ಸೌರವ್ ಗಂಗೂಲಿಗೆ ಹೋಂ ಕ್ವಾರಂಟೈನ್

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಸೌರವ್ ಹಿರಿಯ ಸಹೋದರ ಮತ್ತು ಬೆಂಗಾಲ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸ್ನೇಹಷೀಶ್ ಗಂಗೂಲಿಗೆ ಕೋವಿಡ್-೧೯ ಸೋಂಕು ತಾಗಿರುವುದು ದೃಢವಾದ ಹಿನ್ನಲೆಯಲ್ಲಿ ದಾದಾ ಗೆ ಹೋಂ ಕ್ವಾರಂಟೈನ್ ಇರಲು ಸೂಚಿಸಿಲಾಗಿದೆ. ಬಂಗಾಳದ ಮಾಜಿ ರಣಜಿ ಆಟಗಾರ ಸ್ನೇಹಷೀಶ್ ಗಂಗೂಲಿ ಅವರು ಕೋವಿಡ್-೧೯ ಸೋಂಕು ದೃಢವಾದ ಹಿನ್ನಲೆಯಲ್ಲಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಇದೀಗ ಕೋವಿಡ್ ಸೋಂಕು ದೃಢವಾಗಿದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ತಿಳಿಸಿದೆ. ಇತ್ತೀಚೆಗೆ ಮಾಧ್ಯಮದೊಂದಿಗೆ ಮಾತನಾಡಿದ್ದ ಸೌರವ್, ನನ್ನ ಸಹೋದರ ಪ್ರತಿ ದಿನ ತನ್ನ ಫಾಕ್ಟರಿಗೆ ಭೇಟಿ ನೀಡುತ್ತಾನೆ. ಇದರಿಂದ ಆತನಿಗೆ ಕೋವಿಡ್ ಅಪಾಯ ಹೆಚ್ಚು ಎಂದಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಸೌತಾಂಪ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯ

Thu Jul 16 , 2020
ಕಳೆದ ೩೨ ವರ್ಷಗಳಿಂದ, ಅಂದರೆ ೧೯೮೮ರ ಬಳಿಕ ಕೆರಿಬಿಯನ್ನರಿಗೆ ಆಂಗ್ಲರ ನೆಲದಲ್ಲಿ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ದೊಡ್ಡದೊಂದು ಕೊರಗು ಕಾಡುತ್ತಲೇ ಇತ್ತು ಇದೀಗ ಜಾಸನ್ ಹೋಲ್ಡರ್ ಪಡೆ ಇದನ್ನು ನೀಗಿಸಿಕೊಳ್ಳಲು ಮುಂದಾಗಿದೆ. ಹೌದು ಕೋವಿಡ್ ಕಾಲದ ಮೊದಲ ಸೌತಾಂಪ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆAಡ್ ತಂಡವನ್ನು ಪ್ರವಾಸಿ ವೆಸ್ಟ್ ಇಂಡೀಸ್ ೪ ವಿಕೆಟ್‌ಗಳಿಂದ ಹೆಡೆಮುರಿ ಕಟ್ಟಿದೆ. ಮೂರು ಪಂದ್ಯಗಳ ಟೆಸ್ಟ್ ಸರಯಲ್ಲಿ ೧-೦ ಮುನ್ನಡೆ ಸಾಧಿಸಿಕೊಂಡಿರುವ ವಿಂಡೀಸ್ […]

Advertisement

Wordpress Social Share Plugin powered by Ultimatelysocial