ಸ್ವತಃ ಹೋಂ ಕ್ವಾರಂಟೈನ್‌ನಲ್ಲಿ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಮಧುಮೇಹದಿಂದ ಬಳಲುತ್ತಿದ್ದು, ಇತ್ತೀಚೆಗೆ ಅವರು ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಹೀಗಾಗಿ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಸಂಪರ್ಕದಿಂದ ದೂರವಿರಲು ಸಿದ್ದರಾಮಯ್ಯ ಮೈಸೂರು ಸಮೀಪವಿರುವ ಫಾರ್ಮ್ ಹೌಸ್ ಗೆ ತೆರಳಿದ್ದಾರೆ. ತಮ್ಮ ಪುತ್ರ ಡಾ.ಯತೀಂದ್ರ ಅವರ ಸಲಹೆಯ ಮೇರೆಗೆ ಸಾರ್ವಜನಿಕ ಸಂಪರ್ಕದಿಂದ ದೂರ ಉಳಿದಿದ್ದಾರಷ್ಟೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಸಿದ್ದರಾಮಯ್ಯ ಸಕ್ರಿಯವಾಗಿದ್ದಾರೆ. ಕೊರೋನಾ ವಿರುದ್ಧ ಹೋರಾಡಲು ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕೈಗೊಂಡ ಕ್ರಮಗಳನ್ನು ತಿಳಿಯಲು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾಹಿತಿ ಪಡೆಯುತ್ತಿದ್ದಾರೆ. ಹಾಗೂ ಬೆಳಗ್ಗಿನ ಜಾವ ವಾಕಿಂಗ್ ನಿಂದ ದಿನ ಆರಂಭಿಸುವ ಸಿದ್ದರಾಮಯ್ಯ ತಮ್ಮ 10 ಎಕರೆ ವಿಸ್ತೀರ್ಣವಿರುವ ಫಾರ್ಮ್ ಹೌಸ್ ನಲ್ಲಿ ಯೋಗ ಮತ್ತು ಉಸಿರಾಟದ ವ್ಯಾಯಾಮ ಮಾಡುತ್ತಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾದಿಂದ ಮೃತಪಟ್ಟ ಟೊಯೊಟ ಕಾರ್ಮಿಕ

Tue Jul 7 , 2020
ರಾಮನಗರ ಜಿಲ್ಲೆ ಬಿಡದಿಯ ಟೊಯೊಟಾ ಕಾರು ಕಂಪನಿಯ ನೌಕರ ಕಳೆದ ಎರಡು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾನೆ. ಆತನ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಏಷ್ಯಾದ ದೊಡ್ಡ ಕಾರು ತಯಾರಿಕಾ ಕಂಪನಿಯಾದ ಟೊಯೊಟಾ ಕಾರ್ಖಾನೆಯಲ್ಲಿ ಕೊರೊನಾ ವೈರಸ್ ಭೀತಿ ಉಂಟಾಗಿದೆ. ಕೊರೊನಾ ವೈರಸ್ ಸೋಂಕಿಗೆ ಬಲಿಯಾದ ಟೊಯೊಟಾ ಕಾರ್ಮಿಕ ಬೆಂಗಳೂರಿನ ವಿಜಯನಗರದ ನಿವಾಸಿಯಾಗಿದ್ದು, ಮೃತನ ತಂದೆ ಕೂಡ ಕಳೆದ ಜುಲೈ 2 ರಂದು ಕೋವಿಡ್ […]

Advertisement

Wordpress Social Share Plugin powered by Ultimatelysocial