ಹತ್ತು  ಕಾರ್ಮಿಕರು ತಿನ್ನವ  ಅನ್ನವನ್ನು ಒಬ್ಬನೇ  ತಿನ್ನುತ್ತಿದ್ದ

ಪಟ್ನಾ:  ಊಟ ಇಲ್ಲದೇ ವಲಸೆ ಕಾರ್ಮಿಕರು  ಸತ್ತ ಸುದ್ದಿಗಳು ಸದ್ದು ಮಾಡುತ್ತಿರುವಾಗಲೇ ಬಿಹಾರದ ಕ್ವಾರಂಟೈನ್‌ ಕೇಂದ್ರದಲ್ಲಿ23 ವರ್ಷದ ಕಾರ್ಮಿಕನೊಬ್ಬ ಪ್ರತಿ ದಿನ ಬೆಳಗಿನ ಉಪಾಹಾರಕ್ಕೆ 40 ರೋಟಿ ಮತ್ತು ಮಧ್ಯಾಹ್ನ ಬರೋಬ್ಬರಿ 10 ಪ್ಲೇಟ್‌ ಅನ್ನ ಊಟ ಮಾಡುತ್ತಿರುವ ಸೋಜಿಗದ ಪ್ರಕರಣ ವರದಿಯಾಗಿದೆ. ರಾಜಸ್ಥಾನದಿಂದ ಮರು ವಲಸೆ ಬಂದು ಬಿಹಾರದ ಬಕ್ಸರ್‌ನ ಮಂಝ್ವಾರಿ ಕ್ವಾರಂಟೇನ್‌ ಕೇಂದ್ರದಲ್ಲಿಇರುವ ಅನುಪ್‌ ಓಝಾ ಅಧಿಕಾರಿಗಳನ್ನು ದಿಕ್ಕೆಡಿಸಿರುವ ಕಾರ್ಮಿಕ. ಓಝಾ ತಿನ್ನುವ ದೈತ್ಯ ಸ್ವರೂಪದ ಬಗ್ಗೆ ಕ್ವಾರಂಟೈನ್‌ ಕೇಂದ್ರದ ಅಧಿಕಾರಿಗಳು ತಿಳಿಸಿದಾಗ ಮೊದಲು ನಮಗೆ ನಂಬಿಕೆಯೇ ಬರಲಿಲ್ಲ. ಖುದ್ದು ನೋಡೋಣ ಎಂದು ಕೇಂದ್ರಕ್ಕೆ ಬಂದಾಗ ಆ ದಿನ ಒಂದೇ ಊಟಕ್ಕೆ 85 ರೋಟಿ ತಿಂದು ಮುಗಿಸಿದ. ಆಗ ನಮ್ಮ ಕಣ್ಣುಗಳನ್ನೇ ನಾವು ನಂಬಲು ಸಾಧ್ಯವಾಗಲಿಲ್ಲ. ಒಬ್ಬ ವ್ಯಕ್ತಿಗೆ ಅಷ್ಟೊಂದು ಸಂಖ್ಯೆಯ ರೊಟ್ಟಿ ಲಟ್ಟಿಸುವ ಶ್ರಮದಿಂದ ಅಡುಗೆ ಭಟ್ಟರು ಕೂಡ ಬಸವಳಿದಿದ್ದಾರೆ ಎಂದು ಬಿಡಿಒ ಎಕೆ ಸಿಂಗ್‌ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸಿಕ್ಕ ಬಿದ್ದ ಉಗ್ರ

Fri May 29 , 2020
ಉಗ್ರರು ದಾಳಿ ನಡೆಸಲು ಸಂಚುರೂಪಿಸಿದ್ದರು 60 ಕೆಜಿ ಸುಧಾರಿತ ಸ್ಪೋಟಕಗಳನ್ನು ತೆಗೆದುಕೊಂಡು ಹೋಗುತ್ತಿದ್ದ ವಾಹನವೊಂದನ್ನು ಭಾರತದ  ಭದ್ರತ ಪಡೆ ತಡೆದು ಅಡ್ಡಗಟ್ಟಿದ್ದರು ಆದರೆ ಕಾರಿನಲ್ಲಿ ಇದ್ದ ಉಗ್ರರು ಪರಾರಿಯಾಗಿದ್ದರು. ಈ ಉಗ್ರನನ್ನು ಜಮ್ಮು-ಕಾಶ್ಮೀರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇತನ್ನು ಶೋಪಿಯಾನಾ ಜಿಲ್ಲೆಯ ಹಿದಾಯತ್​ ಉಲ್ಲಾಹ್ ಮಲಿಕ್ ಎಂದು ತಿಳಿದು ಬಂದಿದೆ.ಕಳೆದ ವರ್ಷ ಉಗ್ರ ಸಂಘಟನೆಗೆ ಸೇರಿದ ಎಂದು ತಿಳಿದುಬಂದಿದೆ. ಕಳೆದ ವರ್ಷ ಪುಲ್ವಾಮಾದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದಂತೆಯೇ […]

Advertisement

Wordpress Social Share Plugin powered by Ultimatelysocial