ಸುಪ್ರೀಂ ನಿಂದ RBI ಗೆ ನೋಟಿಸ್

ಕೊರೊನಾ ಲಾಕ್‌ಡೌನ್ ಸಂಬಂಧ ಇಎಂಐ ಮುಂದೂಡಿಕೆಯ ಅವಧಿಯಲ್ಲಿ ಬಡ್ಡಿ ದರ ವಿಧಿಸುವ ಬ್ಯಾಂಕ್‌ಗಳ ನಿರ್ಧಾರ ಪ್ರಶ್ನಿಸಿದ್ದ ಅರ್ಜಿ ಸಂಬಂಧ, ಕೇಂದ್ರ ಸರಕಾರ ಹಾಗೂ ಆರ್‌ಬಿಐಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನೋಟಿಸ್‌ ನೀಡಿದೆ. ಬ್ಯಾಂಕ್‌ಗಳ ನಿರ್ಧಾರ ಪ್ರಶ್ನಿಸಿರುವ ಅರ್ಜಿದಾರರು ಇಎಂಐ ಮುಂದೂಡಿಕೆ ಅವಧಿಯಲ್ಲಿ ಬಡ್ಡಿ ಮನ್ನಾಕ್ಕೆ ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ ನಿವಾಸಿ ಗಜೇಂದ್ರ ಶರ್ಮಾ ಅವರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ಸುಪ್ರೀಂ ಕೋರ್ಟ್‌, ಕೇಂದ್ರ ಮತ್ತು ಆರ್‌ಬಿಐನಿಂದ ವಿವರಣೆ ಕೇಳಿದೆ. ಮುಂದಿನ ವಾರ ವಿಚಾರಣೆ ನಡೆಸುವುದಾಗಿ ಹೇಳಿದೆ.  ಗೃಹ, ವಾಹನ ಸೇರಿದಂತೆ ಎಲ್ಲಾ ಅವಧಿ ಸಾಲಗಳ ಇಎಂಐ ಪಾವತಿಯನ್ನು ಮೂರು ತಿಂಗಳು ಮುಂದೂಡುವ ಅವಕಾಶ ನೀಡುವುದಾಗಿ ಆರ್‌ಬಿಐ ಮಾರ್ಚ್‌ 27ರಂದು ಘೋಷಿಸಿತ್ತು. ಆದರೆ ಮತ್ತೆ 3 ತಿಂಗಳ ಮುಂದೂಡುವಿಕೆ ಅವಕಾಶವನ್ನು ಇತ್ತೀಚೆಗಷ್ಟೇ ವಿಸ್ತರಿಸಿದೆ.  ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಎಂಐ ಮುಂಡೂಡುವಿಕೆಗೆ ಒಟ್ಟು 6 ತಿಂಗಳ ಅವಕಾಶವಿದ್ದರೂ, ಈ ಅವಧಿಯಲ್ಲಿ ಬಡ್ಡಿ ಬೆಳೆಯುತ್ತಲೇ ಹೋಗುತ್ತದೆ. ಬಡ್ಡಿ ಬೆಳೆಯುವ ಕಾರಣ ಆರ್‌ಬಿಐನ ಉದ್ದೇಶ ಈಡೇರಿದಂತೆ ಆಗುವುದಿಲ್ಲ. ಬಡ್ಡಿ ಮುಂದುವರಿಕೆಯ ಪರಿಣಾಮ ಗ್ರಾಹಕರ ಮೇಲಿನ ಸಾಲದ ಹೊರೆ ಹೆಚ್ಚಲಿದೆ  ಎಂದು ದೂರಿನಲ್ಲಿ ಶರ್ಮಾ ಹೇಳಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಇಂಥದ್ದೇ ಅರ್ಜಿಯನ್ನು ತಳ್ಳಿ ಹಾಕಿದ್ದ ಸುಪ್ರೀಂ ಕೋರ್ಟ್‌, ಈಗ ಶರ್ಮಾ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡಿದೆ.

Please follow and like us:

Leave a Reply

Your email address will not be published. Required fields are marked *

Next Post

ರೇಷ್ಮೆ ಮಾಸ್ಕ್ ಪರಿಚಯಿಸಿದ ನವ ಜೋಡಿಗಳು

Wed May 27 , 2020
ಅಸ್ಸಾಂ: ರೇಷ್ಮೆ ಪಂಚೆ, ರೇಷ್ಮೆ ಸೀರೆ, ರೇಷ್ಮೆ ಶಲ್ಯ ನೋಡಿದ್ದ ಜನತೆಗೆ ಈಗ ರೇಷ್ಮೆ ಕುಸುರಿಯನ್ನು ಒಳಗೊಂಡ ಮಾಸ್ಕ್ ಪರಿಚಯವಾಗಿದೆ. ಅಸ್ಸಾಂನಲ್ಲಿ ನಡೆದ ಮದುವೆಯಲ್ಲಿ ವಧು-ವರರು ಸಾಂಪ್ರದಾಯಿಕ ರೇಷ್ಮೆ ಮಾಸ್ಕನ್ನು ಧರಿಸಿ ಗಮನ ಸೆಳೆದಿದ್ದಾರೆ. ಮದುವೆ ಫೋಟೋ, ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಜಾಲತಾಣಿಗರ ಮನಗೆದ್ದಿದೆ. ಕೊರೋನ ವೈರಸ್ ಹಿನ್ನೆಲೆ ಮಾಸ್ಕ್ ಧರಿಸುವುದು ಕಡ್ಡಾಯ, ಮದುವೆ ಸಮಾರಂಭದಲ್ಲಿ‌ ಮಾಸ್ಕ್ ವಧೂವರರ ಅಲಂಕಾರದ ಸೊಬಗನ್ನೇ ಅಧಿಕ ಗೊಳಿಸಿದೆ. ಅಸ್ಸಾಂನಲ್ಲಿ ನಡೆದ ಮದುವೆಯಲ್ಲಿ […]

Advertisement

Wordpress Social Share Plugin powered by Ultimatelysocial