ಸೈಕಲ್ ಮೇಲೆ ನವ ಜೋಡಿಗಳ ಸವಾರಿ

ಮೀರ್ ಪುರ್: ಕೊರೋನಾ ಲಾಕ್ ಡೌನ್ ದೇಶಾದ್ಯಂತ ಹಲವು ಸಂಕಷ್ಟಗಳನ್ನು ಸೃಷ್ಟಿಸಿದ್ದು, ಈ ಸಂಕಷ್ಟದ ನಡುವೆಯೇ ಉತ್ತರ ಪ್ರದೇಶದಲ್ಲಿ 23 ವರ್ಷದ ಯುವಕನೊಬ್ಬ ತಾನು 100 ಕಿ.ಮೀ. ಪ್ರಯಾಣಿಸಬೇಕಾದ ಅನಿವಾರ್ಯತೆ ಇದ್ದರೂ ಮದುವೆ ದಿನಾಂಕ ಬದಲಿಸದೇ ಒಬ್ಬಂಟಿಯಾಗಿ 100 ಕಿ.ಮೀ. ಸೈಕಲ್ ತುಳಿದು ತಾನು ಮದುವೆ ಯಾಗಬೇಕಾಗಿರುವ ಹುಡುಗಿಯ ಮನೆ ತಲುಪಿದ್ದಾನೆ. ಉತ್ತರ ಪ್ರದೇಶದ ಹಮೀರ್‌ಪುರ್ ಜಿಲ್ಲೆಯ ಪೌಥಿಯಾ ಗ್ರಾಮದ ಕಲ್ಕು ಪ್ರಜಾಪತಿ ಅವರು, ಏಪ್ರಿಲ್ 25 ರಂದು ತಮ್ಮ ಮದುವೆಗೆ ಜಿಲ್ಲಾ ಆಡಳಿತದ ಅನುಮತಿಗಾಗಿ ಕೊನೆಯ ಕ್ಷಣದವರೆಗೂ ಕಾಯುತ್ತಿದ್ದರು. ಆದರೆ ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರನ್ನು ಬಿಟ್ಟು ತಾನು ಒಬ್ಬನೇ ಸೈಕಲ್ ನಲ್ಲಿ ವಧು ರಿಂಕಿ ಇರುವ ನೆರೆಯ ಮಹೊಬ ಜಿಲ್ಲೆಯ ಪುಣಿಯಾ ಗ್ರಾಮಕ್ಕೆ ತೆರಳಲು ನಿರ್ಧರಿಸಿದ್ದಾನೆ.ಏಪ್ರಿಲ್ 25ರಂದು ನಾವು ಮದುವೆಯಾಗಲು ಪೊಲೀಸರು ಅನುಮತಿ ನೀಡಲಿಲ್ಲ. ಆದರೆ ನನಗೆ ಬೇರೆ ಆಯ್ಕೆ ಇರಲಿಲ್ಲ. ಒಬ್ಬನೇ ಸೈಕಲ್ ನಲ್ಲಿ ಪುಣಿಯಾ ಗ್ರಾಮಕ್ಕೆ ಹೋಗಿ ಮದುವೆಯಾದೆ ಎಂದು ವೃತ್ತಿಯಲ್ಲಿ ರೈತನಾಗಿರುವ ಪ್ರಜಾಪತಿ ಹೇಳಿದ್ದಾರೆ.ನಾಲ್ಕು ಐದು ತಿಂಗಳ ಹಿಂದೆಯೇ ಮದುವೆ ದಿನಾಂಕ ನಿಗದಿಯಾಗಿತ್ತು. ವಧುವಿನ ಕಡೆಯವರು ಫೋನ್ ಮೂಲಕ ವರನನ್ನು ಕಳುಹಿಸಿಕೊಡುವಂತೆ ತಿಳಿಸಿದ್ದರು. ಹೀಗಾಗಿ ಪ್ರಜಾಪತಿ ಸೈಕಲ್ ನಲ್ಲಿ ಹೋಗಿ ಮದುವೆಯಾಗಿ ಬಂದಿದ್ದಾರೆ ಎಂದು ಪ್ರಜಾಪತಿ ತಂದೆ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

150 ಕಿ.ಮೀ ನಡೆದು ಮೃತಪಟ್ಟ 28 ವರ್ಷದ ಕಾರ್ಮಿಕ..!

Fri May 1 , 2020
ನವದೆಹಲಿ: ಕರೋನವೈರಸ್ ಕೋವಿಡ್-19ಲಾಕ್‌ಡೌನ್‌ನಿಂದಾಗಿ ಸುಮಾರು 150 ಕಿ.ಮೀ ನಡೆದು ಬೆಂಗಳೂರಿನಿಂದ ಆಂಧ್ರಪ್ರದೇಶದ ತನ್ನ ಸ್ವಂತ ಹಳ್ಳಿಗೆ ತೆರಳಿದ್ದ 28 ವರ್ಷದ ವಲಸೆ ಕಟ್ಟಡ ನಿರ್ಮಾಣ ಕಾರ್ಮಿಕ, ಚಿತ್ತೂರಿನ ತನ್ನ ಹಳ್ಳಿಯ ಮಿತ್ತಪಲ್ಲೆಗೆ ತಲುಪುತ್ತಿದ್ದಂತೆಯೇ ಕುಸಿದು ಬಿದ್ದಿದ್ದಾನೆ.ದುರಂತವೆಂದರೆ,ಕೋವಿಡ್-19ಸೋಂಕು ಉಂಟಾಗುತ್ತದೆ ಎಂಬ ಭಯದಿಂದ, ಯಾರೂ ಅವನ ರಕ್ಷಣೆಗೆ ಬರಲಿಲ್ಲ ಎನ್ನಲಾಗಿದೆ. ಅವರ ಮರಣದ ನಂತರ, ಮಿತ್ತಪಲ್ಲೆಯ ಗ್ರಾಮಸ್ಥರು ಅವರ ಅಂತ್ಯಕ್ರಿಯೆಗಾಗಿ ಅವರ ದೇಹವನ್ನು ತಮ್ಮ ಮನೆಗೆ ಕೊಂಡೊಯ್ಯಲು ಅನುಮತಿಸಲಿಲ್ಲ. ಮೃತನನ್ನು ಹರಿಪ್ರಸಾದ್ (28) […]

Advertisement

Wordpress Social Share Plugin powered by Ultimatelysocial