗೃಹ ಸಚಿವಾಲಯ ಸಿಬಿಐ ತನಿಖೆಗೆ ಒಪ್ಪಿಗೆ ನೀಡಿದ ಬಳಿಕ ಮನೀಶ್ ಸಿಸೋಡಿಯಾ ಟ್ವೀಟ್ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. “ನಿಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲು ಮಾಡುವುದು ದುರ್ಬಲ ಮತ್ತು ಹೇಡಿತನದ ಸಂಕೇತವಾಗಿದೆ. ಆಮ್ ಆದ್ಮಿ ಪಕ್ಷ ಬೆಳೆದಂತೆ ನಮ್ಮ ಮೇಲೂ ಇನ್ನೂ ಹಲವು ಪ್ರಕರಣಗಳು ದಾಖಲಾಗುತ್ತವೆ” ಎಂದು ಹೇಳಿದ್ದಾರೆ.

ಎಎಪಿ ಪ್ರತಿಕ್ರಿಯೆ ಸಿಬಿಐ ವರದಿಯನ್ನು ಎಎಪಿ ಪಕ್ಷ ಹಿಂದೆಯೇ ತಳ್ಳಿ ಹಾಕಿತ್ತು. ದೆಹಲಿ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಲಾಗುತ್ತಿದೆ. ಈ ಹಿಂದೆ ಸಿಬಿಐ, ಇಡಿ ನಮ್ಮ ವಿರುದ್ಧ 163 ಪ್ರಕರಣ ದಾಖಲು ಮಾಡಿದ್ದಾರೆ. ಬಿಜೆಪಿಯ ಸೂಚನೆಯಂತೆ ದಾಖಲಿಸಿರುವ ಪ್ರಕರಣದಲ್ಲಿ ಒಂದನ್ನ ಸಹ ಸಾಬೀತು ಮಾಡಲು ಸಾಧ್ಯವಾಗಿಲ್ಲ ಎಂದು ಎಎಪಿ ಹೇಳಿತ್ತು.

134 ಪ್ರಕರಣಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಉಳಿದ ಪ್ರಕರಣದಲ್ಲಿಯೂ ಬಿಜೆಪಿಗೆ ಸಾಕ್ಷ್ಯ, ಪುರಾವೆ ಒದಗಿಸಲು ಸಾಧ್ಯವಾಗಿಲ್ಲ. ಈ ಎಲ್ಲಾ ಪ್ರಕರಣಗಳು ಸಹ ರಾಜಕೀಯ ಪ್ರೇರಿತವಾಗಿವೆ ಎಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅದಾನಿ ಕಂಪನಿಗಳ ಸಾಲದ ರೇಟಿಂಗ್‌ ಮಾಹಿತಿ ಕೇಳಿದ securities and exchange board of India

Wed Feb 22 , 2023
  ಮುಂಬಯಿ: ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಯು ಅದಾನಿ ಸಮೂಹದ ಕಂಪನಿಗಳ ಸಾಲಗಳ ರೇಟಿಂಗ್‌ (Rating companies) ಕುರಿತ ಮಾಹಿತಿಯನ್ನು ನಿರೀಕ್ಷಿಸಿದೆ. ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿಗಳು ರೇಟಿಂಗ್‌ ನೀಡುತ್ತವೆ. ಹೀಗಾಗಿ ರೇಟಿಂಗ್‌ ಏಜೆನ್ಸಿಗಳಿಂದ ಹೆಚ್ಚಿನ ಮಾಹಿತಿಯನ್ನು ಸೆಬಿ (securities and exchange board of India) ಕೋರಿದೆ. ಈ ವರದಿಗಳಲ್ಲಿ ಕಂಪನಿಯ ಸಾಲದ ವಿವರ, ಮುನ್ನೋಟ, ಸಂಭವನೀಯ ರೇಟಿಂಗ್‌ ಪರಿಷ್ಕರಣೆಯ ವಿವರಗಳು ಇರುತ್ತವೆ. ಷೇರುಗಳ ಇತ್ತೀಚಿನ ಭಾರಿ ಪತನದಿಂದ ಅದಾನಿ […]

Advertisement

Wordpress Social Share Plugin powered by Ultimatelysocial